My Blog List

Friday, July 10, 2009

ಆಂಫಿಥಿಯೇಟರ್

ಆಂಫಿಥಿಯೇಟರ್.

ಎಪಿಡೂರುಸ್ ಆಂಫಿಥಿಯೇಟರ್

ಪುರಾತನ ಕಾಲದಲ್ಲಿ ಗ್ರೀಕರು ನಾಟಕ, ಸಂಗೀತ ಕಲೆಗಳ ಪ್ರದರ್ಶನಕ್ಕಾಗಿ ಆಂಫಿಥಿಯೇಟರ್ ಎಂಬ ಬಯಲು ರಂಗಮಂದಿರವನ್ನು ಉಪಯೋಗಿಸುತ್ತಿದ್ದರು. ಪ್ರಾಚೀನ ಗ್ರೀಸಿನದು ಲೋಕ ಪ್ರಖ್ಯಾತವಾದ ನಾಗರಿಕತೆ. ಅನೇಕ ದಾರ್ಶನಿಕರು, ತರ್ಕ ಪಂಡಿತರು, ಖಗೋಳ ಶಾಸ್ತ್ರಜ್ಞರು, ಗಣಿತ ಶಾಸ್ತ್ರತಜ್ಞರುಗಳನ್ನು ಜಗತ್ತಿಗೆ ನೀಡಿದ ಸಂಸ್ಕೃತಿ. ಜಗತ್ತನ್ನು ಕುರಿತ ಕಾತರ, ಕುತೂಹಲ, ಪ್ರಜಾಪ್ರಭುತ್ವ, ತರ್ಕ, ಚಿಂತನೆ, ಜಿಜ್ಞಾಸೆ, ಕ್ರೀಡೆ - ಈ ಹಿನ್ನೆಲೆಯಲ್ಲಿ ಅಲ್ಲಿ ಕಲೆಗಳು ವಿಕಾಸಗೊಂಡವು. ಸಾಕ್ರಟಿಸ್, ಪ್ಲೇಟೋ, ಅರಿಸ್ಟಾಟಲ್, ಅರಿಸ್ಟೋಫೆನೀಸ್, ಡೆಮಾಸ್ತನೀಸ್, ಪೈಥಾಗರಸ್, ಮುಂತಾದ ಮಹನೀಯರು ಗ್ರೀಸಿನ ಮಣ್ಣಿನಲ್ಲಿ ಜನಿಸಿದರು.

ಪುರಾತನ ಅಥಿನಾಯ್(ಅಥೆನ್ಸ್)ಅಲ್ಲಿ ಗ್ರೀಕರ ಮಧು ಮತ್ತು ಹರ್ಷೋನ್ಮಾದ ದೇವತೆ ಡಯೋನಿಸಿಸ್ ಸ್ಮರಣಾರ್ಥ ನಿರ್ಮಿತವಾದ ಆಂಫಿ ಥಿಯೇಟರ್ ಪ್ರಾಚೀನ ಬಯಲು ರಂಗಮಂದಿರ. ಇದರ ನಿರ್ಮಾಣ ಕ್ರಿ. ಪೂ. ಸುಮಾರು ೭-೬ನೇ ಶತಮಾನ. ವೇದಿಕೆಯ ಬೆನ್ನು ಭಾಗವನ್ನು ಬಿಟ್ಟು ಮೂರು ಕಡೆ ಸೋಪಾನದಂತಹ ಆಸನ ಸಾಲುಗಳು, ರಂಗ ಮಂಚದಲ್ಲಿ ನಡೆಯುವ ದೃಶ್ಯ ಎಲ್ಲ ಕಡೆಗೂ ಕಾಣಿಸುವಂತೆ ದಿಬ್ಬದ ಸ್ಥಳಗಳಲ್ಲಿ ಆಸನಗಳು. ಸುಮಾರು ಎಂಬತ್ತು ಸಾವಿರ ಜನರು ಕುಳಿತು ನೋಡಲು ಅವಕಾಶವಾಗುವಂತೆ ಇದನ್ನು ನಿರ್ಮಿಸಲಾಗಿದೆ.

ಈ ರಂಗ ಮಂದಿರದಲ್ಲಿ ಪ್ರತಿವರ್ಷ ವಸಂತೋತ್ಸವ ನಡೆಯುತ್ತಿತ್ತು. ಅದಂತೂ ಭಾರೀ ಮೋಜಿನ ಉತ್ಸವ. ಪ್ರತಿವರ್ಷ ನಾಟಕ, ನಾಟ್ಯ, ಸಂಗೀತ ಮತ್ತು ಕ್ರೀಡಾ ಸ್ಪರ್ಧೆಗಳು ನಡೆಯುತ್ತಿದ್ದವು. ಕಲೆಗಾರರು, ಕ್ರೀಡಾ ಪಟುಗಳು ತಮ್ಮ ಸಾಮರ್ಥ್ಯ ತೋರಿಸಲು ವಸಂತೋತ್ಸವ ಒಳ್ಳೆಯ ಅವಕಾಶ ಒದಗಿಸುತ್ತಿದ್ದವು.
ಪ್ರಾಯಶಃ ದುರಂತ ನಾಟಕ ಸಹ ಗ್ರೀಸಿನದೇಕೊಡುಗೆ. ಎಸ್ಕಿಲಸ್, ಸೋಫೋಕ್ಲೀಸ್, ಯೂರಿಪಿಡೀಸ್ ಮುಂತಾದವರು ಪ್ರಸಿದ್ಧ ನಾಟಕಕಾರರು. ಒಲಿಂಪಿಕ್ ಪಂದ್ಯಾಟಗಳು ಸಹ ಗ್ರೀಕರು ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆ.

ಗ್ರೀಕ ದುರಂತ ನಾಟಕಗಳನ್ನು ಪ್ರದರ್ಶಿಸುತ್ತ ಬಂದಿದ್ದ ಎಪಿಡೂರುಸ್ ಆಂಫಿಥಿಯೇಟರಿನಲ್ಲಿ ಈಗಲೂ ಪ್ರತಿವರ್ಷ ನಾಟಕ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತದೆ. ಇದು ಭವ್ಯವಾದ ತೆರೆದ ರಂಗ ಮಂದಿರ. ಮೊದಲು ಮರದಲ್ಲಿ ನಿರ್ಮಿಸಲಾಗಿದ್ದ ಇದರ ಆಸನಗಳನ್ನು ಬದಲಾಯಿಸಿ, ಕಲ್ಲಿನಿಂದ ನಿರ್ಮಿಸಿದ ಆಸನಗಳನ್ನು ಜೋಡಿಸಲಾಗಿದೆ.

ಚಿತ್ರ ಕೃಪೆ:ಇಲ್ಲಿಂದ

3 comments:

  1. ಎಶ್ಟು ದೊಡ್ಡ ರಂಗಮಂದಿರ. ಅಬ್ಬಬ್ಬಾ. ಅಲ್ಲಿ ಕೂತು ನೋಡುವುದೇ ವಿಶಿಷ್ಟ ಅನುಭವ.

    ReplyDelete
  2. ಅನಿಲ್,

    ಅಂಫಿ ಥಿಯೇಟರ್ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಮಾಹಿತಿಯ ಜೊತೆಗೆ ಸೊಗಸಾದ ಫೋಟೋವನ್ನು ಹಾಕಿದ್ದೀರಿ..ಥ್ಯಾಂಕ್ಸ್...

    ReplyDelete
  3. ಮಲ್ಲಿಕಾರ್ಜುನ್,
    ಹೌದು, ತುಂಬಾ ದೊಡ್ಡದಾಗಿದೆ.
    ಮುಂಚೆ ಮರದ ಆಸನಗಳಿದ್ದವಂತೆ. ಆಚಿತ್ರ ಹುಡುಕಿದೆ, ಸಿಗಲಿಲ್ಲ.

    ಶಿವು,
    ತುಂಬಾ ಥ್ಯಾಂಕ್ಸ್.
    ಹೀಗೇ ಪ್ರೋತ್ಸಾಹಿಸುತ್ತಿರಿ.

    -ಅನಿಲ್

    ReplyDelete