ಸಾಮಾನ್ಯವಾಗಿ ಜಿಗಣೆಗಳು ರಕ್ತ ಹೀರಿ ಬದುಕುವ ಕೀಟಗಳು.
ಈ ಜಿಗಣೆಗಳು ಸಾಮಾನ್ಯವಾಗಿ ಪಾಚಿ ಇರುವ ಕಡೆ ಹೆಚ್ಚಾಗಿ ಕಾಣಿಸುತ್ತದೆ. ಜಲಪಾತದ ಹತ್ತಿರದ ಬಂಡೆಗಳ ಮೇಲೆ ಹೆಚ್ಚಾಗಿ ಇವು ಇರುತ್ತವೆ.
ಇವು ಮನುಷ್ಯರ ರಕ್ತ ಮತ್ತು ಪ್ರಾಣಿಗಳ ಹೀರಿ ಬದುಕುತ್ತವೆ.
ಇದು ಸಾಮಾನ್ಯವಾಗಿ ಕಾಲಿಗೆ ಅಂಟಿಕೊಳ್ಳುತ್ತವೆ. ಇವು ಕಡಿಯುವುದು ತಿಳಿಯುವುದೇ ಇಲ್ಲ. ಕಡಿದ ನಂತರವೇ ರಕ್ತ ಹೀರಲು ಶುರು ಮಾಡುತ್ತವೆ. ರಕ್ತ ಹೀರುವಾಗ ಇದರ ಮೈ ದೊಡ್ಡದಾಗುತ್ತದೆ. ಹಾಗೇ ಇವು ತಮ್ಮ ದೇಹದ ತೂಕವನ್ನು ತಡೆಯಲಾರದೇ ಕೆಳಗೆ ಬೀಳುತ್ತವೆ.
ಇವು ಕಡಿದ ಭಾಗದಲ್ಲಿ ತುರಿಕೆಯುಂಟಾಗುತ್ತದೆ. ಸ್ವಲ್ಪ ಸಮಯದ ಬಳಿಕ ಸರಿಹೋಗುತ್ತದೆ.
ಈ ಜಿಗಣೆಗಳನ್ನು ಸಕ್ಕರೆ ಖಾಯಿಲೆಯಿಂದ ಉಂಟಾದ ಗ್ಯಾಂಗ್ರೀನ್‌ಅನ್ನು ತಡೆಯಲು ಬಳಸಿರುವುದನ್ನು ಎಲ್ಲೋ ನೋಡಿದ ನೆನಪು.
ಜಿಗಣೆಗಳ ಬಗ್ಗೆ ಇನ್ನಷ್ಟು ಮಾಹಿತಿಯಿದ್ದರೆ ಹಂಚಿಕೊಳ್ಳಿರಿ.
ಅನಿಲ್.....
ReplyDeleteಈ ಜಿಗಣೆ ಮಳೆಗಾಲದಲ್ಲಿ ನಮ್ಮಲ್ಲಿ ಕಾಣ ಸಿಗುತ್ತದೆ..
ಆದರೆ ಕಪ್ಪಗಿರುತ್ತದೆ(ಅಂತ ನೆನಪು)
ಇವು ನಮ್ಮನ್ನು ಕಚ್ಚಿದಾಗ ಸುಲಭವಾಗಿ ಬಿಡುವದಿಲ್ಲ..
ಒಮ್ಮೆ ನನ್ನ ಕಾಲಿಗೆ ಹತ್ತಿಕೊಂಡಾಗ..
ನನ್ನಣ್ಣ ಅದನ್ನು ಕತ್ತಿಯಿಂದ ಕತ್ತರಿಸಿದರೂ ಕಚ್ಚಿಹಿಡಿದ್ದಿದ್ದನ್ನು ಬಿಡಲಿಲ್ಲ...!
ಉಪಯುಕ್ತ ಲೇಖನ..
ಚಂದದ ಫೋಟೊದೊಡನೆ....
ಅಭಿನಂದನೆಗಳು...
ಅನಿಲ್,
ReplyDeleteಜಿಗಣೆ ಚಿತ್ರವನ್ನು ತುಂಬಾ ಚೆನ್ನಾಗಿ ತೆಗೆದಿದ್ದೀರಿ.. ಜೊತೆಗೆ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ...
ನಾನು ಟ್ರಕ್ಕಿಂಗ್ ಹೋದಾಗ ಅವುಗಳಿಂದ ರಕ್ತ ಹೀರಿಸಿಕೊಂಡಿದ್ದೇನೆ...ಧನ್ಯವಾದಗಳು
ಪ್ರಕಾಶ್,
ReplyDeleteಮೆಚ್ಚುಗೆಗೆ ತುಂಬಾ ಧನ್ಯವಾದಗಳು.
-ಅನಿಲ್
ಶಿವು,
ReplyDeleteಚಿತ್ರವನ್ನೂ, ಮಾಹಿತಿಯನ್ನೂ ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು.
-ಅನಿಲ್
ಜಿಗಣೆಯ ಚಿತ್ರ ಹಾಗು ಮಾಹಿತಿ ಚೆನ್ನಾಗಿದೆ... ಟ್ರೆಕ್ಕಿಂಗ್ ಹೋದಾಗ,, ಜಿಗಣೆ ಕೈನಲ್ಲಿ ಕಚ್ಚಿಸಿಕೊಂಡ ಅನುಭವ ನೆನಪಿಗೆ ಬಂತು
ReplyDeleteಜಿಗಣೆ ಚಿತ್ರ ಚೆನ್ನಾಗಿದೆ. ಮಲೆನಾಡು ಪ್ರದೇಶದಲ್ಲಿ ಗುಡ್ಡದ ಇಳಿಜಾರುಗಳಲ್ಲಿ, ನೀರಿನ ಹರಿವು ಇರುವಲ್ಲಿ ಜಾಸ್ತಿ ಇರುತ್ತವೆ. ಕಚ್ಚಿದರೆ ಗೊತ್ತೇ ಆಗುವುದಿಲ್ಲ, ಅದು ಸ್ರವಿಸುವ ದ್ರವ ನಮ್ಮ ಚರ್ಮಕ್ಕೆ ಒ೦ಥರಾ ಅರಿವಳಿಕೆ ಚುಚ್ಚುಮದ್ದು ಇದ್ದ೦ತೆ. ರಕ್ತ ಕುಡಿದು ಅದು ದಪ್ಪಗಾ ದಾಗಲೇ ಗೊತ್ತಾಗುವುದು. ಕಚ್ಚಿಕೊ೦ಡ ಜಿಗಣೆ ಬಿಡಿಸ ಬೇಕಾದರೆ ಸುಣ್ಣದನೀರು ಸಹಾಯಕ. ವೀಳ್ಯ ಹಾಕುವ ವರು ಅದು ಕಚ್ಚಿದಲ್ಲಿಗೆ ವೀಳ್ಯದ ರಸ ಹಾಕಿದಲ್ಲಿ/ ಉಗುಳಿದಲ್ಲಿ, ಕೂಡಲೇ ಅದು ನಮ್ಮ ದೇಹದಿ೦ದ ಬೇರ್ಪಡುತ್ತದೆ. ಕೆಟ್ಟರಕ್ತವನ್ನು ಮೈಯ್ಯಿ೦ದ ಹೊರ ತೆಗೆಯಲು ವೈದ್ಯಕಿಯವಾಗಿಯು ಇದರ ಬಳಕೆ ಯಾಗುತ್ತವೆ.
ReplyDeleteಗುರು,
ReplyDeleteನನ್ನ ಬ್ಲಾಗಿಗೆ ಸ್ವಾಗತ.
ಮೆಚ್ಚುಗೆಗೆ ಧನ್ಯವಾದಗಳು.
-ಅನಿಲ್
ನಿರಂಜನ್,
ReplyDeleteಪ್ರತಿಕ್ರಿಯಿಸಿ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು.
-ಅನಿಲ್
ಮಾಹಿತಿ ಚೆನ್ನಾಗಿದೆ ನಮಗೆ ಇದರ ಬಗ್ಗೆ ತಿಳಿದಿರಲಿಲ್ಲ. ಚಿತ್ರ ನೋಡಿ ಅಬ್ಬಾ ಎನಿಸಿತು....ಚೆನ್ನಾಗಿದೆ ಚಿತ್ರಾ
ReplyDeleteವಂದನೆಗಳು
ಮನಸು,
ReplyDeleteನನ್ನ ಬ್ಲಾಗಿಗೆ ಸ್ವಾಗತ!
ಮೆಚ್ಚುಗೆಗೆ ಧನ್ಯವಾದಗಳು.
ಅಂದಹಾಗೆ, ನಿಮ್ನನ್ನು ನನ್ನ ಗೆಳೆಯರ ಬಳಗಕ್ಕೆ ಸೇರಿಸಿಕೊಂಡಿದ್ದೇನೆ.
-ಅನಿಲ್
ಜಿಗಣೆಗಳ ಬಗ್ಗೆ ತಿಳಿಹಾಸ್ಯ ಬೆರತ ಪ್ರಸಂಗವೊಂದು ಬಿ ಜಿ ಎಲ್ ಸ್ವಾಮಿಯವರ ಹಸಿರು ಹೊನ್ನು ಪುಸ್ತಕದಲ್ಲಿದೆ ಓದು.
ReplyDeleteಉಷಾ
ಅನಿಲ್
ReplyDeleteತಡವಾಗಿ ಬರ್ತಿದ್ದೀನಿ ನಿಮ್ಮ ಬ್ಲಾಗ್ ಗೆ...
ನಮ್ಮ ಸ್ನೇಹಿತರಲ್ಲಿ ಉತ್ತಮ ಛಾಯಾಗ್ರಾಹಕರು ಸೃಜನ ವಂತಿಕೆಯನ್ನು ಮೆರೆಯುತ್ತಿರುವುದು ಹಾರ್ದಿಕ..
ನಿಮ್ಮ ಛಾಯಾ ಚಿತ್ರಗಳು ಚನ್ನಾಗಿವೆ..
ಜಿಗಣೆಗಳು...Leaches ಬಗ್ಗೆ ನನಗೆ ತಿಳಿದ ಮಾಹಿತಿಯನ್ನು ಹಂಚಿಕೊಳ್ಲಲು ಬಯಸುತ್ತೇನೆ...
ಇವು ಎರೆಹುಳದ ಹತ್ತಿರದ ಸಂಬಂಧಿ. ಸಿಹಿ ನೀರು ಮತ್ತು ಸಮುದ್ರ ನೀರು ಎರಡರಲ್ಲೂ ಸಿಗುತ್ತವೆ. ತೇವಾಂಶ ಹೆಚ್ಚಿರುವ ಕಡೆ ಯಥೇಛ್ಚವಾಗಿ ಸಿಗುತ್ತವೆ. ಟ್ರೆಕ್ಕಿಂಗ್ ಮಾಡುವವರಿಗೆ (ವಿಶೇಷತಃ ಮಳೆಗಾಲದಲ್ಲಿ) ಇದು ಸಮಸ್ಯೆಯೇ ಸರಿ. ಒಮ್ಮೆ ರಕ್ತ ಹೀರಿದ ಜಿಗಣೆ ತಿಂಗಳನು ಗಟ್ಟಲೆ ಉಪವಾಸ ಮಾಡಬಲ್ಲುದು. ಇವು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವ ರಸವನ್ನು ಒಸರುತ್ತವೆ..ಇದರಿಂದ ನಿಲ್ಲದೇ ರಕ್ತ ಅವುಗಳ ದೇಹಕ್ಕೆ ಹೋಗುತ್ತದೆ.
ನನಗೆ ನಮ್ಮಲ್ಲಿ ಕಾಣುವ ಸಾಮಾನ್ಯ ಗಾತ್ರದ ಜಿಗಣೆ ಪೂರ್ವೋತ್ತರ ರಾಜ್ಯಗಳಲ್ಲಿ ಕಾಣುವ ದೈತ್ಯ ಜಿಗಣೆ ಭಯಹುಟ್ಟಿಸಿದ್ದಂತೂ ನಿಜ. ಆದರೆ ಈ ದೈತ್ಯಗಳು ನೀರಲ್ಲೇ ಹೆಚ್ಚು..ನೀರಲ್ಲಿ ಆಡ್ಡಾಡುವ ಎಮ್ಮೆಗಳಿಗೆ ಅಂಟಿಕೊಂಡು ರಕ್ತ ಹೀರಿ ಪುಟ್ಟ ಹ್ಯಾಂಡ್ ಬಾಲ್ ಗಾತ್ರಹೊಂದಿ ಉದುರಿ ಬೀಳುವುದನ್ನು ನಾನೇ ಕಂಡಿದ್ದೇನೆ.
ಇನ್ನು..ಇವುಗಳು ಅಂಟಿಕೊಂಡಿವೆ ಎಂದೆನಿಸಿದಾಗ (ಬಹುಪಾಲು...ಗೊತ್ತೇ ಆಗುವುದಿಲ್ಲ...ಬೇರೆಯವರಿಗೆ ಅಂಟಿವೆ ಎಂದಾಗಲೇ ನಾವೂ ನೋಡಿಕೊಳ್ಳುವುದೇ ಹೆಚ್ಚು), ಉಪ್ಪನ್ನು ಉದುರಿಸಿದರೆ ಅವು ನಮ್ಮನ್ನು ಬಿಡುವಿದೇ ಅಲ್ಲದೇ ಸಾಯಲೂ ಬಹುದು (ಆಸ್ಮೊಸಿಸ್ ಕ್ರಿಯೆಯಿಂದ). ಅಡುಗೆ ಸೋಡಾ ಸಹ ಇದೇ ಕೆಲಸ ಮಾಡುತ್ತದೆ. ನಿಂಬೆ ರಸವನ್ನೂ ಉಪಯೋಗಿಸಬಹುದು. ಇವು ಬಿಟ್ಟ ಜಾಗ ನವೆ, ಕೆರೆತ ತರುತ್ತವೆ..ಆ ಜಾಗವನ್ನು ಒತ್ತಿ ಹಿಡಿದು ರಕ್ತ ಸ್ರಾವವನ್ನು ಕಡಿಮೆ ಮಾಡಬಹುದು. ಆ ಜಾಗವನ್ನು ಚನ್ನಾಗಿ ಸೋಪಿನಿಂದ ತೊಳೆದು ಒತ್ತಿಹಿಡಿದರೆ ಬೇರೆ ರೀತಿಯ ಸೋಂಕು ಆಗದು. ಕೆಲವರಿಗೆ ನವೆ ತಡೆಯಲು ಆಂಟಿ ಹಿಸ್ಟಮಿನ್ ಮಾತ್ರೆ ನುಂಗ ಬೇಕಾಗಬಹುದು (ಸಿಟ್ರಿಜ಼ಿನ್ ಹೈಡ್ರೋ ಕ್ಲೋರೈಡ್ ನಂತಹ).
ಕೆಲ ಜಾತಿಯ ಜಿಗಣೆ ಎರೆಹುಳುಗಳನ್ನೂ ನುಂಗುತ್ತವೆ ಎಂದೇ ಹೇಳಲಾಗುತ್ತದೆ.
ಜಿಗಣೆಗಳನ್ನು ಔಷಧೀಯ ಉಪಯೋಗಗಳಿಗೆ ಕ್ರಿ.ಪೂ.೨೦೦ ರಲ್ಲೇ ನಿಕ್ಯಾಂಡರ್ ಎಂಬ ಗ್ರೀಕ್ ವೈದ್ಯ ಪ್ರೊಯೋಗಿಸಿದನೆಂದು ದಾಖಲೆಗಳು ಹೇಳುತ್ತವೆ. ಚೀನಿ ವೈದ್ಯ ಪದ್ದತಿಯಲ್ಲೂ ಇದರ ಉಲ್ಲೇಖವಿದೆ.
jigane koletha elegalinda agutte antha malenadnalli heltharte howda?
ReplyDelete