My Blog List

Wednesday, November 26, 2008

ಮದುವೆಗೆ ಮುಂಚೆ ಮತ್ತು ಮದುವೆಯ ನಂತರ...

ಮದುವೆಗೆ ಮುಂಚೆ...

ಅವನು: ಅಬ್ಬಾ!!!

ಅವಳು: ನಾನು ನಿನ್ನನ್ನು ಬಿಟ್ಟಿರಬೇಕಾ?

ಅವನು: ಇಲ್ಲ!!! ಆ ರೀತಿ ಯೋಚನೆಯೂ ಮಾಡಬೇಡ.

ಅವಳು: ನೀನು ನನ್ನ ಪ್ರೀತಿಸುತ್ತೀಯಾ?

ಅವನು: ಸಂದೇಹವೇ ಬೇಡ... ಹಿಂದೆಯೂ ಮಾಡುತ್ತಿದ್ದೆ, ಮುಂದೆಯೂ ಮಾಡುವೆ.

ಅವಳು: ನನಗೆ ಎಂದಾದರೂ ಮೋಸ ಮಾಡಿದ್ದೀಯಾ?

ಅವನು: ಇಲ್ಲ!!! ಈ ರೀತಿ ಯಾಕೆ ಕೇಳುತ್ತಿದ್ದೀಯಾ?

ಅವಳು: ನನಗೆ ಮುತ್ತು ಕೊಡುತ್ತೀಯಾ?

ಅವನು: ಪ್ರತಿ ಅವಕಾಶಕ್ಕೆ ಕಾಯುತ್ತಿರುತ್ತೇನೆ.

ಅವಳು: ನನಗೆ ಹೊಡೆಯುತ್ತೀಯಾ?

ಅವನು: ಇಲ್ಲ!!! ನಿನಗೇನಾದರೂ ಹುಚ್ಚು ಹಿಡಿದಿದೆಯಾ?

ಅವಳು: ನಾನು ನಿನ್ನನ್ನು ನಂಬಬಹುದಾ?

ಅವನು: ಹಾ...

ಅವಳು: ಪ್ರಿಯತಮ!!!


ಮದುವೆಯ ನಂತರ...

ಬರೆದಿರುವುದನ್ನೇ ಕೆಳಗಿನಿಂದ ಮೇಲಕ್ಕೆ ಓದಿ... Smiling


6 comments:

  1. ಅನಿಲ್ ರಮೇಶ್,

    ನಿಮ್ಮ ಪ್ರಹಸನ ಬಲು ಮಜ್ ಇದೆ. ಒಂದೇ ಬರವಣಿಗೆಯಲ್ಲಿ ಎರಡು ವಿರುದ್ದಾರ್ಥಗಳನ್ನು ಕೊಟ್ಟಿದ್ದೀರಿ. ನಿಮ್ಮ ಪ್ರತಿಬೆಗೆ ಸಲಾಮು.
    ಆಹಾಂ! ನನ್ನ ಮತ್ತೊಂದು ಬ್ಲಾಗಿನಲ್ಲಿ ಹೊಸ ದಾದ ವಿಚಾರವೊಂದು ಬಂದಿದೆ. ಒಮ್ಮೆ ಬಿಡುವು ಮಾಡಿಕೊಂಡು ಬನ್ನಿ.

    ReplyDelete
  2. ಅನಿಲ್ ರಮೇಶ್...
    ತುಂಬ ಮಜವಾಗಿದೆ... ನನ್ನ ಸಂಗಡ ನನ್ನ ಮಡದಿಯೂ ನಕ್ಕಿದ್ದಾಳೆ...
    ಧನ್ಯವಾದಗಳು...

    ReplyDelete
  3. ಶಿವು,
    ತುಂಬಾ ಧನ್ಯವಾದಗಳು...

    ನಿಮ್ಮ ಕ್ಯಾಮೆರಾ ಹಿಂದೆ ಬ್ಲಾಗಿಗೆ ಬಿಡುವು ಮಾಡಿಕೊಂಡು ಬರುವೆ...

    ಪ್ರಕಾಶ್ ಸರ್,
    ತುಂಬಾ ಧನ್ಯವಾದಗಳು.

    ನಿಮ್ಮನ್ನು ನನ್ನ ಗೆಳೆಯರ ಬಳಗಕ್ಕೆ ಸೇರಿಸಿಕೊಂಡಿದ್ದೇನೆ.

    ReplyDelete
  4. ವಾ ವಾರೇವಾ

    ತುಂಬಾ ಚೆನ್ನಾಗಿದೆ ಬಿಡ್ರಿ.

    ReplyDelete
  5. ರಾಘವೇಂದ್ರ,

    ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು...

    ReplyDelete
  6. ಅಂದಹಾಗೆ,
    ರಾಘವೇಂದ್ರ,
    ನಿಮ್ಮನ್ನು ನನ್ನ ಗೆಳೆಯರ ಬಳಗಕ್ಕೆ ಸೇರಿಸಿಕೊಂಡಿದ್ದೇನೆ.

    ReplyDelete