
ಎರಡನೆಯ ಮಹಾಯುದ್ಧದ ವೇಳೆಗೆ ಹೊಸ ಹೊಸ ಅಸ್ತ್ರಗಳು (ಟ್ಯಾಂಕರುಗಳು, ಬಾಂಬರು ವಿಮಾನಗಳು. ಇತ್ಯಾದಿ) ಬಳಕೆಗೆ ಬಂದು ಯುದ್ಧದ ವಿನಾಶಕಾರಿ ಶಕ್ತಿ ನೂರಾರು ಪಟ್ಟು ಹೆಚ್ಚಿತು. ಯುದ್ಧದಲ್ಲಿ ತೊಡಗಿಕೊಂಡಿದ್ದ ದೇಶಗಳ ಪೈಕಿ ಸೋವಿಯತ್ ಒಕ್ಕೂಟ ಅಪಾರ ಹಾನಿಗೊಳಗಾಯಿತು. ಯುದ್ಧದ ಸಾವಿನ ಜೊತೆ ಹಸಿವು, ರೋಗ ರುಜಿನಗಳೂ ಸೇರಿಕೊಂಡವು.
ಯುದ್ಧದ ಕಾರಣ ರಷ್ಯಾದ ಸುಮಾರು ಇಪ್ಪತ್ತು ಮಿಲಿಯನ್ ಮಂದಿ ಪ್ರಾಣನೀಗಿದರು. ಲೆನಿನ್ ಗ್ರಾಡ್ ನಗರದ ಜನರು ಸತತ ಒಂಬೈನೂರು ದಿನಗಳ ಕಾಲ ಹಿಟ್ಲರನ ಸೈನ್ಯವನ್ನು ಎದುರಿಸಿ ನಿಂತದ್ದು ಯುದ್ಧದ ದಾಖಲೆಗಳಲ್ಲಿ ಅತ್ಯಂತ ಮುಖ್ಯವಾದ ಘಟನೆಯಾಗಿದೆ.
ಈ ಎರಡೂ ಯುದ್ಧಗಳಿಗೆ ಸಂಬಂಧಿಸಿದ ಹಲವಾರು ಯುದ್ಧ ಸ್ಮಾರಕಗಳು ರಷ್ಯಾದಲ್ಲಿವೆ. ಬ್ರೆಸ್ಟ್ ಕೋಟೆಯ ಗೋಡೆಯನ್ನೇ ಯುದ್ಧಸ್ಮಾರಕವಾಗಿ ಉಳಿಸಿಡಲಾಗಿದೆ.
ಯುದ್ಧ ಸ್ಮಾರಕಗಳಲ್ಲಿ ಅತಿ ದೊಡ್ಡದು ಸ್ಟ್ಯಾಲಿನ್ ಗ್ರಾಡ್ (ಈಗಿನ ವೋಲ್ಗೊಗ್ರಾಡ್) ಅಲ್ಲಿರುವ ಮಮಯೇವ್ ಬೆಟ್ಟದ ಸ್ಮಾರಕ. ಇಲ್ಲಿ ಅನೇಕಾನೇಕ ಅದ್ಭುತ ಶಿಲ್ಪವಿನ್ಯಾಸಗಳನ್ನು ನಿರ್ಮಿಸಿ ಇಡೀ ಬೆಟ್ಟವನ್ನು ಒಂದು ಸ್ಮಾರಕವಾಗಿ ಮಾಡಲಾಗಿದೆ. ಹಿಟ್ಲರನಿಗೆ ಮಾಸ್ಕೋ ಬಳಿ ಮೊದಲ ಪರಾಭವವಾದರೆ, ಸ್ಟ್ಯಾಲಿನ್ ಗ್ರಾಡ್ ಬಳಿ ನಿರ್ಧಾರಕ ಪರಾಭವಾಯಿತು. ಅಲ್ಲಿಂದಾಚೆಗೆ ಹಿಟ್ಲರ್ ಸತತವಾಗಿ ಸೋಲುತ್ತಾ ಹೋದ. ಈ ಘಟನೆಯನ್ನು ಚಿರಸ್ಥಾಯಿಯಾಗಿ ಮಾಡಲೆಂದೇ ಮಮಯೇವ್ ಸ್ಮಾರಕ ನಿರ್ಮಾಣವಾಯಿತು.
ನಗರದಾಚೆಗೆ ಬಹು ದೂರದಿಂದಲೇ ಗೋಚರಿಸುವ ಈ ಪ್ರತಿಮೆ ಅದ್ಭುತವೂ ಭವ್ಯವೂ ಆಗಿದೆ. ಬುಡದಿಂದ ತುದಿಯವರೆಗೆ ಸುಮಾರು ೬೦ ಮೀಟರ್ ಎತ್ತರವಿರುವ ಇದನ್ನು ಯವ್ಗೆನಿ ವುಚೆತಿಚ್ ಎಂಬ ಶಿಲ್ಪಿ ವಿನ್ಯಾಸಗೊಳಿಸಿದರು. ಕತ್ತಿ ಹಿಡಿದು ನಿಂತಿರುವ ರಷ್ಯಾ ಮಾತೆಯ ಪ್ರತಿಮೆ, ದುರಾಕ್ರಮಣಕಾರರಿಗೆ ಎಚ್ಚರಿಕೆ ನೀಡುವಂತಿದೆ. ವಿಶೇಷ ದಿನಗಳಲ್ಲಿ ಸಾವಿರಾರು ಜನರನ್ನು ಆಕರ್ಷಿಸುವ ಈ ಪ್ರತಿಮೆಯ ಬಳಿಗೆ ಸಾಗುವ ದಾರಿಯಲ್ಲಿ ಸ್ಮಾರಕಗಳ ಸಮುಚ್ಚಯವೇ ಇದೆ.
ಚಿತ್ರ ಕೃಪೆ: ಇಲ್ಲಿಂದ
ಅನಿಲ್,
ReplyDeleteಒಳ್ಳೆಯ ಮಾಹಿತಿ. ಭಾವಚಿತ್ರ ಚೆನ್ನಾಗಿದೆ.
"ಯುದ್ಧದ ಕಾರಣ ರಷ್ಯಾದ ಸುಮಾರು ಇಪ್ಪತ್ತು ಮಿಲಿಯನ್ ಮಂದಿ ಪ್ರಾಣನೀಗಿದರು"- ಈ ಮಾಹಿತಿ ನಂಬಲಸಾಧ್ಯ.
ಚಿತ್ರ
ಉಪಯುಕ್ತ ಮಾಹಿತಿ. ನಮ್ಮ ಅರಿವು ಹೆಚ್ಚಾಗುವ ಇಂತಹ ಮಾಹಿತಿಗಳು ಅಗತ್ಯ.
ReplyDeleteಅನಿಲ್... ತುಂಬಾ ಚೆನ್ನಾಗಿದೆ ಚಿತ್ರ ಮತ್ತು ಅರಿವು ಹೆಚ್ಚಿಸುವಂತಹ ವಿಷಯ ಕೊಟ್ಟಿದ್ದೀರಿ.......ಯಾವಾಗಲೂ ಏನಾದರೂ ಒಂದು ವಿಶೇಷ ಮಾಹಿತಿ ಕೊಡುತ್ತಿರುತ್ತೀರಿ... ಧನ್ಯವಾದಗಳು.
ReplyDeleteಶ್ಯಾಮಲ
ಅನಿಲ್,
ReplyDeleteಚಿತ್ರಕ್ಕೆ ತಕ್ಕಂತೆ ಸೊಗಸಾದ ಮಾಹಿತಿ....ತುಂಬಾ ಚೆನ್ನಾಗಿವೆ...ಮುಂದುವರಿಸಿ..
@ಚಿತ್ರ, @ಉಷಾ, @ಶ್ಯಾಮಲ, @ಶಿವು,
ReplyDeleteಧನ್ಯವಾದಗಳು..