My Blog List

Thursday, November 05, 2009

ಕನಕದಾಸರು

ಕನಕದಾಸರು (ಕ್ರಿ. ಶ. ೧೪೮೬-೧೫೮೦) 




ವ್ಯಾಸರಾಯರ ಶಿಷ್ಯರಾಗಿ, ಪುರಂದರದಾಸರ ಸಮಕಾಲೀನರಾಗಿದ್ದವರು ಶ್ರೀ ಕನಕದಾಸರು. ಆಧ್ಯಾತ್ಮಿಕ ತತ್ವಗಳನ್ನು, ಆಡುಭಾಷೆಯಲ್ಲಿ, ಒಗಟುಗಳ ರೂಪದಲ್ಲಿ,  ಸಾಮಾನ್ಯ ಜನರಿಗೆ ನಿಡಿದರು. ಭಗವಂತನ ಧ್ಯಾನವನ್ನು ಎಲ್ಲರೂ ಮಾಡಿ, ದೈವವನ್ನು ಒಲಿಕೊಳ್ಳಬಹುದೆಂಬ ವಿಷಯವನ್ನು ಮಾಡಿ ತೋರಿಸಿ, ಹಾಡಿ ಕೇಳಿಸಿದರು. ಹೀಗೆ ಸಮಾಜ ಸುಧಾರಕರಾಗಿ, ಮೇಲು ಕೀಳೆಂಬ ಭಾವವನ್ನು ಮೆಟ್ಟಿ, ಭಾವಕ್ಯತೆಯನ್ನು ಐನೂರು ವರುಷಗಳ ಹಿಂದೆಯೇ ಸಾಧಿಸಿದವರು ಕನಕದಾಸರು.

ಕನಕದಾಸರು ಬೀರೇಗೌಡ ಮತ್ತು ಬಚ್ಚಮ್ಮ ದಂಪತಿಗಳಿಗೆ ಜನಿಸಿದರು. ಇವರ ಸ್ಥಳ ಧಾರವಾಡ ಜಿಲ್ಲೆಯ 'ಬಾಡ' ಎಂಬ ಗ್ರಾಮ. ಇವರು ತಿರುಪತಿಯ ತಿಮ್ಮಪ್ಪನ ಒಕ್ಕಲಿನವರಾದ್ದರಿಂದ ತಿಮ್ಮಪ್ಪನೆಂದೇ ಇವರಿಗೆ ನಾಮಕರಣವಾಯಿತು. ತಂದೆಯಂತೆಯೇ ಆ ಗ್ರಾಮದ ನಾಯಕರಾದರು. ಒಮ್ಮೆ ಕಾಗಿನೆಲೆಯಲ್ಲಿದ್ದಾಗ ಇವರಿಗೆ ಅಪಾರವಾದ ಚಿನ್ನದ ನಾಣ್ಯಗಳು ದೊರಕಿದವು. ಆ ಹಣವನ್ನು ಆ ಗ್ರಾಮದ ಕೇಶವನ ದೇವಾಲಯದ ಜೀರ್ಣೋದ್ಧಾರಕ್ಕೆ ವಿನಿಯೋಗಿಸಿದರು. ಹೀಗೆ ದ್ರವ್ಯವು ದೊರಕಿದ್ದರಿಂದ ತಿಮ್ಮಪ್ಪನನ್ನು ಕನಕನೆಂದು ಕರೆದರು. ಈತನೇ ಕನಕನಾಯಕನಾಗಿ ಮುಂದೆ ಕನಕದಾಸರಾದರು. ವ್ಯಾಸರಾಯ ಸ್ವಾಮಿಗಳಿಂದ ದೀಕ್ಷೆಯನ್ನು ಪಡೆದರು.

ವಾಗ್ಗೇಯಕಾರರಾಗಿ ಆದಿಕೇಶವ, ಬಾಡವಾದಿ ಕೇಶವ, ಕಾಗಿನೆಲೆಯಾದಿ ಕೇಶವನೆಂಬ ಅಂಕಿತದೊಡನೆ ಅನೇಕ ಕೀರ್ತನೆಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಮುಂಡಿಗೆಗಳನ್ನು ರಚಿಸಿದ್ದಾರೆ. ಮುಂಡಿಗೆಗಳು ದ್ವಂದ್ವಾರ್ಥವನ್ನುಳ್ಳ ಕನ್ನಡ ಕೀರ್ತನೆಗಳು. ಉತ್ತಮ ಕಾವ್ಯಗಳನ್ನು ರಚಿಸಿದ್ದಾರೆ. ಹರಿಭಕ್ತಿಸಾರ, ಮೋಹನ ತರಂಗಿಣಿ, ರಾಮಧ್ಯಾನಚರಿತೆ, ನಳ ಚರಿತ್ರೆ ಮುಂತಾದ ಕಾವ್ಯಗಳನ್ನು ಷಟ್ಪದಿಯಲ್ಲಿ ರಚಿಸಿದ್ದಾರೆ.

ಸಮಾಜೋದ್ಧಾರಕರಾಗಿ ಜನ ಸಾಮಾನ್ಯರಲ್ಲಿ ಸೌಹಾರ್ದವನ್ನು ಬೆಳೆಸಿ, ಸಮಾನತೆಯನ್ನು ಹೊಂದಲು ಶ್ರಮಿಸಿದ್ದಾರೆ. ತಮ್ಮ ಕೀರ್ತನೆಗಳ ಮೂಲಕ ತತ್ವ ಪ್ರಚಾರ ಮಾಡಿ, ಎಲ್ಲರನ್ನೂ ಭಗವದ್ಭಕ್ತರಾಗುವಂತೆ ಮಾಡಿ, ಲೋಕಕಲ್ಯಾಣವೆಸಗಿದ್ದಾರೆ. ಇವರ ಕೀರ್ತನೆಗಳು ಇಂದಿಗೂ ಜನಮನದಲ್ಲಿ ಮೊಳಗುತ್ತಿವೆ.

ಚಿತ್ರ ಕೃಪೆ: ವಿಕಿಪೀಡಿಯಾ

7 comments:

  1. ಅನಿಲ್.......
    ಲೇಖನ ಚೆನ್ನಾಗಿದೆ.... ಕನಕದಾಸರ ಒಂದೆರಡು ರಚನೆಗಳಿಗೆ ಕೊಂಡಿ ಹಾಕಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು.

    ಶ್ಯಾಮಲ

    ReplyDelete
  2. http://bhakthigeetha.blogspot.com/

    ಇಲ್ಲಿ ಕನಕದಾಸರ ಅನೇಕ ರಚನೆಗಳ ಸಾಹಿತ್ಯ ಮತ್ತು ಕೊಂಡಿ ಇದೆ. ನೋಡಿ...

    ಶ್ಯಾಮಲ

    ReplyDelete
  3. ಅನಿಲ್,
    ಕನಕದಾಸರ ಬಗೆಗಿನ ಲೇಖನ ಚೆನ್ನಾಗಿದೆ, ಬಹಳಷ್ಟು ವಿಷಯಗಳನ್ನು ತಿಳಿಸಿದ್ದಿರಿ
    ಒಳ್ಳೆಯ ಬರಹ

    ReplyDelete
  4. ಅನಿಲ್,

    ಕನಕದಾಸರು ನಮ್ಮ ನಾಡಿನ ಭಕ್ತಿರಸದ ದಾಸರು. ಅವರ ಬಗ್ಗೆ ಚೆನ್ನಾಗಿ ಬರೆದಿದ್ದೀರಿ...ಅನೇಕ ವಿಚಾರಗಳನ್ನು ತಿಳಿದಂತಾಯಿತು.

    ReplyDelete
  5. ಅನಿಲ್ ನಿಮ್ಮ ಸರಣಿಯಲ್ಲಿ ಇತರ ದಾಸ-ಸಂತರ ಬಗ್ಗೆ ತಿಳಿಸಿ..ಕನಕದಾಸರ ಕೀರ್ತನೆಗಳ ಕೊಂಡಿ ಕೊಟ್ಟ ಶ್ಯಾಮಲಾರಿಗೆ ಧನ್ಯವಾದ..ಮತ್ತು ನಿಮ್ಮ ಈ ಮಾಹಿತಿಯುಕ್ತ ಲೇಖನಕ್ಕೆ ಸಹಾ..

    ReplyDelete
  6. ಧನ್ಯವಾದಗಳು ಅನಿಲ್ ಸರ್, ಅಂತಹ ಮಹಾತ್ಮರ ಬಗ್ಗೆ ಬಹಳಷ್ಟು ತಿಳಿಸಿಕೊಟ್ಟಿದ್ದೀರಿ. ಅವರ ಬಗೆಗಿನ ಇನ್ನಷ್ಟು ವಿಚಾರಗಳು, ಗಾಯನಗಳು ಎಲ್ಲವೊ ಮೂಡಿಬರಲಿ.

    ReplyDelete
  7. ಎಲ್ಲರಿಗೂ ತುಂಬಾ ಧನ್ಯವಾದಗಳು..

    ಶ್ಯಾಮಲ ಅವರಿಗೆ ಡಬಲ್ ಥ್ಯಾಂಕ್ಸ್.

    -ಅನಿಲ್

    ReplyDelete