My Blog List
Friday, September 18, 2009
ತಂತಿಯ ಕಣ್ಣೀರು..
ಪ್ರೀತಿ ಹನಿ
ಪ್ರೀತಿ ಹನಿಯೇ...ಇನ್ನೇನು
ಜಾರಿ ಬಿಡಬೇಕೆಂದಿರುವೆಯಾ
ನನಗಾಗಿ ನಿಲ್ಲು ಅಲ್ಲೇ ಒಂದಿಷ್ಟು ಹೊತ್ತು
ನಿನ್ನ ಕಣ್ಣೀರಿನೊಳು ತುಳುಕಲಿ
ನನ್ನ ಪ್ರೀತಿಯ ನೆನಪು
ಹರಿದು ಸೋಕಲಿ ನಿನ್ನ ಭಾವನೆಯನು...
ದೂರವಾಗುವೆ ನೀನೀಗ ಇನ್ನೇನು
ನನ್ ಕಣ್ಣು ಮಿಟುಕುವ ವೇಳೆಯಲಿ
ಈ ವಿರಹವನು ನಾ ಹೇಗೆ ಸಹಿಸಲಿ?
ಆದರೂ ಉಕ್ಕಿ ಹರಿದ ನಿನ್ನ ಕಣ್ಣೀರಲಿ
ಕಾಣುತಿದೆ ನನ್ನ ಪ್ರೀತಿಯ ಪ್ರತಿಬಿಂಬ
ಈ ಕ್ಷಣದ ಸ್ಪರ್ಶವನು ಮರೆಯಲೆಂತು?
ಕವನ ಕೃಪೆ: ರಶ್ಮಿ ಪೈ
Subscribe to:
Post Comments (Atom)
ಸುಂದರ ಚಿತ್ರ.ಉತ್ತಮ,ಸೂಕ್ತ ಕವನ.ಛಾಯಾಗ್ರಹಣದ ಹವ್ಯಾಸ ಹೀಗೇ ಮುಂದುವರೆಯಲಿ.
ReplyDeleteಅನಿಲ್,
ReplyDeleteನಿಮ್ಮ ಸೊಗಸಾದ ಚಿತ್ರಕ್ಕೆ ತಕ್ಕದಾಗ ರಶ್ಮಿಯವರ ಕವನ...ಚೆನ್ನಾಗಿದೆ..
ಅನಿಲ್.....
ReplyDeleteಚಿತ್ರನೂ, ಕವಿತೆಯೂ ಎರಡೂ ಸೊಗಸಾಗಿದೆ. ನವರಾತ್ರಿಯ ಶುಭಾಶಯಗಳು.
ಶ್ಯಾಮಲ
@ಉಷಾ,
ReplyDeleteಪ್ರೋತ್ಸಾಹ ಹೀಗೇ ಇರಲಿ..
ಧನ್ಯವಾದಗಳು
-ಅನಿಲ್
@ಶಿವು,
ReplyDeleteಚಿತ್ರ ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು.
-ಅನಿಲ್
@ಶ್ಯಾಮಲ,
ReplyDeleteಧನ್ಯವಾದಗಳು.
ಎಲ್ಲರಿಗು ದಸರಾ ಹಬ್ಬದ ಶುಭಾಶಯಗಳು.
-ಅನಿಲ್
ತುಂಬಾ ಒಳ್ಳೆಯ ಕವನ, ಫೋಟೋ ಸೇರಿ ಇನ್ನು ಆಪ್ತವಾಗಿದೆ
ReplyDeleteಧನ್ಯವಾದಗಳು ಗುರು..
ReplyDelete-ಅನಿಲ್
wow!!! tumba chennagide sir kavana adakke merugaagi chitra
ReplyDeleteಮನಸು,
ReplyDeleteಧನ್ಯವಾದಗಳು :)