My Blog List

Wednesday, March 18, 2009

ಆನಂದಭೈರವಿ - ಚಲನಚಿತ್ರ

ಆನಂದ ಭೈರವಿ ಚಿತ್ರ ೧೯೮೨ರಲ್ಲಿ ಬಿಡುಗಡೆಯಾಯಿತು.

ಸಂಗೀತಕ್ಕೆ ಮತ್ತು ನೃತ್ಯಕ್ಕೆ ಹೆಚ್ಚು ಮಹತ್ವವಿದ್ದ ಚಿತ್ರವಿದು.

ಈ ಚಿತ್ರವನ್ನು "ಕನ್ನಡಚಿತ್ರರಂಗದ ಕುಳ್ಳ" ಎಂಬ ಖ್ಯಾತಿ ಪಡೆದಿರುವ ದ್ವಾರಕೀಶ್ ಅವರು ನಿರ್ಮಿಸಿದರು.

ಈ ಚಿತ್ರದ ಎಲ್ಲಾ ಹಾಡುಗಳು ತುಂಬಾ ಸೊಗಸಾಗಿವೆ.

ಈ ಚಿತ್ರಕ್ಕೆ ಸೋರಟ್ ಅಶ್ವಥ್ ಅವರ ಸಾಹಿತ್ಯ ಹಾಗೂ ರಮೇಶ್ ನಾಯ್ಡು ಅವರ ಸಂಗೀತವಿದೆ.

ಹಿನ್ನೆಲೆಗಾಯನದಲ್ಲಿ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ವಾಣಿ ಜಯರಾಂ ರಾರಾಜಿಸಿದ್ದಾರೆ.

ಈ ಚಿತ್ರದಲ್ಲಿ ಗಿರೀಶ್ ಕಾರ್ನಾಡ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಬರುವ ಮೊದಲ ಹಾಡು ಇದು.

ಚೋಟುದ್ದ ಹೊಟ್ಟೆಗಾಗಿ ಗೇಣುದ್ದ ಬಟ್ಟೆಗಾಗಿ
ಚೋಟುದ್ದ ಹೊಟ್ಟೆಗಾಗಿ ಗೇಣುದ್ದ ಬಟ್ಟೆಗಾಗಿ
ದಿನವೆಲ್ಲಾ ಹೋರಾಟ ಲೋಕದಲ್ಲಿ
ದಿನವೆಲ್ಲಾ ಹೋರಾಟ ಲೋಕದಲ್ಲಿ

ಈ ಹಾಡಿನಲ್ಲಿ ಭೈರವಿ ದೊಂಬರಾಟ ಆಡ್ತಿರ್ತಾಳೆ.

ಮುಂದಿನ ಹಾಡು
ಬ್ರಹ್ಮಾಂಜಲಿ...(ಮುಂದೆ ಗೊತ್ತಿಲ್ಲ). :(

ಈ ಹಾಡಿನಲ್ಲಿ ಭೈರವಿಗೆ ಗಿರೀಶ್ ಕಾರ್ನಾಡ್ ನೃತ್ಯಾಭ್ಯಾಸ ಪ್ರಾರಂಭ ಮಾಡ್ತಾರೆ.

ಈ ಹಾಡಿನ ನಂತರ ಬರುವ ಹಾಡು

ಚೈತ್ರದ ಕುಸುಮಾಂಜಲಿ
ಚೈತ್ರದ ಕುಸುಮಾಂಜಲಿ
ಪಂಚಮ ಸ್ವರದಲಿ ಪ್ರೌಢ ಕೋಗಿಲೆಯ
ಪಂಚಮ ಸ್ವರದಲಿ ಪ್ರೌಢ ಕೋಗಿಲೆಯ
ಕರೆಯೇ ಮನೋಲ್ಲಾಸ ಅಮೃತವರ್ಷಿಣಿ
ಕರೆಯೇ ಮನೋಲ್ಲಾಸ ಅಮೃತವರ್ಷಿಣಿ

ಈ ಹಾಡಿನಲ್ಲಿ ಗಿರೀಶ್ ಕಾರ್ನಾಡ್ ಅವರ ನೃತ್ಯ ತುಂಬಾ ಚೆನ್ನಾಗಿದೆ.
ಗಿರೀಶ್ ಕಾರ್ನಾಡರ ನರ್ತನಾ ಸಾಮರ್ಥ್ಯ ಇದರಲ್ಲಿ ನೋಡಬಹುದು.

ನಂತರ ಬರುವುದು ಈ ಯುಗಳ ಗೀತೆ

ಹಾಡುವ ಮುರಳಿಯ ಕುಣಿಯುವ ಗೆಜ್ಜೆಯ
ಎದೆಯಲಿ ಒಂದೇ ರಾಗ
ಅದು ಆನಂದ ಭೈರವಿ ರಾಗ
ಕರೆಯುವ ಕೊಳಲಿನ ನಲಿಯುವ ಗೆಜ್ಜೆಯ
ಎದೆಯಲಿ ಪ್ರೇಮ ಪರಾಗ
ಅದು ಆನಂದ ಭೈರವಿ ರಾಗ

ಈ ಹಾಡು ಆನಂದ ಹಾಗು ಭೈರವಿ ಅವರ ಮೇಲೆ ಚಿತ್ರಿತವಾಗಿದೆ.

ನಂತರ ಬರುವ ಹಾಡು
ಮಲಗಿರುವೆಯಾ ರಂಗನಾಥ... (ಮುಂದೆ ಗೊತ್ತಿಲ್ಲ). :(

ಮಾಳವಿಕಾ ಅವರ ನರ್ತನಾ ಸಾಮರ್ಥ್ಯ ಈ ಹಾಡಿನಲ್ಲಿ ನೋಡಬಹುದು.

ಇನ್ನು ಕ್ಲೈಮ್ಯಾಕ್ಸ್.
ಕ್ಲೈಮ್ಯಾಕ್ಸಿನಲ್ಲಿ ಬರುವ ಹಾಡು ಇದು.

ಬಾ ಬಾ ಬಾ ರಾಗವಾಗಿ
ಸೇರೆನ್ನ ನಾದವಾಗಿ
ನಮ್ಮಿಂದಿನ ಮಿಲಿನ ರಾಗ ಸಂಭ್ರಮ
ನೀನಾಡುವ ನಾಟ್ಯ ನಾದ ಸಂಗಮ

ಈ ಹಾಡಂತೂ ತುಂಬಾ ಸುಮಧುರವಾಗಿದೆ.
ಕೊನೆಯಲ್ಲಿ ಬರುವ ವೇಣುವಾದನ ಅದ್ಬುತವಾಗಿದೆ.

ಈ ಚಿತ್ರದಲ್ಲಿರುವ ಎಲ್ಲಾ ಹಾಡುಗಳು ನನಗಿಷ್ಟ.

ಈ ಚಿತ್ರ ದ್ವಾರಕೀಶ್ ಅವರು ನಿರ್ಮಿಸಿದ ೧೯ನೇ ಚಿತ್ರ.

------------------------------------------
ಇಂದು ಮನೆಗೆ ಬಂದಾಗ ಟಿವಿಯಲ್ಲಿ ಈ ಚಿತ್ರ ಬರ್ತಿತ್ತು.
ಹಾಗಾಗಿ ಈ ಬರಹ. :)

14 comments:

 1. ಅನಿಲ್,

  ಕೆಲಸದ ಒತ್ತಡದಿಂದಾಗಿ ನಿಮ್ಮ ಬ್ಲಾಗಿಗೆ ಬರುವುದು ತಡವಾಯಿತು....

  ಆನಂದ ಬೈರವಿ..ಸಿನಿಮಾ...ಅದರ ಸಂಗೀತ....ನಟ ಬಿಡುಗಡೆಯಾದ ವರ್ಷ ಎಲ್ಲಾ ವಿವರ ಚೆನ್ನಾಗಿ ಕೊಟ್ಟಿದ್ದೀರಿ...ಧನ್ಯವಾದಗಳು.

  ReplyDelete
 2. ಶಿವು,
  ಕೆಲಸದ ಒತ್ತಡದಲ್ಲೂ ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದ.

  ನನಗೂ ತುಂಬಾ ಕೆಲಸ ಆಗಿಬಿಟ್ಟಿದೆ. ಜಾಸ್ತಿ ಬರೆಯಲು ಸಮಯ ಆಗ್ತಿಲ್ಲ.

  -ಅನಿಲ್.

  ReplyDelete
 3. ಇದು ನನಗೂ ಇಷ್ಟದ ಚಿತ್ರ..

  "ಹಾಡುವ ಮುರಳಿಯ.."
  ಹಾಡು ನಾನು ಆಗಾಗ ಗುನುಗುತ್ತ ಇರುತ್ತೇನೆ
  ಮತ್ತೆ ಹಳೆಯದೆನ್ನಲ್ಲ ನೆನಪಿಸಿದ್ದಕ್ಕೆ

  ಧನ್ಯವಾದಗಳು

  ReplyDelete
 4. Hi Anil,

  Thats a cool info that you provided!! Seems like you are into karnatic classical..?

  ReplyDelete
 5. ಪ್ರಕಾಶ್,
  ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.

  -ಅನಿಲ್.

  ReplyDelete
 6. Hi Ashwini,

  Thanks for your Comments...

  >>Seems like you are into karnatic classical..?
  Yeah... I love Karnatic classical and also Hindustani Classical Music...

  Btw,
  Nice Profile Pic of Yours.

  -Anil.

  ReplyDelete
 7. ಒಳ್ಳೆ ಮಾಹಿತಿ ನೀಡಿದ್ದೀರಿ. ಹಳೇ ಹಾಡುಗಳು, ಹಳೇ ಸಿನಿಮಾಗಳು ನಂಗೂ ಇಷ್ಟ. ಈವಾಗ ಅಂಥ ಮಧುರ, ಜೀವಂತಿಕೆಯುಳ್ಳ ಹಾಡುಗಳು ಬರೋದೇ ಕಡಿಮೆಯಾಗಿಬಿಟ್ಟಿದೆ.
  -ಧರಿತ್ರಿ

  ReplyDelete
 8. ಮೊನ್ನೆ ಇದ್ದಕ್ಕಿದ್ದ ಹಾಗೆ ಈ ಸಿನೆಮಾ ನೆನಪಿಗೆ ಬಂತು... ನೋಡ್ಬೇಕಂದರೆ ಇನ್ನೊಂದೆರಡು ತಿಂಗಳು ಕಾಯ್ಬೇಕು :(

  ReplyDelete
 9. ಧರಿತ್ರಿ,
  ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.

  >>ಈವಾಗ ಅಂಥ ಮಧುರ, ಜೀವಂತಿಕೆಯುಳ್ಳ ಹಾಡುಗಳು ಬರೋದೇ ಕಡಿಮೆಯಾಗಿಬಿಟ್ಟಿದೆ.
  ದಿಟವಾದ ಮಾತು.

  -ಅನಿಲ್.

  ReplyDelete
 10. ಪ್ರಶಾಂತ್,
  ನನ್ನ ಬ್ಲಾಗಿಗೆ ಸ್ವಾಗತ!

  ಕಳೆದವಾರ ಈ ಚಿತ್ರ ಟಿವಿಯಲ್ಲಿ ಪ್ರಸಾರವಾಗಿತ್ತು.


  -ಅನಿಲ್.

  ReplyDelete
 11. ಅನಿಲ್ ರಮೇಶ್
  ಹಳೆಯ ಚಿತ್ರವೊ೦ದರ ಸುಮಧುರ ಹಾಡುಗಳನ್ನು ಮತ್ತೆ ನೆನಪಿಸಿದ್ದಿರಿ, ವ೦ದನೆ

  ReplyDelete
 12. ಪರಾಂಜಪೆ,
  ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದ.
  ಹೀಗೇ ಬರುತ್ತಿರಿ.

  -ಅನಿಲ್.

  ReplyDelete
 13. ನನ್ನಿಷ್ಟದ ಚಲನಚಿತ್ರ ಸಹ. ಚಿತ್ರದ ಬಗ್ಗೆ ಚೆನ್ನಾಗಿ ವಿವರಣೆ ನೀಡಿದ್ದೀರಿ. ಎಷ್ಟೊಂದು ನೆನಪೇ ಇರ್ಲಿಲ್ಲ. ಯು ಟ್ಯೂಬ್ ಲ್ಲಿ ಬಾ ಬಾ ರಾಗವಾಗಿ ಹಾಡು ಇದೆ. ಹಾಗಾಗಿ ಅದು ಮಾತ್ರ ಚೆನ್ನಾಗಿ ನೆನಪಿದೆ.ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

  ReplyDelete
 14. ಭಾರ್ಗವಿ,
  ನನ್ನ ಬ್ಲಾಗಿಗೆ ಸ್ವಾಗತ!

  ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.
  ಹೀಗೇ ಬರುತ್ತಿರಿ.

  -ಅನಿಲ್

  ReplyDelete