My Blog List

Monday, December 29, 2008

ಭರ್ಜರಿ ಬೇಟೆ...

ಹಲ್ಲಿಯ ಬಾಯಲ್ಲಿ ಜಿರಳೆ...

ಇಂದು ಸಂಜೆ ಕಛೇರಿಯಿಂದ ಮನೆಗೆ ಬಂದು ಕೈ-ಕಾಲು-ಮುಖ ತೊಳೆಯಲು ಬಚ್ಚಲುಮನೆಗೆ ಹೋದಾಗ ಒಂದು ಜಿರಳೆಯು ಹಲ್ಲಿಯ ಬಾಯಿಗೆ ಸಿಕ್ಕಿಕೊಂಡಿತ್ತು.

ಹಲ್ಲಿಯು ದೊಡ್ಡ ಜಿರಳೆಯನ್ನು ನುಂಗಲಾರದೆ, ಸಿಕ್ಕ ಭೋಜನವನ್ನು ಬಿಡಲೂ ಆಗದಂಥ ಪರಿಸ್ಥಿತಿಯಲ್ಲಿತ್ತು.

ತಕ್ಷಣ ಕೋಣೆಗೆ ಬಂದು ಕ್ಯಾಮೆರಾ ತೆಗೆದುಕೊಂಡು ಬಚ್ಚಲುಮನೆಗೆ ಓಡಿದೆ. ಕ್ಯಾಮೆರಾದಲ್ಲಿ ಸೆರೆಹಿಡಿದ ದೃಶ್ಯ ಇಲ್ಲಿದೆ.

ಕೈ-ಕಾಲು-ಮುಖ ತೊಳೆದು ಅಮ್ಮ ಮಾಡಿದ್ದ ಅವಲಕ್ಕಿ ಒಗ್ಗರಣೆ ತಿಂದು, ಕಾಫಿ ಕುಡಿದು, ಕುತೂಹಲದಿಂದ ಜಿರಳೆಯ ಸ್ಥಿತಿ ಏನಾಗಿದೆಯೆಂದು ನೋಡಲು ಮತ್ತೆ

ಬಚ್ಚಲುಮನೆಗೆ ಹೋದಾಗ, ಜಿರಳೆಯು ತಪ್ಪಿಸಿಕೊಂಡಿತ್ತು.

ಹಲ್ಲಿಯು ಮೂಲೆಯಲ್ಲಿ "ಬಾಯಿಗೆ ಬಂದ ಜಿರಳೆ ಹೊಟ್ಟೆ ಸೇರಲಿಲ್ಲವೇ?" ಎಂದು ಯೋಚಿಸ್ತಿತ್ತು.


9 comments:

  1. ಆನಿಲ್,
    ಸಕ್ಕತ್ ಫೋಟೊ..!

    ReplyDelete
  2. ಶಿವು,
    ತುಂಬಾ ಧನ್ಯವಾದ...

    ನಿಮ್ಮ ಬ್ಲಾಗಿಗೆ ಬಿಡುವು ಮಾಡಿಕೊಂಡು ಬರುವೆ...

    ReplyDelete
  3. ಅನಿಲ್...

    ಭರ್ಜರಿ ಬೇಟೆ...
    ಫೋಟೊ ಲೆಖನ ಬಹಳ ಚೆನ್ನಾಗಿದೆ...

    ಅಭಿನಂದನೆಗಳು...

    ReplyDelete
  4. ಪ್ರಕಾಶ್,
    ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.

    ReplyDelete
  5. ಅನಿಲ್,

    ಒಳ್ಳೆಯ ಟೈಮಿಂಗ್

    --
    ಪಾಲ

    ReplyDelete
  6. ಅನಿಲ್,
    ಚಿತ್ರ ಚೆನ್ನಾಗಿದೆ. ಹೊಸ ವರುಷದ ಹಾರ್ದಿಕ ಶುಭಾಶಯಗಳು,ಹೊಸ ವರ್ಷದಲ್ಲಿ ನಿಮ್ಮ ಎಲ್ಲಾ ಕನಸುಗಳು ನನಸಾಗಿಸಲಿ ಎಂದು ಹಾರೈಸುತ್ತೇನೆ.

    ಬಾಲ.

    ReplyDelete
  7. ಬಾಲು,
    ತುಂಬಾ ಧನ್ಯವಾದ.

    ReplyDelete
  8. ಅಯ್ಯೋ,

    ನಾನು ಶೀರ್ಷಿಕೆ ನೋಡಿ ಕನ್ನಡದಲ್ಲಿ ಒಂದು "ಭರ್ಜರಿ ಭೇಟೆ" ಅಂತ ಚಲನಚಿತ್ರ ಇದೆ (ಶಂಕರ್ನಾಗ್, ಅಂಬರೀಶ್). ಅದು ಅಂತ ತಿಳ್ದಿದ್ದೆ. ಅದರಲ್ಲಿ ಒಂದು ಹಾಡು ಚೆನ್ನಾಗಿದೆ.

    ನೀವು ತೆಗೆದಿರೋ ಭಾವಚಿತ್ರ ಚೆನ್ನಾಗಿದೆ.

    ReplyDelete