ಅನಿಕೇತನ
ಮನದಲ್ಲಿ ಮೂಡುವ ಆಲೋಚನೆಗಳು, ಬರವಣಿಗೆ ರೂಪದಲ್ಲಿ...
My Blog List
Showing posts with label
#ಸ್ವಗತ #Monologue #ಧರ್ಮ #Dharma #ಚೌಪದಿ_ಚೌಕ #Chaupadi_Chauka #ಅನಿಕೇತನ #anikEtana #kannaDa
.
Show all posts
Showing posts with label
#ಸ್ವಗತ #Monologue #ಧರ್ಮ #Dharma #ಚೌಪದಿ_ಚೌಕ #Chaupadi_Chauka #ಅನಿಕೇತನ #anikEtana #kannaDa
.
Show all posts
Saturday, May 29, 2021
ಚೌಪದಿ - 119
ಯಾವುದೋ ವಿಷಯಕ್ಕೆ ಮನವನ್ನು ಹದಗೆಡಿಸಿ।
ಭಾವನೆಗೆಯಡಿಯಾಳು ನೀನಾಗಬೇಡ॥
ನೋವುಗಳ ನೆನೆಯದೇ ನಸುನಗುತ ಸಾಗುವುದೆ।
ಜೀವನದ ಧರ್ಮವೋ - ಅನಿಕೇತನ॥ 119 ॥
Wednesday, May 26, 2021
ಚೌಪದಿ - 118
ಬದುಕೆಂಬ ಚರ್ಮವದು ದಿನದಿನವು ಸವೆದಿರಲು।
ಹದವಾದ ಕೆನೆಹಾಲಿನಾರೈಕೆ ಮಾಡು॥
ಮದವನ್ನು ಬಿಟ್ಟುಬಿಡೆ ಮನವರಿಕೆಯಾಗುವುದು।
ಬದುಕಲ್ಲೆ ಧರ್ಮವಿದೆ - ಅನಿಕೇತನ॥ 118 ॥
Tuesday, May 25, 2021
ಚೌಪದಿ - 117
ಕರ್ಮವನು ಮಾಡುತಿರು ಫಲದ ಚಿಂತೆಯ ಬಿಟ್ಟು।
ಧರ್ಮವನು ಬಿಡದೆಯೇ ಸಾಗುತಿರು ಮುಂದೆ॥
ಕರ್ಮವದು ತೂಗುವುದು ಬದುಕಿನಾ ಹಾದಿಯನು।
ಧರ್ಮವದು ಕಾಯುವುದೊ - ಅನಿಕೇತನ॥ 117 ॥
Older Posts
Home
Subscribe to:
Posts (Atom)