ರೇಗಿಸುವ ತಮ್ಮನನೆ ಮಗನೆಂದು ತಿಳಿದಿರಲು|
ತ್ಯಾಗವನೆ ಮಾಡಿಹಳು ಜೀವನವ ತೇಯ್ದು||
ಯಾಗವನೆ ಮಾಡಿರಲು ತಮ್ಮನಾ ಏಳಿಗೆಗೆ|
ಸಾಗಿಹಳು ಮಗನೊಡನೆ - ಅನಿಕೇತನ|| 184 ||
ಅನಿಕೇತನ
ಮನದಲ್ಲಿ ಮೂಡುವ ಆಲೋಚನೆಗಳು, ಬರವಣಿಗೆ ರೂಪದಲ್ಲಿ...
My Blog List
Friday, June 23, 2023
ಚೌಪದಿ - 184
Wednesday, March 22, 2023
ಚೌಪದಿ - 183
ಎತ್ತೆತ್ತ ನೋಡಿದರು ಚಿಗುರೆಲೆಯು ಕಂಡಿಹುದು|
ಮತ್ತೊಮ್ಮೆ ಬಂದಿರಲು ಹೊಸತೊಂದು ವರ್ಷ||
ಅತ್ತಿತ್ತ ಚೆಲ್ಲಿರಲು ನಗೆಯನ್ನು ಸಂತಸದಿ|
ಬಿತ್ತಿಹುದು ಹೊಂಗನಸನನಿಕೇತನ|| 183 ||
Friday, June 24, 2022
ಚೌಪದಿ - 182
ಯೋಗದಾ ಪರಿಚಯವ ಮಾಡಿಹರು ಗುರುವರ್ಯ|
ಯೋಗವೇ ಜೀವನದ ಸಾರವೆಂದಿಹರು||
ಯೋಗವನೆ ಮಾಡುತ್ತ ಸಂಯಮದಿ ನಡೆದಿಹರು|
ಯೋಗ ಧನ್ವಂತರಿಯು - ಅನಿಕೇತನ|| 182 ||
Thursday, June 23, 2022
ಚೌಪದಿ - 181
ನೋವು ನಲಿವುಗಳೆರಡು ಸಮನಾಗಿ ಸಂಚರಿಸೆ|
ಹಾವಭಾವಗಳೆರಡು ಕೂಡುವುದು ಮನದಿ||
ನೋವು ನಲಿವುಗಳೆರಡು ಬಾಳಿನಲಿ ಎಂದೆಂದು|
ಬೇವು ಮಾವುಗಳಂತೆ - ಅನಿಕೇತನ|| 181 ||
Friday, December 24, 2021
ಚೌಪದಿ - 180
ಬರೆದಿರುವೆ ಚೌಪದಿಯ ಮತ್ತೊಮ್ಮೆ ನಾನಿಂದು।
ಮರೆಯದೆಯೆ ನೆನೆದಿಹೆನು ಗುರುಗಳಾ ಕೃಪೆಯ॥
ಬರೆಯುತಿರೆ ಸುಖವಿಹುದು ಮನದಲ್ಲಿ ದಿನದಿನವು।
ಮರೆಯದೇ ಬರೆಯುವೆನು - ಅನಿಕೇತನ॥ 180 ॥
Subscribe to:
Posts (Atom)