My Blog List

Showing posts with label #Monologue #ಚೌಪದಿ_ಚೌಕ #Chaupadi_Chauka #ಅನಿಕೇತನ #anikEtana #kannaDa. Show all posts
Showing posts with label #Monologue #ಚೌಪದಿ_ಚೌಕ #Chaupadi_Chauka #ಅನಿಕೇತನ #anikEtana #kannaDa. Show all posts

Friday, June 24, 2022

ಚೌಪದಿ - 182

ಯೋಗದಾ ಪರಿಚಯವ ಮಾಡಿಹರು ಗುರುವರ್ಯ| 
ಯೋಗವೇ ಜೀವನದ ಸಾರವೆಂದಿಹರು||  
ಯೋಗವನೆ ಮಾಡುತ್ತ ಸಂಯಮದಿ ನಡೆದಿಹರು| 
ಯೋಗ ಧನ್ವಂತರಿಯು - ಅನಿಕೇತನ|| 182 || 

Thursday, May 13, 2021

ಚೌಪದಿ - 106

ಆತುರವ ಪಡುವವಗೆ ತಾಳ್ಮೆಯದು ಬಲು ಕಡಿಮೆ। 
ಹಾತೊರೆಯುತಿರೆ ಮನವು ಸಂತಸವ ತುಂಬಿ॥ 
ಕಾತರವು ಹೆಚ್ಚುತಿರಲಾತುರವು ಹೆಚ್ಚುವುದು। 
ಆತುರವ ಬಿಟ್ಟಬಿಡೊ - ಅನಿಕೇತನ॥ 106 ॥