My Blog List

Wednesday, February 11, 2009

ಶ್ರೀ ಹರಿವರಾಸನಾಷ್ಟಕಂ

ನಾನು ಮಾಲೆ ಹಾಕಿಕೊಂಡು ಅಯ್ಯಪ್ಪನ ವ್ರತ ಆಚರಿಸಿ ಶಬರಿಮಲೆಗೆ ಹೋಗುತ್ತಿರುವ ವಿಷಯ ನಿಮಗೆ ಗೊತ್ತಿರಬಹುದು.
ಇಂದು ದೈನಂದಿನ ಪೂಜೆ ಮುಗಿಸಿ ಅಯ್ಯಪ್ಪನ ಹಾಡುಗಳನ್ನು ಕೇಳುತ್ತಿದ್ದೆ. ಅಂತರ್ಜಾಲದಲ್ಲಿ ಹೀಗೇ ಯೂಟ್ಯೂಬ್.ಕಾಂ ಅಲ್ಲಿ ಅಯ್ಯಪ್ಪನ ಕೀರ್ತನೆಗಳನ್ನು ಹುಡುಕುತ್ತಿದ್ದಾಗ ಸಿಕ್ಕ ದೇವರನಾಮ ಇದು. ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ ಆಯ್ತು.
ಹಾಗಾಗಿ ಇಲ್ಲಿ ದೇವರನಾಮ ಮತ್ತು ಅದರ ವೀಡಿಯೋ ಮತ್ತು ಈ ದೇವರನಾಮದ .mp3 Format ಕೊಂಡಿ ಇಲ್ಲಿ ಸೇರಿಸಿದ್ದೇನೆ.

ಈ ಹಾಡು ಅಯ್ಯಪ್ಪನಿಗೆ ಲಾಲಿ ಹಾಡಿನ ತರಹ. ಹಾಗಾಗಿ ಈ ದೇವರನಾಮವನ್ನು ರಾತ್ರಿಹೊತ್ತು ಹೇಳಿಕೊಂಡರೆ ಒಳ್ಳೆಯದು.

ಹಾಡಿನ ವೀಡಿಯೋ ಇಲ್ಲಿದೆ.ಶ್ರೀ ಹರಿವರಾಸನಾಷ್ಟಕಮ್

||ಹರಿವರಾಸನಂ ವಿಶ್ವಮೋಹನಂ|
||ಹರಿದಧೀಶ್ವರಂ ಆರಾಧ್ಯಪಾದುಕಂ||
||ಅರಿವಿಮರ್ದನಂ ನಿತ್ಯನರ್ತನಂ|
||ಹರಿಹರಾತ್ಮಜಂ ದೇವಮಾಶ್ರಯೇ|| ೧ ||

||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ|
||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||

||ಶರಣಕೀರ್ತನಂ ಭಕ್ತಮಾನಸಂ|
||ಭರಣಲೋಲುಪಂ ನರ್ತನಾಲಸಂ||
||ಅರುಣಭಾಸುರಂ ಭೂತನಾಯಕಂ|
||ಹರಿಹರಾತ್ಮಜಂ ದೇವಮಾಶ್ರಯೇ|| ೨ ||

||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ|
||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||

||ಪ್ರಣಯಸತ್ಯಕಂ ಪ್ರಾಣನಾಯಕಂ|
||ಪ್ರಣತಕಲ್ಪಕಂ ಸುಪ್ರಭಾಂಚಿತಂ||
||ಪ್ರಣವಮಂದಿರಂ ಕೀರ್ತನಪ್ರಿಯಂ|
||ಹರಿಹರಾತ್ಮಜಂ ದೇವಮಾಶ್ರಯೇ|| ೩ ||

||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ|
||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||

||ತುರಗವಾಹನಂ ಸುಂದರಾನನಂ|
||ವರಗದಾಯುಧಂ ವೇದವರ್ಣಿತಂ||
||ಗುರುಕೃಪಾಕರಂ ಕೀರ್ತನಪ್ರಿಯಂ|
||ಹರಿಹರಾತ್ಮಜಂ ದೇವಮಾಶ್ರಯೇ|| ೪ ||

||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ|
||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||

||ತ್ರಿಭುವನಾರ್ಚಿತಂ ದೇವತಾತ್ಮಕಂ|
||ತ್ರಿನಯನಂಪ್ರಭುಂ ದಿವ್ಯದೇಶಿಕಂ||
||ತ್ರಿದಶಪೂಜಿತಂ ಚಿಂತಿತಪ್ರದಂ||
||ಹರಿಹರಾತ್ಮಜಂ ದೇವಮಾಶ್ರಯೇ|| ೫ ||

||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ|
||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||

||ಭವಭಯಾಪಹಂ ಭಾವುಕಾವಹಂ|
||ಭುವನಮೋಹನಂ ಭೂತಿಭೂಶಣಂ||
||ಧವಳವಾಹನಂ ದಿವ್ಯವಾರಣಂ|
||ಹರಿಹರಾತ್ಮಜಂ ದೇವಮಾಶ್ರಯೇ|| ೬ ||

||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ|
||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||

||ಕಲಮೃದುಸ್ಮಿತಂ ಸುಂದರಾನನಂ|
||ಕಲಭಕೋಮಲಂ ಗಾತ್ರಮೋಹನಂ||
||ಕಲಭಕೇಸರೀ ವಾಜಿವಾಹನಂ|
||ಹರಿಹರಾತ್ಮಜಂ ದೇವಮಾಶ್ರಯೇ|| ೭ ||

||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ|
||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||

||ಶ್ರಿತಜನಪ್ರಿಯಂ ಚಿಂತಿತಪ್ರದಂ|
||ಶೃತಿವಿಭೂಶಣಂ ಸಾಧುಜೀವನಂ||
||ಶೃತಿಮನೋಹರಂ ಗೀತಲಾಲಸಂ|
||ಹರಿಹರಾತ್ಮಜಂ ದೇವಮಾಶ್ರಯೇ|| ೮ ||

||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ|
||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||ಈ ದೇವರನಾಮವನ್ನು Download ಮಾಡಲು ಇಲ್ಲಿ ಚಿಟುಕಿಸಿರಿ.

--------------------------------------------------------------
ಮರೆತಿದ್ದೆ: ಬ್ಲಾಗಿಂಗ್ ಜಗತ್ತಿಗೆ ಬಂದು ಇಂದಿಗೆ ಒಂದು ವರ್ಷ ಆಯಿತು.

5 comments:

 1. ಅನಿಲ್,
  ವಾರ್ಷಿಕೋತ್ಸವಕ್ಕೆ ಅಭಿನಂದನೆಗಳು
  --
  ಪಾಲ

  ReplyDelete
 2. ಪಾಲ,
  ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.

  ನಿಮ್ಮ ಪ್ರೋತ್ಸಾಹ ಅಗತ್ಯ.

  -ಅನಿಲ್.

  ReplyDelete
 3. ಅನಿಲ್...

  ಹ್ರದಯಪೂರ್ವಕ ಅಭಿನಂದನೆಗಳು..

  ನಿಮಗೆ ಇನ್ನೂ ಯಶಸ್ಸು ಸಿಗಲೆಂದು ಹಾರೈಸುವೆ..!

  ಅಯಪ್ಪ ಸ್ವಾಮಿ ಭಜನೆ ಚೆನ್ನಾಗಿದೆ

  ಧನ್ಯವಾದಗಳು...

  ReplyDelete
 4. ಪ್ರಕಾಶ್,
  ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.

  ನಿಮ್ಮ ಪ್ರೋತ್ಸಾಹ ಅಗತ್ಯ.

  -ಅನಿಲ್.

  ReplyDelete
 5. ಎಲ್ಲರಿಗೂ ಹ್ರದಯಪೂರ್ವಕ ಅಭಿನಂದನೆಗಳು..

  ಎಲ್ಲರಿಗೂ ಇನ್ನೂ ಯಶಸ್ಸು ಸಿಗಲೆಂದು ಹಾರೈಸುವೆ..!

  ಅಯಪ್ಪ ಸ್ವಾಮಿ ಭಜನೆ ಚೆನ್ನಾಗಿದೆ

  ಎಲ್ಲರಿಗೂ ಧನ್ಯವಾದಗಳು...

  ReplyDelete