ಹಿಮಾಲಯದ ಕೇದಾರನಾಥ.
ಎಲ್ಲಿದೆ?
ಹಿಮಾಲಯದ ಇಳಿಜಾರಿನಲ್ಲಿರುವ ಮಂದಾಕಿನಿ ನದಿ ತೀರದಲ್ಲಿ ಸುಮಾರು ೧೧,೭೬೦ ಅಡಿ ಎತ್ತರದ ಸ್ಥಳದಲ್ಲಿದೆ.
ಸ್ಥಳ ಪುರಾಣ.
ಮಹಾಭಾರತದ ಯುದ್ಧದ ನಂತರ ಪಾಂಡವರು ಪಾಪ ಪ್ರಾಯಶ್ಚಿತ್ತಕ್ಕಾಗಿ ಶಿವಲಿಂಗ ಸ್ಥಾಪಿಸಿದರು ಎನ್ನುವುದು ಪುರಾಣದ ನಂಬಿಕೆ.
ಚರಿತ್ರೆಯ ಪ್ರಕಾರ ೮ನೇ ಶತಮಾನದಲ್ಲಿ ನಿರ್ಮಾಣವಾದ ದೇವಸ್ಥಾನ.
ಇಲ್ಲಿನ ಕೇದಾರನಾಥ ಲಿಂಗವು ೮ ಅಡಿ ಎತ್ತರ, ೫ ಅಡಿ ಸುತ್ತಳತೆಯನ್ನು ಹೊಂದಿದೆ.
ಇಲ್ಲಿ ಬೆಳಿಗ್ಗೆ ನಿರ್ವಾಣ ಪೂಜೆ ಮತ್ತು ರಾತ್ರಿ ಶೃಂಗಾರ ಪೂಜೆ ನಡೆಯುವುದೊಂದು ವಿಶೇಷ.
ಇದರ ಒಂದು ಭಾಗಕ್ಕೆ ಜಲ ಪುಷ್ಪಾದಿಗಳ ಅರ್ಚನೆಯಾದರೆ, ಇನ್ನೊಂದು ಭಾಗಕ್ಕೆ ಘೃತ ಲೇಪನವಾಗುತ್ತದೆ.
ಕೇದಾರಲಿಂಗವನ್ನು ಮುಟ್ಟಿ ಪೂಜೆ ಮಾಡಬಹುದು. ಈ ದೇವಸ್ಥಾನದಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯರ ಸಮಾಧಿ ಸ್ಥಳವಿದೆ.
ಭೇಟಿ ನೀಡುವ ಸಮಯ.
ಕೇದಾರನಾಥಕ್ಕೆ ನಾವು ಇಚ್ಛಿಸಿದ ಸಂದರ್ಭದಲ್ಲಿ ಭೇಟಿಕೊಡಲು ಸಾಧ್ಯವಿಲ್ಲ. ಏಕೆಂದರೆ, ಈ ದೇವಸ್ಥಾನ ವರ್ಷದಲ್ಲಿ ಆರು ತಿಂಗಳು ಹಿಮದಲ್ಲಿ ಮುಳುಗಿ ಹೋಗಿರುತ್ತದೆ. ಹೀಗೆ ಹಿಮಾವೃತವಾಗಿದ್ದಾಗಲೂ ಘೃತಾವೃತವಾದ ’ನಂದಾದೀಪ’ ಉರಿಯುತ್ತಲೇ ಇರುವುದು ವಿಶೇಷ. ವೈಶಾಖ ಮಾಸದಿಂದ (ಮೇ ತಿಂಗಳಿನಿಂದ) ಕಾರ್ತಿಕ ಮಾಸದವರೆಗೆ (ನವೆಂಬರ್ ತಿಂಗಳವರೆಗೆ) ಮಾತ್ರ ಇಲ್ಲಿ ದರ್ಶನದ ಅವಕಾಶ. ಕಡೇ ಕಾರ್ತಿಕ ಸೋಮವಾರದ ವಿಶೇಷ ಪೂಜೆಯ ನಂತರ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ಕಾರ್ತಿಕ ಹುಣ್ಣಿಮೆಯಂದು ಇಲ್ಲಿ ರಥೋತ್ಸವ ಇರುತ್ತದೆ. ಶಂಕರ ಜಯಂತಿ ಕೂಡ ಇಲ್ಲಿ ವಿಶಿಷ್ಟವಾಗಿ ಆಚರಿಸಲ್ಪಡುತ್ತದೆ.
ಸೇರುವ ಬಗೆ.
ಕೇದಾರನಾಥಕ್ಕೆ ಹೋಗಲು ದೆಹಲಿ, ಹರಿದ್ವಾರ ಮುಖಂತರ ಗೌರಿಕುಂಡಕ್ಕೆ ಬರಬೇಕು. ಅಲ್ಲಿಂದ ೧೪ ಕಿ. ಮೀ. ದೂರವನ್ನು ನಡಿಗೆ, ಡೋಲಿ ಅಥವಾ ಕುದುರೆ ಸವಾರಿ ಮೂಲಕ ಕ್ರಮಿಸಬೇಕು.
ವಸತಿ.
ಕೇದಾರನಾಥದಲ್ಲಿ ವಸತಿ ಸೌಕರ್ಯವಿಲ್ಲ. ದೇವಪ್ರಯಾಗ (೭೧ ಕಿ. ಮೀ.), ಗೌರಿಕುಂಡ (೧೪ ಕಿ. ಮೀ.) ಅಥವಾ ಉತ್ತರ ಕಾಶಿಗಳಲ್ಲಿ (೨೩೫ ಕಿ. ಮೀ.) ವಸತಿ ವ್ಯವಸ್ಥೆಗಳಿವೆ.
---------------------------------
ಚಿತ್ರ ಕೃಪೆ: www.indiamike.com
ಅನಿಲ್...
ReplyDeleteನೀವು ಇತ್ತೀಚೆಗೆ ಜ್ಯೋತಿರ್ಲಿಂಗ ದರ್ಶನ ಮಾಡಿ ಬಂದಿರಂತೆ ..
ನಿಜವಾ..?
ನನಗೆ ನನ್ನಮ್ಮ ನನ್ನು ಇಲ್ಲಿಗೆಲ್ಲ ಕರೆದು ಕೊಂಡು ಹೋಗಬೆಕೆಂಬ ಆಸೆ ಇದೆ..
ಯಾವಾಗ ಆಗುತ್ತೋ ಗೊತ್ತಿಲ್ಲ..
ನಿಮ್ಮ ಉಪಯುಕ್ತ ಮಾಹಿತಿಗಳಿಗೆ .. ಧನ್ಯವಾದಗಳು..
ನಿಮ್ಮ ಈ ಬರಹಗಳನ್ನು...
ಈಗಲೇ ನನ್ನ ಬಳಿ ಕಾಯ್ದಿರಿಸಿ ಕೊಳ್ಳುವೆ...
ಚಿತ್ರ ಲೇಖನಗಳಿಗೆ
ಮತ್ತೊಮ್ಮೆ ಧನ್ಯವಾದಗಳು..
ಪ್ರಕಾಶ್,
ReplyDeleteಪ್ರತಿಕ್ರಿಯೆಗೆ ತುಂಬಾ ಧನ್ಯವಾದ.
>>ನೀವು ಇತ್ತೀಚೆಗೆ ಜ್ಯೋತಿರ್ಲಿಂಗ ದರ್ಶನ ಮಾಡಿ ಬಂದಿರಂತೆ ..
ನಿಜವಾ..?
ನಿಜ, ಆದರೆ ನಾನು ಕಳೆದ ನವೆಂಬರಿನಲ್ಲಿ ಶಿರಡಿಗೆ ಹೋದಾಗ ತ್ರ್ಯಂಬಕೇಶ್ವರಕ್ಕೆ ಹೋಗಿದ್ದೆ (ಎರಡನೆಯ ಬಾರಿ).
>>ನನಗೆ ನನ್ನಮ್ಮ ನನ್ನು ಇಲ್ಲಿಗೆಲ್ಲ ಕರೆದು ಕೊಂಡು ಹೋಗಬೆಕೆಂಬ ಆಸೆ ಇದೆ..
ನನಗೂ ನನ್ನ ತಂದೆ ತಾಯಿಯನ್ನು ಕರೆದುಕೊಂಡು ಹೋಗಬೇಕೆನ್ನುವ ಆಸೆ ಇದೆ.
ಆಸೆ ಯಾವಾಗ ಈಡೇರುತ್ತದೆಯೋ ನಾನರಿಯೇ...
ಅಂದಹಾಗೆ, ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.
-ಅನಿಲ್.
ಅನಿಲ್,
ReplyDeleteಕೇದಾರನಾಥ ದೇವಾಲಯದ ಬಗ್ಗೆ ತುಂಬಾ ಉತ್ತಮ ಮಾಹಿತಿಯನ್ನು ನೀಡಿದ್ದೀರಿ...ಧನ್ಯವಾದಗಳು...
ನನ್ನ ಬ್ಲಾಗಿನ ಚಿಟ್ಟೆಕತೆ ಯನ್ನು ನೋಡಲು ಬ್ಲಾಗಿಗೆ ಬನ್ನಿ...ಮತ್ತು ನಿಮ್ಮ ಪ್ರಿತಿಕ್ರಿಯೆಯನ್ನು ದಯವಿಟ್ಟು ಬ್ಲಾಗಿನಲ್ಲೇ ಬರೆಯಿರಿ....