ಆಗ ಅಣ್ಣ (ಅಪ್ಪ) ಹಾಡು ಹೇಳಿ ನನ್ನನ್ನು ಮಲಗಿಸ್ತಿದ್ರಂತೆ.
ಲಾಲಿ ಹಾಡು ಅಂದ ಕೂಡಲೆ ನನಗೆ ನೆನಪಾಗುವುದು ಈ ಹಾಡು.
ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ
ಕಣ್ಣಲ್ಲಿ ಹುಣ್ಣಿಮೆ ತಂದವನ
ನಗುವಲ್ಲೇ ಮಲ್ಲಿಗೆ ಚೆಲ್ಲುವನಾ
ಚಲುವಲ್ಲೆ ತಾವರೆಯ ನಾಚಿಸುವನ
ಈ ಮನೆಯ ಬೆಳಕಾಗಿ ಬಂದವನ
ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ
ಮೇಲುಕೋಟೆಯ ಸ್ವಾಮಿ ಚೆಲುವರಾಯನ
ಬೇಲೂರು ಶ್ರೀ ಚೆನ್ನಕೇಶವನ
ಉಡುಪಿಯಲಿ ವಾಸಿಸುವ ಶ್ರೀ ಕೃಷ್ಣನ
ಶ್ರೀರಂಗಪಟ್ಟಣದಿ ಮಲಗಿದವನ
ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ
ಆಲದೆಲೆಯ ಮೇಲೆ ಮಲಗಿದವನ
ಹತ್ತವತಾರದ ಪರಮಾಥ್ಮನ
ಮತ್ತೆ ನಮಗಾಗಿಳೆಗೆ ಬಂದವನ
ಜಗವನ್ನೆ ತೂಗುವ ಜಗದೀಶನ
ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ
ಈಗಲೂ ಈ ಹಾಡು ಕೇಳಿದರೆ ನಿದ್ದೆ ಬರುತ್ತೆ. (ಸುಳ್ಳಲ್ಲ).
ಅಂದಹಾಗೆ, ನಿಮ್ಮ ಮೆಚ್ಚಿನ ಲಾಲಿ ಹಾಡು ಯಾವುದು ಅಂತ ಹೇಳ್ತೀರಾ?
-ಅನಿಲ್.
ಅನಿಲ್,
ReplyDeleteಸ್ವಾತಿಮುತ್ಯಂ ಎಂಬ ತೆಲುಗು ಚಿತ್ರದಲ್ಲಿ 'ಲಾಲಿ ಲಾಲಿ' ಎಂಬ ಹಾಡೊಂದಿದೆ, ಅದು ನನ್ನ ಮೆಚ್ಚಿನ ಲಾಲಿ ಹಾಡು.
ಅನಿಲ್,
ReplyDeleteನಿಮ್ಮ ಬಾಲ್ಯದ ನಿದ್ರೆ ನೆನಪು........
ನನ್ನ ಮೆಚ್ಚಿನ ಲಾಲಿ ಹಾಡು....ಕನ್ನಡ ಸ್ವಾತಿಮುತ್ತಿನ "ಲಾಲಿ ಲಾಲಿ" ಹಾಡು ಒಳ್ಳೆಯ ಸಂಗೀತ ಅದಕ್ಕಿಂತ ಉತ್ತಮ ಸಾಹಿತ್ಯವಿರುವಂಥಹದು ಅದು...
ಅನಿಲ್...
ReplyDeleteಈ ಹಾಡು ಚೆನ್ನಾಗಿದೆ...
ನನಗೆ ರಾಜಕುಮಾರ ಹಾಡಿದ.."ಲಾಲಿ ಲಾಲಿ ಸುಕುಮಾರಾ.." ಹಾಡು ಇಷ್ಟ..
ಹಾಗೆಯೆ...
"ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ.."
ಪುನೀತ್ ಹಾಡಿದ ಹಾಡು ನನ್ನ ಮಗನನ್ನು ಮಲಗಿಸಲು ಹಾಡುತ್ತಿದ್ದೆ...
ಮತ್ತೆ ಹಳೆಯದನ್ನೆಲ್ಲ ನೆನಪಿಸಿದ್ದಕ್ಕೆ
ಧನ್ಯವಾದಗಳು..
ಬಾಲ, ಶಿವು, ಪ್ರಕಾಶ್,
ReplyDeleteಪ್ರತಿಕ್ರಿಯೆಗೆ ತುಂಬಾ ಧನ್ಯವಾದ.
ಅನಿಲ್,
ReplyDeleteಈ ಹಾಡಿನ ಮೊದಲ ಚರಣ ನನಗೆ ಗೊತ್ತಿರಲಿಲ್ಲ.. ಹುಡುಕ್ತಾಯಿದ್ದೆ.. ಥ್ಯಾಂಕ್ಸ್ ಪೋಸ್ಟ್ ಮಾಡಿದಕ್ಕೆ..
ನನ್ನ ನೆಚ್ಚಿನ ಲಾಲಿ ಹಾಡು "ಜೋ ಜೋ ಲಾಲಿ ನಾ ಹಾಡುವೆ ಚಿನ್ನ ನಿನ್ನಾ ಮುದ್ದಾಡುವೆ..."
ರೂಪ
೧. ನನ್ನ ಮಗನಿಗೆ ನಮ್ಮ ಮಾವನವರು ಕೆಳಗಿನ ಹಾಡನ್ನು ಹೇಳಿ ತೊಟ್ಟಿಲನ್ನು ತೂಗುತ್ತಿದ್ದರು.
ReplyDeleteಹಾಡೊಂದ ಹಾಡುವೆ ನೀ ಕೇಳು ಮಗುವೆ
ಬರಿದಾದ ಮನಬೆಳಗಿ ನೀ ಎಂದು ಬರುವೆ
ಮೊದಲನೆ ಚರಣ ಬೇಕಂತಲೇ ಹಾಕಿಲ್ಲ).
ನಿನ್ನೊಂದು ನುಡಿಮುತ್ತು ಸವಿ ಜೇನಿನಂತೆ
ಆ ಸುಖದಿ ನಾ ಮರೆವೆ ಈ ಬಾಳಚಿಂತೆ
ಅದಕೇಳೊ ಸೌಭಾಗ್ಯ ಈ ತಾಯಿಗಿಲ್ಲ
ಇವಳಾಸೆ ಆಕಾಂಕ್ಷೆ ನೀನಾದೆ ಎಲ್ಲಾ
೨. ನಾನು ಮತ್ತೆ ನಮ್ಮತ್ತೆ ಕೆಳಗಿನ ಲಾಲಿಹಾಡು ಹೇಳಿ ನನ್ನ ಮಗನನ್ನು ಮಲಗಿಸುತ್ತಿದ್ವಿ.
ಲಾಲಿ ಲಾಲಿ ಲಾಲಿ ಲಾಲಿ
ಕತ್ತೆಯ ಮರಿಚೆಂದ
ಮುತ್ತಿನ ನುಡಿಚೆಂದ
ಮುತ್ತುಗದ ಹೂವು ಕಡುಚೆಂದ
ಕಂದಮ್ಮ ನಿನ್ನಾಟ ಚೆಂದ ನಮಗೆಲ್ಲಾ
ಮತ್ತೆ ಜ್ಞಾಪಿಸಿಕೊಂಡು ಪೂರ್ತಿ ಬರೀತೀನಿ.
NANNA NAANE KANDE CHELUVA HATTIRA KAREDE
ReplyDeleteKANDA CHELUVANU HAADINALI BAREDE
BAALA DUGUDAGALANU NAANU OMMELE TOREDE
SANTASAVE NAANAAGI HIGGI MEREDE