ಚಿಕ್ಕಂದಿನಲ್ಲಿ ಕಣ್ಣಾಮುಚ್ಚಾಲೆ ಆಟ ಆಡುವಾಗ ಹೇಳುತ್ತಿದ್ದ ಸಾಹಿತ್ಯ ಹೀಗಿದೆ:
ಕಣ್ಣಾಮುಚ್ಚೆ
ಕಾಡೆಗೂಡೆ
ಉದ್ದಿನ ಮೂಟೆ
ಉರುಳೇಹೋಯ್ತು
ನಮ್ಮಾ ಹಕ್ಕಿ
ನಿಮ್ಮಾ ಹಕ್ಕಿ
ಬಿಟ್ಟೆನೋ ಬಿಟ್ಟೆ.
ಈ ಸಾಹಿತ್ಯ ಈಗ ನೆನಪಾಯ್ತು. ಏಕೆಂದರೆ, ನೆರೆಹೊರೆಯ ಮಕ್ಕಳು ಕಣ್ಣಾಮುಚ್ಚಾಲೆ ಆಟವನ್ನು ಆಡ್ತಿದ್ರು. ಅವರು ಒಂದು, ಎರಡು, ಮೂರು ಎಂದು ನೂರರವರೆಗೂ ಎಣಿಸುತ್ತಾ ಆಡುತ್ತಿದ್ದರು. ನನ್ನ ಬಾಲ್ಯವನ್ನು ನೆನೆದಾಗ ಈ ಸಾಹಿತ್ಯ ನೆನಪಾಯ್ತು.
ನಮ್ಮಯ ಹಕ್ಕಿ ಬಿಟ್ಟೇ..ಬಿಟ್ಟೇ..
ReplyDeleteನಿಮ್ಮಯ ಹಕ್ಕಿ ಅಡಗಿಸಿಕೊಳ್ಳಿ..
ಎ೦ದು ನಾವು ಹಾಡುತ್ತಿದ್ದ/ಆಡುತ್ತಿದ್ದ ನೆನಪು.
ನೆನಪಿಸಿದ್ದಕ್ಕೆ ಧನ್ಯವಾದಗಳು...ಅನಿಲ್.
ಅನ೦ತ್
ಅನಂತ ರಾಜ್ ಅವರೇ,
ReplyDeleteಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.
ಹೆಚ್ಚು ಕಡಿಮೆ ನಾವೆಲ್ಲರೂ ಈ ಪದ್ಯವನ್ನು, ಬಾಲ್ಯದಲ್ಲಿ, ಕಣ್ಣಾಮುಚ್ಚಾಲೆ ಆಡುವಾಗ ಹೇಳಿರುತ್ತೇವೆ.
-ಅನಿಲ್.
ಅನಿಲ್,
ReplyDeleteಬಾಲ್ಯದ ನೆನ್ಪಾಯ್ತು.
ನಾನು, ನೀನು ಮತ್ತೆ ನಮ್ಮ ವಯಸ್ಸಿನ ಹುಡುಗರು ಆಟ ಆಡ್ತಿದ್ದಿದ್ದು ಎಲ್ಲಾ ನೆನಪಾದ್ವು.
ನೀನು ನಮ್ಮ ಮನೆಗೆ ಬಂದಾಗ ಅಥ್ವಾ ನಾನು ನಿಮ್ಮ ಮನೆಗೆ ಬಂದಾಗ ಆಡುತ್ತಿದ್ದ ಆಟಗಳೆಲ್ಲ ನೆನಪಾದವು.
-ಅನಂತ.
ಈ ಹಾಡನ್ನು ನಮ್ಮ ಜೀವನಕ್ಕೆ ಕೂಡ ಹೋಲಿಸಬಹುದು...
ReplyDeleteಕಣ್ಣಾಮುಚ್ಚೆ ಎಂದರೆ ಮನುಷ್ಯನ ಸಾವು..
ಕಾಡೇ ಗೂಡು ಅಂದರೆ ಸತ್ತ ನಂತರ ಕಾಡಿನಲ್ಲಿ ನಮ್ಮ ಸಮಾಧಿಯೇ ನಮ್ಮ ವಾಸ ಸ್ಥಾನ ಅಥವಾ ಗೂಡು...
ಉದ್ದಿನ ಮೂಟೆ ಅಂದರೆ ನಮ್ಮ ದೇಹ...
ಉರುಳೆ ಹೋಯಿತು ಅಂದರೆ ಸತ್ತಾಗ ದೇಹ ಕೆಳಗೆ ಬೀಳುವ ಸಂಕೇತ....
ನನ್ನಯ ಹಕ್ಕಿ ಬಿಟ್ಟೇ ಬಿಟ್ಟೆ ಅಂದರೆ ನಮ್ಮ ಪ್ರಾಣ ಪಕ್ಷಿ ಅಥವಾ ಆತ್ಮವನ್ನು ಬಿಡುತ್ತಿದ್ದೇವೆ ಎಂದು ಪರಮಾತ್ಮನಲ್ಲಿ ಹೇಳುವುದು....
ನಿನ್ನಯ ಹಕ್ಕಿ ಅಡಗಿಸಿಕೊಳ್ಳಿ ಅಂದರೆ ನಮ್ಮ ಆತ್ಮವನ್ನು ನಿಮ್ಮ ಆತ್ಮದಲ್ಲಿ ಅಡಗಿಸಿಕೊಳ್ಳಿ ಎಂದು ಪರಮಾತ್ಮನಲ್ಲಿ ವಿನಂತಿಸಿಕೊಳ್ಳುವುದು...
ಹಾಗೆ ಇದು ಒಂದು ವ್ಯಾಖ್ಯಾನ ಅಷ್ಟೇ !!!
ಗಿರೀಶ್,
ReplyDeleteವ್ಯಾಖ್ಯಾನ ಚೆನ್ನಾಗಿದೆ.
ಕೆಲಹೊತ್ತು ಚಿಂತನೆಯಲ್ಲಿ ಮುಳುಗಿದೆ.
-ಅನಿಲ್.
ಥ್ಯಾಂಕ್ಸ್ ಕಣೋ ಅನಂತ.
ReplyDelete-ಅನಿಲ್.