My Blog List

Thursday, June 11, 2009

ಅಂತರ್ಜಾಲವಿಲ್ಲದೆ...


ಮೇತಿಂಗಳ ಕೊನೆಯ ಶನಿವಾರ ನನ್ನ ಕಂಪ್ಯೂಟರಿನ ಅಂತರ್ಜಾಲ ಸಂಪರ್ಕ ಕಡಿದು ಹೋಯ್ತು. ನೆಟ್-ವರ್ಕ್ ಕಾರ್ಡ್ ಹಾಳಾಗಿತ್ತು.

ಜೂನ್ ಒಂದರಿಂದ ಆಫೀಸ್ ಅಲ್ಲಿ ಕೂಡ ಅಂತರ್ಜಾಲ ಸಂಪರ್ಕ ಕಡಿದು ಹೋಯ್ತು. ಅಂತರ್ಜಾಲ ಒಂದು Addiction.

ಅಂತರ್ಜಾಲ ಇಲ್ಲದಿದ್ದರೆ ಯಾವುದೋ ಬೇರೆ ಊರಿಗೆ ಬಂದ ಹಾಗೆ ಅನ್ಸತ್ತೆ.

ನನ್ನ ಕಂಪ್ಯೂಟರಿನಲ್ಲಿ ಉಬುಂಟು ೯.೦೪

ಇದೆಲ್ಲದರ ಮಧ್ಯೆ, ಕೆಲಸದ ಒತ್ತಡ. ಆದರೂ ಇಂದು ಬಿಡುವು ಮಾಡಿಕೊಂಡು ಕಾರನ್ನು ಸರ್ವೀಸ್ ಮಾಡಲು ಸರ್ವೀಸ್ ಸ್ಟೇಷನ್ ಗೆ ಕೊಟ್ಟೆ. ನಂತರ ಆಫೀಸಿನ ಬಳಿ ಇರುವ ಕಂಪ್ಯೂಟರ್ ಹಾರ್ಡ್-ವೇರ್ ಅಂಗಡಿಗೆ ಹೋಗಿ ನೆಟ್-ವರ್ಕ್ ಕಾರ್ಡ್, ಸಿಡಿ ಪೌಚ್, ೫ ಖಾಲಿ ಸಿಡಿ ಮತ್ತು ೫ ಖಾಲಿ ಡಿವಿಡಿಗಳನ್ನು ಕೊಂಡು ಕೊಂಡೆ.

ಮನೆಗೆ ಬಂದು ನೆಟ್-ವರ್ಕ್ ಕಾರ್ಡನ್ನು ಕಂಪ್ಯೂಟರಿಗೆ install ಮಾಡಿದೆ.

ಮನೆಯಲ್ಲಿ ಅಂತರ್ಜಾಲ ಈಗ ಸರಿ ಹೋಗಿದೆ.

-------------------------------------------------------------------------

ಉಬುಂಟು ೯.೦೪ install ಮಾಡಿ ಬರೆದ ಮೊದಲ ಬ್ಲಾಗ್ ಬರಹ.

3 comments:

 1. ಅನಿಲ್....

  ನಿಜ ನೆಟ್ ಇಲ್ದಿದ್ರೆ
  ಏನೋ ಕಳ್ಕೊಂಡ ಹಾಗೆ...

  ReplyDelete
 2. ಹೌದು.

  ಕಳೆದ ಹದಿಮೂರು ದಿನಗಳು ಇಂಟರ್ನೆಟ್ ಇಲ್ಲದೇ ನಾ ಪಟ್ಟ ಪಾಡು ಯಾರಿಗೂ ಬೇಡ.

  ಲೋಕದಲ್ಲಿ ಏನಾಗ್ತಿದೆ ಅಂತ ಗೊತ್ತಾಗ್ತಿರ್ಲಿಲ್ಲ.
  ಈಗ back to Normal.

  -ಅನಿಲ್

  ReplyDelete
 3. ಅನಿಲ್,

  ಮೊನ್ನೆ ಭಯಂಕರ ಮಳೆ ಬಿತ್ತಲ್ಲ. ಆ ಸಮಯದಲ್ಲಿ ನನ್ನ ಲ್ಯಾನ್ ಕಾರ್ಡ್ ಹಾಳಾಗಿದೆ. ಅದು ಗೊತ್ತಾಗದೇ ಅಂತರಜಾಲ ಕಂಪನಿಯವರು ಎಲ್ಲಾ ಕಡೆಯಿಂದ ಸರಿಪಡಿಸಿಕೊಂಡು ನಂತರ ಇಂದು ಹೊಸ ಕಾರ್ಡು ಹಾಕಿದ್ದರಿಂದ ಈಗ ಸರಿಹೋಗಿದೆ....
  ನನಗೂ ನೆಟ್ ಇಲ್ಲದ್ದರಿಂದ ನೀರಿನಿಂದ ತೆಗೆದ ಮೀನಿನಂತಾಗಿದ್ದೆ...

  ReplyDelete