My Blog List

Tuesday, June 30, 2009

ತುತ್ತೂರಿ ಹೂವು.


ಜೂನ್ ೨೬ರ ಬೆಳಿಗ್ಗೆ ಮನೆಯ ಬಳಿ ಈ ಹೂವು ಕಾಣಿಸ್ತು. ಈ ಹೂವು ರಾತ್ರಿ ಅರಳುತ್ತದೆ. ಬೆಳಿಗ್ಗೆ ಬಾಡುತ್ತದೆ. ಈ ಹೂವು ದತುರ ಅಥವಾ ತುತ್ತೂರಿ ಹೂವು.
ಇದಕ್ಕೆ ಉಮ್ಮತ್ತಿ ಹೂವು ಎಂದೂ ಕರೆಯಲಾಗುತ್ತದೆ. ಎಲೆ ಸ್ವಲ್ಪ ಬಿಳಿ ಮಿಶ್ರಿತ ಹಸಿರಿದ್ದರೆ ಬಿಳಿ ಉಮ್ಮತ್ತಿ,ಗಾಡ ಹಸಿರಿದ್ದರೆ ಕರಿ ಉಮ್ಮತ್ತಿ. ಇದರ ಎಲೆಗಳನ್ನು ಗಾಯವಾದಾಗ ಹೊಸಗಿ ಗಾಯದ ಮೇಲೆ ಹಿಂಡುತ್ತಾರೆ. ತಿಪ್ಪೆಗಳ ಮೇಲೆ ಜಾಸ್ತಿ ಬೆಳೆಯುತ್ತದೆ. ದನಕರುಗಳು ಮೇಯುವುದಿಲ್ಲ. ಇದರ ಕಾಯಿ ಮುಳ್ಳುಹೊದಿಕೆಯಿಂದ ಕೂಡಿದ್ದು,ಬಲಿತ ಕಾಯಿಯ ಒಳಗೆ ಕಪ್ಪನೆಯ ಬೀಜಗಳಿರುತ್ತವೆ. ಮುಳ್ಳುಚೆಂಡಿನಂತೆ ಹಸಿರು ಬಣ್ಣದಲ್ಲಿರುತ್ತದೆ. ಇದನ್ನು ಬ್ಯಾಟರಿ ಹೂವು ಎಂದೂ ಕರೀತಾರೆ.
ಹಿಂದಿನ ಕಾಲದಲ್ಲಿ ಇದರ ಬೀಜವನ್ನು ಅರೆದು ರೊಟ್ಟಿ ಹಿಟ್ಟಿನಲ್ಲಿ ಕಲಸಿ ರೊಟ್ಟಿ ಮಾಡಿ ಉಂಡೊ, ಉಣಿಸಿಯೊ ಸಾವನ್ನು ಆಹ್ವಾನಿಸುತ್ತಿದ್ದರಂತೆ.

5 comments:

  1. ನಿಮ್ಮ ಹೂವಿನ ಮೇಲೊ೦ದು ಕವನ ಬರೆಯೋಣವೆ೦ದು ಹೊರಟೆ, "ಕಲಾಸಿಪಾಳ್ಯದ ಬಸ್ಟಾ೦ಡಿನಲ್ಲಿ ನಿ೦ತ ಒ೦ಟಿ ಚೆಲುವೆ" ಅ೦ತ ಅದಕ್ಕೆ ಟೈಟಲ್ ಕೂಡ ಕೊಟ್ಟೆ. ಯಾಕೋ ಕೈಗೂಡಲಿಲ್ಲ, ಮತ್ತೆ ಯತ್ನಿಸುವೆ.

    ReplyDelete
  2. ಅನಿಲ್,

    ಹೂವಿನ ಫೋಟೋ ಚೆನ್ನಾಗಿದೆ. ಮತ್ತು ಅದರ ಬಗೆಗೆ ಉಪಯುಕ್ತ ಮಾಹಿತಿ ನೀಡಿದ್ದೀರಿ...

    ReplyDelete
  3. ಒಳ್ಳೆ ಗ್ರಾಮಾಫೋನ್ ತರಹ ಇದೆಯಲ್ವಾ?

    ReplyDelete
  4. ನಿರಂಜನ್,
    ಇನ್ನೊಂದು ಚಿತ್ರ ಹಾಕಿರುವೆ. ಅದಕ್ಕೆ ಸಾಧ್ಯವಾದರೆ ಕವನ ಬರೆಯಿರಿ.
    ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.

    ಶಿವು, ಫೋಟೋ ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು.

    ಡಾಕ್ಟ್ರೇ,
    ತುಂಬಾ ಥ್ಯಾಂಕ್ಸ್

    ಮಲ್ಲಿಕಾರ್ಜುನ್,
    ಹೌದು, ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು.

    ReplyDelete