ಪುರಾತನ ಜಗತ್ತಿನ ಏಳು ಅದ್ಭುತಗಳು.
ಪ್ರಾಚೀನ ಜಗತಿನ ಅದ್ಭುತಗಳನ್ನು ಗುರುತಿಸಿದವರು ಗ್ರೀಕರು. ಅವು ಇದ್ದ ಸ್ಥಳಗಳು ಈಗ ಯೂರೋಪು ಮತ್ತು ಮಧ್ಯ ಪೂರ್ವ ರಾಷ್ಟ್ರಗಳಲ್ಲಿವೆ. ಈ ಅದ್ಭುತಗಳ ಪೈಕಿ ಪಿರಮಿಡ್ ಗಳು ಐದು ಸಾವಿರ ವರ್ಷಗಳ ನಂತರವೂ ತಲೆಯೆತ್ತಿ ನಿಂತಿವೆ. ಪ್ರತಿಯೊಂದು ಅದ್ಭುತ ನಿರ್ಮಾಣದ ಹಿಂದೆ ಮನುಷ್ಯನ ಬುದ್ಧಿಶಕ್ತಿ ಮತ್ತು ಅಪಾರ ಶ್ರಮ ಇದ್ದಿತೆಂಬುದನ್ನು ಮರೆಯಲಾಗದು. ಅವುಗಳ ಬಗ್ಗೆ ಲಭ್ಯವಿದ್ದ ಸಾಹಿತ್ಯ, ದಾಖಲೆಗಳ ಆಧಾರದ ಮೇಲೆ ಅವುಗಳ ಸಂಪೂರ್ಣ ಚಿತ್ರವನ್ನು ಕಲ್ಪಿಸಿಕೊಳ್ಳಲು, ಚಿತ್ರಗಳನ್ನು ರಚಿಸಲು ಪ್ರಯತ್ನಿಸಲಾಗಿದೆ. ಉದಾಹರಣೆಗೆ, ಬ್ಯಾಬಿಲೀನಿಯಾದದಲ್ಲಿ ನಡೆದ ಉತ್ಖನನದ ಸಂದರ್ಭದಲ್ಲಿ ದೊರೆತ ಅವಶೇಷಗಳ ಆಧಾರದ ಮೇಲೆ ಅಲ್ಲಿದ್ದ ಅದ್ಭುತ ಗೋಡೆಯ ಒಂದು ಭಾಗವನ್ನು ಯಥಾವತ್ ನಿರ್ಮಿಸಿ ಬರ್ಲಿನ್ನಿನ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಹಾಗೆಯೇ ಮುಸಲ್ಲೋನನ ಸಮಾಧಿಯ ಭಿತ್ತಿಯಲ್ಲಿದ್ದ ಉಬ್ಬು ಚಿತ್ರಗಳನ್ನು ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಅರ್ತೆಮಿಸ್ ಫಲದೇವತೆಯ ಪ್ರತಿಮೆ ಸಹ ವಸ್ತು ಸಂಗ್ರಹಾಲದಲ್ಲಿದೆ. ಅಲೆಕ್ಸಾಂಡ್ರಿಯಾದ ನಾವೆಗಳಿಗೆ ದಾರಿ ತೋರಿಸುವ ದೀಪಸ್ತಂಭ ಜಗತ್ತಿನಲ್ಲಿ ನಿರ್ಮಿಸಿದ ಮೊತ್ತ ಮೊದಲಿನ ದೀಪ ಸ್ತಂಭವೆಂದು ಹೇಳಲಾಗಿದೆ.
ಪ್ರಾಚೀನ ಕಾಲದಿಂದ ಇಂದಿನವರೆಗೆ ಮನುಷ್ಯ ಅದ್ಭುತವೆನಿಸುವಂಥ ಅನೇಕ ರಚನೆಗಳನ್ನು ನಿರ್ಮಿಸಿದ್ದಾನೆ. ಎಲ್ಲ ಕಾಲಗಳಲ್ಲಿಯೂ ಪ್ರತಿಭಾವಂತರಾದ, ಮಹತ್ವಾಕಾಂಕ್ಷೆಯ ಜನರು ಬದುಕಿದ್ದರು. ಐದು ಸಾವಿರ ವರ್ಷಗಳ್ ಹಿಂದೆ ತಂತ್ರಜ್ಞಾನ ಇಂದಿನಷ್ಟು ಮುಂದುವರೆದಿರಲಿಲ್ಲ. ಆದರೂ ಅಂದಿನ ಕೆಲವು ರಚನೆಗಳು ನಮ್ಮನು ಬೆರಗುಗೊಳಿಸುತ್ತವೆ. ಒಂದು ಶಿಲ್ಪವಾಗಿರಲಿ, ಭವನವಾಗಿರಲಿ, ದೇವಾಲಯವಾಗಿರಲಿ, ಹಲವು ಶತಮಾನಗಳ ನಂತರವೂ ನೋಡಿ ಅಚ್ಚರಿಗೊಳ್ಳುವಂಥದ್ದನ್ನು ಅವರು ರಚಿಸಿದ್ದರು.
ಪುರಾತನ ಜಗತ್ತಿನ ಏಳು ಅದ್ಭುತಗಳು.
೧. ಪಿರಮಿಡ್ ಗಳು - ಗಿಜಾ - ಕ್ರಿ. ಪೂ. ೨೭೦೦-೨೩೦೦.
೨. ಬ್ಯಾಬಿಲೋನಿಯಾದ ಗೋಡೆಗಳು ಮತ್ತು ತೂಗು ಉದ್ಯಾನಗಳು - ಬ್ಯಾಬಿಲೋನಿಯಾ - ಕ್ರಿ. ಪೂ. ಸುಮಾರು ೬೦೦.
೩. ಮುಸಲ್ಲೋನನ ಸಮಾಧಿ - ಹಲಿಕರ್ನಾಸೋಸ್ - ಕ್ರಿ.ಪೂ. ೩೫೧.
೪. ಜ್ಯೂಸ್ ದೇವತೆಯ ಪ್ರತಿಮೆ - ಒಲಿಂಪಿಯ - ಕ್ರಿ. ಪೂ. ಸುಮಾರು ೪೫೬.
೫. ಫಲದೇವತೆ ಅರ್ತೆಮಿಸ್ - ಎಫೆಸೋಸ್ - ಕ್ರಿ. ಪೂ. ಸುಮಾರು ೫೬೦.
೬. ಕಲೋಸಸ್ ಪ್ರತಿಮೆ - ರ್ ಹೋಡ್ಸ್ ದ್ವೀಪ - ಕ್ರಿ. ಪೂ. ಸುಮಾರು ೨೯೨ - ೨೮೦.
೭. ಅಲೆಕ್ಸಾಂಡ್ರಿಯಾದ ದೀಪಸ್ತಂಭ ಅಲೆಕ್ಸಾಂಡ್ರಿಯ - ಕ್ರಿ. ಪೂ. ಸುಮಾರು ೩೩೧.
ಚಿತ್ರ ಕೃಪೆ: ಇಲ್ಲಿಂದ.
(ಸಶೇಷ)
No comments:
Post a Comment
ನನ್ನ ನಾನೇ ಕಂಡೆ, ಚೆಲುವ ಹತ್ತಿರ ಕರೆದೆ,
ಕಂಡ ಚೆಲುವನು ಹಾಡಿನಲ್ಲಿ ಬರೆದೆ.
ಬಾಳ ದುಗುಡಗಳನ್ನು ನಾನು ಒಮ್ಮೆಲೆ ತೊರೆದೆ,
ಸಂತಸವೆ ನಾನಾಗಿ ಹಿಗ್ಗಿ ಮೆರೆದೆ.