ಅಕ್ಕಮಹಾದೇವಿ (೧೧೩೦ - ೧೧೬೦): ಸಮಾಜಸಧಾರಣೆಯಲ್ಲಿ ಮಹಿಳೆಯ ಪಾತ್ರವು ಹಿರಿದಾದುದು. ಪುರಷಪ್ರಧಾನವಾದ ಸಮಾಜದಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ನಿಲ್ಲಬಲ್ಲರೆಂಬ ಪ್ರಜ್ಞೆಯನ್ನು ಸುಮಾರು ಎಂಟುನೂರು ವರ್ಷಗಳ ಹಿಂದೆಯೇ ಮೂಡಿಸಿದ ಕರ್ನಾಟಕದ ಪ್ರಪ್ರಥಮ ಮಹಿಳೆಯೆಂದರೆ ಅಕ್ಕಮಹಾದೇವಿ.
ಹನ್ನೆರಡನೆಯ ಶತಮಾನದಲ್ಲೇ ಇಂತಹ ಮಹಿಳಾ ಜಾಗೃತಿಯನ್ನು ಮೂಡಿಸಿದರು. ಸಂಸಾರವನ್ನು ತ್ಯಜಿಸಿ, ಚೆನ್ನಮಲ್ಲಿಕಾರ್ಜುನ ದೇವರೇ ತನ್ನ ಪತಿಯೆಂಬುದಾಗಿ ನಂಬಿದರು. ತಮ್ಮ ವೈರಾಗ್ಯದ ಮೂಲಕವೇ ಪುರುಷರೊಡನೆ ಹೋರಾಡಿ ಸಮಾಜೋದ್ಧಾರದ ಕಾರ್ಯದಲ್ಲಿ ನೆರವಾದರು ಈ ಶಿವಶರಣೆ. ತಮ್ಮ ಭಾವನೆಗಳನ್ನು ವಚನಗಳ ಮೂಲಕ ತಿಳಿಗನ್ನಡದಲ್ಲಿ ತಿಳಿಸಿದರು. ಲಿಂಗಭೇದವಿಲ್ಲದೆ, ಜಾತಿಭೇದವಿಲ್ಲದೆ ಪ್ರತಿಯೊಬ್ಬರೂ ಲೋಕವಿಚಾರಗಳನ್ನು ಅರಿಯುವಂತೆ ಮಾಡಿದರು.
ಉಡುತಡಿ ಗ್ರಾಮವಾಸಿಗಳಾದ ಮಹಾದೇವಿ ಪರಮಶಿವಭಕ್ತರಾಗಿದ್ದರು. ಶ್ರೀಶೈಲ ಚೆನ್ನಮಲ್ಲಿಕಾರ್ಜುನನೇ ಇವರ ಆರಾಧ್ಯದೈವವಾದನು. ಶಿವಭಕ್ತೆಯಾದ ಮಹಾದೇವಿಯು ಕೆಲವು ಷರತ್ತುಗಳನ್ನು ಹಾಕಿ ರಾಜ ಕೌಶಿಕನನ್ನು ಮದುವೆಯಾದರು. ಆಕೆಯ ಷರತ್ತುಗಳನ್ನು ರಾಜನು ಮುರಿಯಲು ಸಂಸಾರವನ್ನು ತ್ಯಜಿಸಿ ವಿರಾಗಿಯಾದರು. ಎಲ್ಲರಿಗೂ ಅಕ್ಕಳಾಗಿ ಅಕ್ಕಮಹಾದೇವಿ ಎನಿಸಿದರು. ಶಿವಶರಣರಾದ ಬಸವಣ್ಣನವರ ಸಮಕಾಲೀನರು ಇವರು.
ಸರ್ವಸಂಗ ಪರುತ್ಯಾಗಿಯಾಗಿ ಶಿವನನ್ನೇ ಪತಿಯೆಂದು ನಂಬಿ ಚೆನ್ನಮಲ್ಲಿಕಾರ್ಜುನ ಅಂಕಿತದೊಡನೆ ಅನೇಕ ವಚನಗಳನ್ನು ತಿಳಿಗನ್ನಡದಲ್ಲಿ ರಚಿಸಿ ಗಹನವಾದ ತತ್ವಗಳನ್ನು ಸಾಮಾನ್ಯ ಜನರಿಗೂ ತಲುಪಿಸಿದರು. ಶಿವಶರಣೆಯಾಗಿ ಅಕ್ಕನವರು ಅಂದಿನ ಸಮಾಜದಲ್ಲಿ ಸ್ತ್ರೀಯರಿಗೆ ಉನ್ನತಸ್ಥಾನವನ್ನು ಗಳಿಸಿಕೊಟ್ಟರು.
ಈ ಮಾಹಿತಿ ಕೃಪೆ: ಕರ್ನಾಟಕ ಸಂಗೀತ - ಪ್ರಾಥಮಿಕ ಹಂತ [ಜೂನಿಯರ್ ಗ್ರೇಡ್] ಪುಸ್ತಕ
its realy fantastic i saw your snaps, what ever you have written is execellent. i want to chat with you can i have ur e-mail ID
ReplyDeleteಪ್ರತಿಕ್ರಿಯೆಗೆ ಧನ್ಯವಾದಗಳು...
ReplyDeleteಇನ್ನಷ್ಟು ಬರೀರಿ ವಚನಕಾರರ ಬಗ್ಗೆ .. ಚೆನ್ನಾಗಿದೆ .
ReplyDeleteಸಂತೋಷ್,
ReplyDeleteಪ್ರತಿಕ್ರಿಯೆಗೆ ಧನ್ಯವಾದಗಳು...
ಬಿಡುವು ಮಾಡಿಕೊಂಡು ಬರೆಯುತ್ತೇನೆ...
ನಿಮ್ಮ ಪ್ರೋತ್ಸಾಹ ಅಗತ್ಯ...