My Blog List

Friday, October 09, 2009

ಮೌಂಟ್ ರಷ್ಮೋರ್

ಮೌಂಟ್ ರಷ್ಮೋರ್ 

ಈ ಶತಮಾನದಲ್ಲಿ ನಿರ್ಮಿತವಾದ, ಮೌಂಟ್ ರಷ್ಮೋರ್ ರಾಷ್ಟ್ರೀಯ ಸ್ಮಾರಕವು ಮಾನವ ನಿರ್ಮಿತ ಅದ್ಭುತಗಳಲ್ಲಿ ಒಮ್ದೆಂದು ಹೇಳಬಹುದು. 

ಅಮೆರಿಕದ ದಕ್ಷಿಣ ಡಕೋಟಾ ರಾಜ್ಯದ ಬ್ಲಾಕ್ ಹಿಲ್ಸ್ ಸಾಲಿನಲ್ಲಿ ಮೌಂಟ್ ರಷ್ಮೋರ್ ಎಂಬ ಅತ್ಯಂತ ಕಡಿದಾದ ಬೆಟ್ಟದ ತುದಿಯಲ್ಲಿ ಈ ಸ್ಮಾರಕವನ್ನು ಕೆತ್ತಲಾಗಿದೆ. ಅಮೆರಿಕದ ನಾಲ್ಕು ಅಧ್ಯಕ್ಷರ ಮುಖಗಳಿರುವ ಅದನ್ನು ರಾಷ್ಟ್ರೀಯ ಸ್ಮಾರಕವೆಂದು ಪರಿಗಣಿಸಲಾಗಿದೆ.

ನಾಲ್ಕು ಮಂದಿ ಅಮೆರಿಕದ ಅಧ್ಯಕ್ಷರು - ೧. ಜಾರ್ಜ್ ವಾಷಿಂಗ್ಟನ್, ೨. ಥಾಮಸ್ ಜೆಫರ್ಸನ್, ೩. ಥಿಯೋಡರ್ ರೂಸ್ವೆಲ್ಟ್, ೪. ಅಬ್ರಹಾಂ ಲಿಂಕನ್.





ಅಷ್ಟು ಕಡಿದಾದ ಆ ಹೆಬ್ಬಂಡೆಯ ಪಾರ್ಶ್ವದಲ್ಲಿ ಆ ನಾಲ್ಕು ಮಂದಿ ಮಹಾನ್ ವ್ಯಕ್ತಿಗಳ ತದ್ರೂಪಗಳನ್ನ್ ಮೂಡಿಸಲು ಶಿಲ್ಪಿಗಳು ಯಾವ ಉಪಾಯ ಅನುಸರಿಸಿರಬಹುದು, ಎಂಥ ದುಸ್ಸಹ ಪರಿಸ್ಥಿತಿಯಲ್ಲಿ ಅವರು ಕೆಲಸ ಮಾಡಿರಬಹುದು ಎಂಬ ಕಲ್ಪನೆಯೇ ರೋಚಕವಾಗಿದೆ. ಜಾರ್ಜ್ ವಾಷಿಂಗ್ಟನ್ ಅವರ ಮುಖ ೧೮ ಮೀ. ಎತ್ತರವಾಗಿದೆ. ಅಂದರೆ, ಸುಮಾರು ಐದು ಮಹಡಿ ಕಟ್ಟಡದಷ್ಟು ಎತ್ತರ! ಇದೇ ಪ್ರಮಾಣದಲ್ಲಿ ವಾಷಿಂಗ್ಟನ್ ಅವರ ಪೂರ್ಣರೂಪವನ್ನು ಕೆತ್ತಿದರೆ, ಆಗ ಅದು ೧೪೨ಮೀ. ಎತ್ತರವಾಗುತ್ತದೆ. ಈ ನಾಲ್ಕು ಪ್ರತಿಮೆಗಳ ಮುಖಗಳೂ ಸರಿಸುಮಾರು ಒಂದೇ ಪ್ರಮಾಣದವು.

ಗುಟ್ಜನ್ ಬೋರ್ಗ್ಲಾಮ್ ಎಂಬಾತ ಈ ಸ್ಮಾರಕವನ್ನು ವಿನ್ಯಾಸಗೊಳಿಸಿದ ಮತ್ತು ಕೆಲಸದ ಮೇಲ್ವಿಚಾರಣೆಯ ಹೆಚ್ಚು ಪಾಲು ನೋಡಿಕೊಂಡ. ಪ್ರತಿಮೆಗಳನ್ನು ಕೆತ್ತುವ ಕೆಲಸ ೧೯೨೭ರಲ್ಲಿ ಪ್ರಾರಂಭವಾಗಿ ಕುಂಟುತ್ತಾ, ಎಡವುತ್ತಾ, ೧೪ ವರ್ಷಗಳ ಕಾಲ ನಡೆಯಿತು. ೧೯೪೧ರಲ್ಲಿ ಸ್ಮಾರಕದ ಕೆಲಸ ಪೂರ್ಣವಾಗುವ ಮೊದಲೇ ಬೋರ್ಗ್ಲಾಮ್ ತೀರಿಕೊಂಡ. ಮುಂದೆ ಆತನ ಮಗ ಅಬ್ರಹಾಂ ಲಿಂಕನ್ ಅವರ ಪ್ರತಿಮೆ ಪೂರ್ಣಮಾಡಿದ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಅದರ ಉದ್ಘಾಟನೆ ತೀರಾ ಸಾಧಾರಣ ರೀತಿಯಲ್ಲಿ ನೆರವೇರಿತು.

ಮೌಂಟ್ ರಷ್ಮೋರ್ ಸಮುದ್ರ ಮಟ್ಟಕ್ಕಿಂತ ೧೭೪೫ಮೀ. ಎತ್ತರದಲ್ಲಿದೆ, ಹಾಗೂ, ಆ ಕಣಿವೆಯ ಇನ್ನಿತರ ಶಿಖರಗಳಿಗಿಂತ ಸುಮಾರು ೧೫೦ಮೀ. ಅಷ್ಟು ಎತ್ತರದಲ್ಲಿದೆ.

ಇಡೀ ಹಗಲು ಸೂರ್ಯನ ಬೆಳಕು ಬೀಳುವಂಥ ಪಾರ್ಶ್ವದಲ್ಲಿರುವ ಈ ರಾಷ್ಟ್ರೀಯ ಸ್ಮಾರಕವನ್ನು ತೀರಾ ಸಮೀಪದಿಂದ ನೋಡಿದರೆ ಅದರ ನಿಜವಾದ ಗಾಂಭೀರ್ಯ ತಿಳಿಯುವುದಿಲ್ಲ. ಹಾಗೆ ನೋಡಲು ಪ್ರಯತ್ನಿಸಿದರೆ, ನಾಲ್ಕು ಮುಖಗಳ ಪೈಕಿ ಒಂದೆರಡನ್ನು ನೋಡಬಹುದು. ಆದುದರಿಂದ ಸ್ಮಾರಕದ ಎದುರು ಬೆಟ್ಟದಲ್ಲಿ ಹಾದು ಹೋಗುವ ದಾರಿಯಲ್ಲಿ ಜನರು ತಮ್ಮ ವಾಹನಗಳನ್ನು ನಿಲ್ಲಿಸಿ, ಈ ಭವ್ಯ ಸ್ಮಾರಕವನ್ನು ದೂರದಿಂದ ನೋಡಿ ಸಂತೋಷಪಡುತ್ತಾರೆ.

ಚಿತ್ರಕೃಪೆ: ವಿಕಿಪೀಡಿಯಾ

9 comments:

  1. ಅನಿಲ್,

    ಇದನ್ನೆಲ್ಲಾ ಫೋಟೊ ನೋಡಿ ಖುಷಿಪಟ್ಟರೂ ಇಷ್ಟೊಂದು ಮಾಹಿತಿ ಗೊತ್ತಿರಲಿಲ್ಲ ಧನ್ಯವಾದಗಳು.

    ReplyDelete
  2. ಶಿವು,
    ಧನ್ಯವಾದಗಳು..

    ನನಗೆ ತಿಳಿದಿರುವ ಮಾಹಿತಿಯನ್ನು ಹಂಚಿಕೊಳ್ಳುವ ಒಂದು ಚಿಕ್ಕ ಪ್ರಯತ್ನ..
    ನಿಮ್ಮ ಪ್ರೋತ್ಸಾಹ ಹೀಗೇ ಇರಲಿ..

    -ಅನಿಲ್

    ReplyDelete
  3. ಒಳ್ಳೆಯ ಮಾಹಿತಿ
    ಧನ್ಯವಾದಗಳು

    ReplyDelete
  4. ಮನಸು,
    ತುಂಬಾ ಧನ್ಯವಾದಗಳು

    -ಅನಿಲ್

    ReplyDelete
  5. ಅನಿಲ್, ನೆನ್ನೆ ತಾನೇ, ನಾನು, National Treasure ಅನ್ನೋ ಇಂಗ್ಲೀಶ್ ಸಿನಿಮಾ ನೋಡುತ್ತಿದ್ದೆ. ಅದರಲ್ಲಿ ಮೌಂಟ್ ರಶ್ಮೋರ್ ಬಗ್ಗೆ ತಿಳಿಯಿತು. ಅದರಲ್ಲಿ ಗೇಟ್ಸ್ ಎನ್ನುವವನು ಸಿಬೋಲಾ(ಸಿಟಿ ಆಫ್ ಗೋಲ್ಡ್) ಅನ್ನೋ ಮುಳುಗಿದೆ ಸಿಟಿಯನ್ನು ಹುಡುಕಿಕೊಂಡು ಅಲ್ಲಿಗೆ ಬರುತ್ತಾನೆ...

    ReplyDelete
  6. ಈ ಬೆಟ್ಟದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕಾಗಿ ನನ್ನಿ.

    ReplyDelete
  7. ಅನಿಲ್,
    ಒಳ್ಳೆಯ ವಿವರಣೆ ನೀಡಿದ್ದಿರಿ,
    ಸುಂದರ್ ಫೋಟೋ ಕೂಡಾ

    ReplyDelete
  8. Joey,
    ಅನವರತಕ್ಕೆ ಸ್ವಾಗತ!

    National Treasure ಸಿನಿಮಾದಲ್ಲಿ ನಿಕೋಲಸ್ ಕೇಜ್ ನಟಿಸಿದ್ದಾರೆ ಅಲ್ವಾ?
    ಅಂದಹಾಗೆ, ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..

    -ಅನಿಲ್

    ReplyDelete
  9. ಡಾ. ಗುರು,
    ಲೇಖನ, ಚಿತ್ರವನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು..

    -ಅನಿಲ್

    ReplyDelete