My Blog List

Monday, March 02, 2009

ಹನ್ನೆರಡು ಜ್ಯೋತಿರ್ಲಿಂಗಗಳು - ೬

ಡಾಕಿನಿಯ ಭೀಮಶಂಕರ

ಎಲ್ಲಿದೆ?
ಮಹಾರಾಷ್ಟ್ರದ ಪುಣೆಯ ಸಮೀಪದಲ್ಲಿದೆ. ಪುಣೆಯಿಂದ ನಾಶಿಕ ರಸ್ತೆಯಲ್ಲಿ ಮಂಚರ್ ಎಂಬ ಊರಿಗೆ ಬಂದು ಸಹ್ಯಾದ್ರಿ ಪರ್ವತ ಶ್ರೇಣಿಯತ್ತ ತಿರುಗಿ ಖೋಡೆಂಗಾವ್ ಎಂಬ ಊರಿಗೆ ಬಂದರೆ ಸಮೀಪದ ಡಾಕಿನಿಯಲ್ಲಿ ಭೀಮಶಂಕರ ದೇಗುಲವಿದೆ. ಇದು ಬ್ರಹ್ಮಪುರ ಪರ್ವತ ಶಿಖರದಲ್ಲಿದ್ದು ಭೀಮಾ ನದಿ ಇಲ್ಲಿ ಉಗಮವಾಗುವುದು. ಸುಂದರ ದೇಗುಲ, ಪ್ರಾಕಾರ ಭವ್ಯ ಗೋಪುರಗಳು ಹಸಿರಿನ ಮಧ್ಯೆ ಕಂಗೊಳಿಸುತ್ತವೆ. ಲಿಂಗದ ಮಧ್ಯದಲ್ಲಿ ಗೆರೆ ಇದ್ದು, ಇದು ಶಿವ ಶಕ್ತಿ ಸ್ವರೂಪವಾಗಿದೆ. ಇದನ್ನು ಅರ್ಧನಾರೀಶ್ವರ ರೂಪ ಎಂದೂ ಶಿವಲೀಲಾಮೃತ ವರ್ಣಿಸುತ್ತದೆ. ಸಂತ ರಾಮದಾಸರು, ಗಂಗಾಧರ ಪಂಡಿತರು, ಸಂತ ಜ್ಞಾನೇಶ್ವರರು, ವರದಹಳ್ಳಿ ಶ್ರೀಧರ ಸ್ವಾಮಿಗಳು ಮೊದಲಾದ ಮಹಿಮರು ತಪಸ್ಸು ಮಾಡಿ ಅನುಗ್ರಹ ಪಡೆದ ಸ್ಥಳವಿದೆ. ಪೋರ್ಚುಗೀಸರು ಸ್ಥಾಪಿಸಿದರು ಎಂದು ನಂಬಲಾದ ಬೃಹದಾಕಾರದ ತೂಗಾಡುವ ಘಂಟೆ ಇಲ್ಲಿನ ಇನ್ನೊಂದು ವಿಶೇಷ.

ಸ್ಥಳ ಪುರಾಣ.
ಭೀಮಶಂಕರ ಪೂರ್ವ ಇತಿಹಾಸ ತಿಳಿಸುವ ಅನೇಕ ಕಥೆಗಳಿವೆ. ವೃತ್ರಾಸುರನನ್ನು ಸಂಹರಿಸಿ ಕೆಲಕಾಲ ಇಲ್ಲಿ ವಿಶ್ರಮಿಸಿದ ಶಿವನ ಮೈಯಿಂದ ಇಳಿದ ಬೆವರೇ ಭೀಮಾನದಿ ಆಯಿತು. ಶಿವ ಅಲ್ಲಿ ನೆಲೆಸಿ ಭೀಮಶಂಕರನಾದ ಎಂಬುದು ಒಂದು ಕಥೆಯಾದರೆ, ಭೀಮಾಸುರನೆಂಬ ಅಸುರ ಸುದೇಷ್ಣೆ ಎಂಬ ಮಹಾರಾಣಿಯ ಸೌಂದರ್ಯಕ್ಕೆ ಮಾರುಹೋಗಿ ಅವಳ ಪತಿ ಸುಲಕ್ಷಣನ ಜೊತೆ ಬಂಧಿಸಿ ಕಾರಾಗೃಹದಲ್ಲಿಟ್ಟಾಗ ಅವರು ಮೃತ್ತಿಕಾಲಿಂಗವನ್ನು ಪೂಜಿಸುತ್ತಿದ್ದಾರೆ ಎಂದು ತಿಳಿದು ನಾಶ ಮಾಡಲು ಹೋದಾಗ, ಶಿವನು ಅವತರಿಸಿ ಭೀಮಾಸುರನನ್ನು ಸಂಹರಿಸಿ, ಭಕ್ತರ ಕೋರಿಹೆಯ ಮೇರೆಗೆ ಇಲ್ಲೇ ನಿಂತು ಭೀಮಶಂಕರನಾದ ಎಂಬುದು ಇನ್ನೊಂದು ಕಥೆ.
ಚಾರಿತ್ರಿಕವಾಗಿ ಛತ್ರಪತಿ ಶಿವಾಜಿ ಈ ದೇವಸ್ಥಾನವನ್ನು ಸ್ತಾಪಿಸಿದ. ಪೇಶ್ವೆ ನಾನಾ ಫಡ್ನವೀಸ್ ಇದನ್ನು ಅಭಿವೃದ್ದಿಗೊಳಿಸಿದ. ಪುಣೆಯ ವರ್ತಕ ಚಿಮನ್ ಜಿ ಅಂತಾಜಿ ನಾಯಕ್ ಭೀಡೇ ೧೪೩೭ರಲ್ಲಿ ಮುಖಮಂಟಪ ನಿರ್ಮಿಸಿದ. ಕ್ರಿ. ಶ. ೧೭೨೧ರಲ್ಲಿ ಪೋರ್ಚುಗೀಸರು ಬೃಹತ್ ಘಂಟೆ ನಿರ್ಮಿಸಿದರು ಎಂಬುದಕ್ಕೆ ದಾಖಲೆಗಳಿವೆ.

ಭೇಟಿ ನೀಡುವ ಸಮಯ.
ಮಹಾಶಿವರಾತ್ರಿಯಂದು ಇಲ್ಲಿ ದೊಡ್ಡ ರಥೋತ್ಸವ ಜರುಗುತ್ತದೆ. ಪ್ರತಿ ಸೋಮವಾರ ವಿಶೇಷ ಪೂಜೆಗಳಿದ್ದು, ಪ್ರತಿನಿತ್ಯವೂ ಮೂರು ಬಾರಿ ರುದ್ರಾಭಿಷೇಕ, ಪಂಚಾಮೃತ ಸ್ನಾನ ನಡೆಯುವುದು ಇಲ್ಲಿನ ವಿಶೇಷ.

ಸೇರುವ ಬಗೆ.
ಮುಂಬೈಯಿಂದ ಇಲ್ಲಿಗೆ ನೇರ ರೈಲು ಸಂಪರ್ಕವಿದೆ. ಪುಣೆಯಿಂದ ಬಸ್, ಜೀಪ್ ಸೇರಿದಂತೆ ಹಲವು ಮಾದರಿ ವಾಹನಗಳ ಸೌಲಭ್ಯವಿದೆ.

ವಸತಿ.
ಇಳಿದುಕೊಳ್ಳಲು ಸಾಕಷ್ಟು ಧರ್ಮಶಾಲೆಗಳಿವೆ. ಹತ್ತಿರದ ಪುಣೆ ಹೊಟೆಲ್ಗಳಿಗೆ ಪ್ರಸಿದ್ಧವಾಗಿದೆ.

--------------------------------------

ಚಿತ್ರ ಕೃಪೆ: www.shaivam.org

4 comments:

 1. ಅನಿಲ್,

  ಡಾಕಿನಿಯ ಭೀಮಶಂಕರದ ದೇವಸ್ಥಾನ, ಅದರಲ್ಲಿನ ಲಿಂಗ ಅದರ ಪ್ರಭಾವ ಶಕ್ತಿ....ಇನ್ನಿತರೆ ಮಾಹಿತಿಗಳನ್ನು ತುಂಬಾ ಚೆನ್ನಾಗಿ ಕೊಟ್ಟಿದ್ದೀರಿ....ಹೀಗೆ ನಿಮ್ಮ ಸೇವೆ ಮುಂದುವರಿಯಲಿ....

  ಆಹಾಂ! ನನ್ನ ಬ್ಲಾಗಿನಲ್ಲಿ ಹಳೇ ಮನೆ-ಹೊಸ ಮನೆ ಕತೆ ಇದೆ. ನೋಡಲು ಬನ್ನಿ....

  ReplyDelete
 2. ಶಿವು,
  ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.

  >>ನನ್ನ ಬ್ಲಾಗಿನಲ್ಲಿ ಹಳೇ ಮನೆ-ಹೊಸ ಮನೆ ಕತೆ ಇದೆ. ನೋಡಲು ಬನ್ನಿ.
  ಖಂಡಿತಾ ಬರುವೆ.

  -ಅನಿಲ್.

  ReplyDelete
 3. ಅನಿಲ್

  ತುಂಬಾ ತಡವಾಗಿ ಬರುತ್ತಿರುವೆ ಕ್ಷಮೆ ಇರಲಿ..

  ನೀವು ಮಾಹಿತಿಗಳು ತುಂಬಾ ಉಪಯುಕ್ತವಾಗಿವೆ..

  ಅಭಿನಂದನೆಗಳು

  ReplyDelete
 4. ಪ್ರಕಾಶ್,
  ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.

  -ಅನಿಲ್.

  ReplyDelete