ರಾಮನಾ ಭಕ್ತಿಯಲಿ ಪ್ರೀತಿಯನು ಕಂಡೆನು।
ಶ್ಯಾಮನ ಮಾತಿನಲಿ ತರ್ಕವನು ಕಂಡೆ॥
ಕಾಮನನು ಕೊಂದವನ ತ್ರಿನೇತ್ರವ ಕಂಡೆ।
ಈ ಮೂವರ ಪೂಜಿಸೊ - ಅನಿಕೇತನ॥ 33 ॥
ಹಾಲಿನಂತಹ ಬೆಳಕ ಚೆಲ್ಲಿರಲು ಚಂದಿರನು।
ತೇಲಿಬಂದಿದೆ ಗಾಳಿ ಬಲು ದೂರದಿಂದ॥
ಆಲಿಸಿಹೆನಿಂಪಾದ ಗೀತೆಯನು ಮಲಗುತ್ತ।
ಲಾಲಿಹಾಡಿಹುದಿರುಳು - ಅನಿಕೇತನ॥ 30 ॥