ಹಿಮಕರಗಿ ನೀರಾಗಿ ಹರಿದಿರಲು ಬೆಟ್ಟದಿಂ।
ಸುಮವರಳಿ ಪರಿಮಳವ ಚೆಲ್ಲಿರಲು ಕಂಪು॥ ಡಮರುಗವ ನುಡಿಸುತಲಿ ಎದ್ದಿರಲು ಶಂಕರನು।
ನಮಿಸಿಹೆನು ನೋಡುತಲಿ ಶಿವನ ಮೊಗವ॥
ಪರಮಶಿವ ಪಾರ್ವತಿ ಜೊತೆಗೂಡಿ ನಗುತಿಹರು।
ಹರಸಿಹರು ಮಮತೆಯನು ತೋರಿಸುತ ನನಗೆ॥
ಕರಮುಗಿದು ನಾನಿಂದು ಭಕುತಿಯಲಿ ಹಾಡಿತಿರೆ।
ಸುರಿದಿಹುದು ಕಣ್ಣೀರು ಸಂತಸದಲಿ॥
ಹಣತೆಯನು ಹಚ್ಚುತ್ತ ದೀಪವನು ಬೆಳಗುತ್ತ।
ಗಣಪನಿಗೆ ನಮಿಸುತ್ತ ಬಾಗಿಹುದು ಶಿರವು॥
ಕಣಕಣದಿ ಹರಿದಿಹುದು ಭಕುತಿಯಾ ರಸಧಾರೆ।
ಗುಣವಿರುವ ಮುಂಜಾವು - ಅನಿಕೇತನ॥ 22 ॥
No comments:
Post a Comment
ನನ್ನ ನಾನೇ ಕಂಡೆ, ಚೆಲುವ ಹತ್ತಿರ ಕರೆದೆ,
ಕಂಡ ಚೆಲುವನು ಹಾಡಿನಲ್ಲಿ ಬರೆದೆ.
ಬಾಳ ದುಗುಡಗಳನ್ನು ನಾನು ಒಮ್ಮೆಲೆ ತೊರೆದೆ,
ಸಂತಸವೆ ನಾನಾಗಿ ಹಿಗ್ಗಿ ಮೆರೆದೆ.