ಜೂನ್ ೨೬ರ ಬೆಳಿಗ್ಗೆ ಮನೆಯ ಬಳಿ ಈ ಹೂವು ಕಾಣಿಸ್ತು. ಈ ಹೂವು ರಾತ್ರಿ ಅರಳುತ್ತದೆ. ಬೆಳಿಗ್ಗೆ ಬಾಡುತ್ತದೆ. ಈ ಹೂವು ದತುರ ಅಥವಾ ತುತ್ತೂರಿ ಹೂವು.
ಇದಕ್ಕೆ ಉಮ್ಮತ್ತಿ ಹೂವು ಎಂದೂ ಕರೆಯಲಾಗುತ್ತದೆ. ಎಲೆ ಸ್ವಲ್ಪ ಬಿಳಿ ಮಿಶ್ರಿತ ಹಸಿರಿದ್ದರೆ ಬಿಳಿ ಉಮ್ಮತ್ತಿ,ಗಾಡ ಹಸಿರಿದ್ದರೆ ಕರಿ ಉಮ್ಮತ್ತಿ. ಇದರ ಎಲೆಗಳನ್ನು ಗಾಯವಾದಾಗ ಹೊಸಗಿ ಗಾಯದ ಮೇಲೆ ಹಿಂಡುತ್ತಾರೆ. ತಿಪ್ಪೆಗಳ ಮೇಲೆ ಜಾಸ್ತಿ ಬೆಳೆಯುತ್ತದೆ. ದನಕರುಗಳು ಮೇಯುವುದಿಲ್ಲ. ಇದರ ಕಾಯಿ ಮುಳ್ಳುಹೊದಿಕೆಯಿಂದ ಕೂಡಿದ್ದು,ಬಲಿತ ಕಾಯಿಯ ಒಳಗೆ ಕಪ್ಪನೆಯ ಬೀಜಗಳಿರುತ್ತವೆ. ಮುಳ್ಳುಚೆಂಡಿನಂತೆ ಹಸಿರು ಬಣ್ಣದಲ್ಲಿರುತ್ತದೆ. ಇದನ್ನು ಬ್ಯಾಟರಿ ಹೂವು ಎಂದೂ ಕರೀತಾರೆ.
ಹಿಂದಿನ ಕಾಲದಲ್ಲಿ ಇದರ ಬೀಜವನ್ನು ಅರೆದು ರೊಟ್ಟಿ ಹಿಟ್ಟಿನಲ್ಲಿ ಕಲಸಿ ರೊಟ್ಟಿ ಮಾಡಿ ಉಂಡೊ, ಉಣಿಸಿಯೊ ಸಾವನ್ನು ಆಹ್ವಾನಿಸುತ್ತಿದ್ದರಂತೆ.