ಇಂದು ಭಾರತ ಆಸ್ಟ್ರೇಲಿಯಾವನ್ನು ೧೭೨ ರನ್ ಗಳ ಅಂತರದಿಂದ ಸೋಲಿಸಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.
೨೦೦೪ರಲ್ಲಿ ಭಾರತದಲ್ಲಿ ಆಡಿದ್ದಾಗ ಈ ಟ್ರೋಫಿಯನ್ನು ಆಸ್ಟ್ರೇಲಿಯಾಗೆ ಬಿಟ್ಟುಕೊಟ್ಟಿತ್ತು.
೨೦೦೭/೦೮ ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲೂ ಭಾರತ ೨-೧ ಅಂತರದಿಂದ ಸೋತಿತ್ತು.
ಆದರೆ, ಈ ಸರಣಿಯಲ್ಲಿ ಭಾರತ ೨-೦ ಅಂತರದಿಂದ ಭಾರತ ಆಸ್ಟ್ರೇಲಿಯಾವನ್ನು ಸೋಲಿಸಿ ಅವರಿಗೆ ಮಣ್ಣು ಮುಕ್ಕಿಸಿದೆ.
ಭಾರತ ಈ ಪಂದ್ಯದಲ್ಲಿ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ೪೪೧ ರನ್ ಗಳನ್ನು ಗಳಿಸಿತ್ತು.
ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ೩೫೫ ರನ್ ಗಳಿಸಿ ಆಲೌಟ್ ಆಗಿತ್ತು.
ಮತ್ತೆ ಎರಡನೆಯ ಇನ್ನಿಂಗ್ಸ್ ನಲ್ಲಿ ಭಾರತ ೨೯೫ ರನ್ ಗಳನ್ನು ಗಳಿಸಿ ಆಲೌಟ್ ಆಯಿತು.
ಆಸ್ಟ್ರೇಲಿಯಾಗೆ ಗೆಲ್ಲಲು ೩೮೧ ರನ್ ಗಳು ಬೇಕಾಗಿತ್ತು.
ಆಸ್ಟ್ರೇಲಿಯಾ ಇದಕ್ಕೆ ಉತ್ತರವಾಗಿ ಕೇವಲ ೨೦೯ ರನ್ ಗಳನ್ನು ಗಳಿಸಿ ಆಲೌಟ್ ಆಯಿತು.
ಹರ್ಭಜನ್ ಸಿಂಗ್ ಮಿಚೆಲ್ಲ್ ಜಾನ್ಸನ್ ಅವರನ್ನು ಎಲ್. ಬಿ. ಡಬ್ಲ್ಯು ಮೂಲಕ ಅವರ ವಿಕೆಟ್ ಕಬಳಿಸುತ್ತಿದ್ದಂತೆಯೇ ಭಾರತ ಈ ಟ್ರೋಫಿಯನ್ನು ಗೆದ್ದುಕೊಂಡಿತು.
ಇನ್ನೊಂದು ಸೋಜಿಗದ ಸಂಗತಿ.
ಭಾರತ ಮೊದಲ ಇನ್ನಿಂಗ್ಸ್: ೪೪೧ ರನ್ ಗಳು.
ಎರಡನೆಯ ಇನ್ನಿಂಗ್ಸ್: ೨೯೫ ರನ್ ಗಳು.
ಅಂತರ: ೧೪೬.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್: ೩೫೫ ರನ್ ಗಳು.
ಎರಡನೆಯ ಇನ್ನಿಂಗ್ಸ್: ೨೦೯ ರನ್ ಗಳು.
ಅಂತರ: ೧೪೬.
ಮರೆತಿದ್ದೆ: ಈ ವಿಜಯದ ನಡುವೆ ಒಂದು ವಿಷಾದಕರ ಸಂಗತಿಯೆಂದರೆ, ಇಂದು ಸೌರವ್ ಗಂಗೂಲಿ ತಮ್ಮ ಕ್ರಿಕೆಟ್ ಜೀವನದ ಕೊನೆಯ ಪಂದ್ಯವನ್ನು ಆಡಿದ್ದು
೧೪೬ರ ಆಟ ಮಜವಾಗಿದೆ! ನಾನು ಯೋಚಿಸಿಯೇ ಇರಲಿಲ್ಲ!!
ReplyDeleteಹೌದು ಹರೀಶ್,
ReplyDeleteಪ್ರತಿಕ್ರಿಯೆಗೆ ಧನ್ಯವಾದಗಳು...
ನಿಮ್ಮನ್ನು ನನ್ನ ಗೆಳೆಯರ ಬಳಗಕ್ಕೆ ಸೇರಿಸಿಕೊಂಡಿದ್ದೇನೆ.
ReplyDeleteಧನ್ಯವಾದಗಳು :-)
ReplyDelete