My Blog List

Wednesday, October 28, 2009

ಸ್ವಾತಂತ್ರ್ಯ ಸ್ಮಾರಕ - ಲಿಬರ್ಟಿ

ಸ್ವಾತಂತ್ರ್ಯ ಸ್ಮಾರಕ - ಲಿಬರ್ಟಿ

ಸ್ವಾತಂತ್ರ್ಯದೇವಿಯ ಪ್ರತಿಮೆ ನ್ಯೂಯಾರ್ಕ್ ಬಂದರಿನ ಮೂಲಕ ಅಮೆರಿಕಕ್ಕೆ ಪ್ರವೇಶಿಸುವ ಹಡಗುಗಳಿಗೆ ಬೆಳಕು ತೋರಿಸಿ ಮಾರ್ಗದರ್ಶನ ಮಾಡುವ ರೀತಿಯಲ್ಲಿ ಗಂಭೀರವಾಗಿ ನಿಂತಿದೆ. ಉತ್ತಮ ಬದುಕನ್ನು ಅರಸುತ್ತ ಜಗತ್ತಿನ ನಾನಾ ದೇಶಗಳಿಂದ ನ್ಯೂಯಾರ್ಕಿಗೆ ಬರುವ ವಲಸೆಗಾರರ ಪಾಲಿಗೆ ಈ ಸ್ವಾತಂತ್ರ್ಯ ದೇವಿ ಆಶಾದೀಪವಾಗಿದೆ.

ಕ್ರಿ. ಶ. ೧೮೬೫ ಇಂದ ೧೯೦೦ ವರೆಗೆ ಸುಮಾರು ಒಂದೂವರೆ ಕೋಟಿ ವಲಸೆಗಾರರು ಬಹುಮಟ್ಟಿಗೆ ನ್ಯೂಯಾರ್ಕ್ ಮೂಲಕವೇ ಅಮೆರಿಕ ಪ್ರವೇಶಿಸಿದರು. ಅವರು ಸ್ವಾತಂತ್ರ್ಯ ದೇವಿಯ ಪ್ರತಿಮೆಯನ್ನು ನೋಡಿದ ಕೂಡಲೇ ಹೊಸ ಚೈತನ್ಯ ಹೊಂದುತ್ತಿದ್ದರು. ತಮ್ಮ ಕಷ್ಟಗಳೆಲ್ಲ ಪರಿಹಾರವಾದವು ಎಂದು ಭಾವಿಸುತ್ತಿದ್ದರು.

ಕಳೆದ ಶತಮಾನದಲ್ಲಿ, ಬ್ರಿಟೀಷ್ ವಸಾಹತಾಗಿದ್ದ ಅಮೆರಿಕದ ರಾಜ್ಯಗಳು ಸಶಸ್ತ್ರ ಹೋರಾಟ ನಡೆಸಿ ಬ್ರಿಟನ್ನಿನಿಂದ ಸ್ವಾತಂತ್ರ್ಯಗಳಿಸಿ, ಸ್ವತಂತ್ರ ರಾಜ್ಯಗಳ ಒಕ್ಕೂಟ ರಚಿಸಿಕೊಂಡವು. ಸ್ವಾತಂತ್ರ್ಯ ಸೇವಿಯ ಪ್ರತಿಮೆ ಈ ಗೆಲುವಿನ ಪ್ರತೀಕವಾಗಿದೆ.




ಅಕ್ಟೋಬರ್ ೨೮, ೧೮೭೬ರಂ ಸ್ವಾತಂತ್ರ್ಯ ಸಮಾರಂಭದಲ್ಲಿ ಸ್ವಾತಂತ್ರ್ಯ ದೇವಿಯ ಪ್ರತಿಮೆಯನ್ನು ಸ್ಥಾಪಿಸಲಾಯಿತು. ೪೬ಮೀ. ಎತ್ತರವಿರುವ ಈ ಪ್ರತಿಮೆಯನ್ನು ಫ್ರೆಡೆರಿಕ್ ಅಗಸ್ಟೆ ಬಾರ್ಥೋಲ್ದಿ ಎಂಬಾತ ವಿನ್ಯಾಸಗೊಳಿಸಿದ. ಸುಮಾರು ಅಷ್ಟೇ ಎತ್ತರದ ಪೀಠದ ಮೇಲೆ ಭವ್ಯವಾಗಿ ನಿಂತಿರುವ ಈ ಪ್ರತಿಮೆಯನ್ನು ಕಬ್ಬಿಣದ ಹಾಳೆಗಳ ಮೇಲೆ ತಾಮ್ರದ ರೇಕು ಹೊದಿಸಿ ತಯಾರಿಸಲಾಗಿದೆ.

ಸ್ವಾತಂತ್ರ್ಯ ದೇವಿಯ ಪ್ರತಿಮೆಯ ನಿರ್ಮಾನ ಕಾರ್ಯವನ್ನು ಫ್ರೆಂಚ್ ಇಂಜಿನಿಯರ್ ಗುಸ್ತಾವ್ ಐಫೆಲ್ ವಹಿಸಿದನು. ಆ ವೇಳೆಗಾಗಲೇ ಆತ ಅನೇಕ ಹೊಸ ಕಟ್ಟಡಗಳನ್ನು ನಿರ್ಮಿಸಿ ಖ್ಯಾತನಾಗಿದ್ದ. ಈ ಪ್ರತಿಮೆ ಅಮೆರಿಕದ ಜನರಿಗೆ ಫ್ರಾನ್ಸ್ ನೀಡಿದ ಕೊಡುಗೆ. ಪ್ರತಿಮೆಯನ್ನು ಪ್ಯಾರಿಸಿನಲ್ಲಿ ಪ್ರಮಾಣಕ್ಕೆ ತಕ್ಕಂತೆ ಒಂದೊಂದೇ ಭಾಗವಾಗಿ ತಯಾರಿಸಲಾಯಿತು. ಈ ಭಾಗಗಳನ್ನು ಹಡಗಿನಲ್ಲಿ ನ್ಯೂಯಾರ್ಕಿಗೆ ಸಾಗಿಸಿ, ಒಂದೊಂದೇ ಭಾಗವನ್ನು ಜೋಡಿಸಲಾಯಿತು.

೧೯೭೬ರಲ್ಲಿ ಈ ಪ್ರತಿಮೆಯ ಶತಮಾನೋತ್ಸವ ನೆರವೇರಿತು.

ಚಿತ್ರ ಕೃಪೆ: ವಿಕಿಪೀಡಿಯಾ

4 comments:

  1. ಅನಿಲ್,

    ಸ್ವಾತಂತ್ರ್ಯ ಸ್ಮಾರಕ - ಲಿಬರ್ಟಿಯ ಬಗ್ಗೆ ಓದಿದ್ದೆ. ಆದರೆ ನಿರ್ಮಿಸಿದ ಬಗ್ಗೆ, ಎಷ್ಟನೇ ಇಸವಿ ಅಂತ ಗೊತ್ತಿರಲಿಲ್ಲ. ಮಾನವ ನಿರ್ಮಿತ ಅದ್ಭುತಗಳ ಬಗ್ಗೆ ಒಂದೊಂದೇ ಬರೆಯುತ್ತ, ನಮಗೂ ತಿಳಿಸಿರುವುದಕ್ಕೆ ಧನ್ಯವಾದಗಳು.

    ಚಿತ್ರ

    ReplyDelete
  2. ಸ್ವತಂತ್ರ್ಯ ಪ್ರತಿಮೆಯ ಭವ್ಯತೆ ಗಂಭೀರ ನಿಲುವು ಬೆಲ್ಲವೂ ಇಷ್ಟವಾಗಿವೆ. ಜೀವನದಲ್ಲಿ ಇದೊಂದನ್ನು ನೋಡಲಿಕ್ಕಾದರೂ ಅಮೇರಿಕಾಕ್ಕೆ ಹೋಗಬೇಕೆಂಬ ಕನಸು ಮನದಾಳದಲ್ಲೆಲ್ಲೋ ಹುದುಗಿ ಕುಳಿತಿದೆ. ಅದೇನೇ ಇದ್ದರೂ, ಕವಿ ಸಿದ್ಧಲಿಂಗಯ್ಯ ಅವರು ಒಮ್ಮೆ ಕವಿಗೋಷ್ಠಿಯ ಅಧ್ಯಕ್ಷ ಭಾಷಣದಲ್ಲಿ ಈ ಪ್ರತಿಮೆಯನ್ನೇ ಪ್ರತಿಮೆಯನ್ನಾಗಿಸಿ, In America, Liberty is the statue ಎಂದು ಹೇಳಿ ಅತ್ಯಂತ ಅರ್ಥಪೂರ್ಣವಾಗಿ ಮಾತನಾಡಿದ್ದರು.

    ReplyDelete
  3. ಅನಿಲ್,

    ಸ್ವಾತಂತ್ರ ಪ್ರತಿಮೆಯನ್ನು ನೋಡಲಿಕ್ಕಾದರೂ ಅಮೇರಿಕಾಗೆ ಹೋಗುವ ಆಸೆಯಿದೆ...ಅದೊಂದು ಅದ್ಭುತ ಕಲಾಕೃತಿ. ಅದನ್ನು ಮಾಹಿತಿಯುಕ್ತವಾಗಿ ನೀಡಿದ್ದೀರಿ..ಧನ್ಯವಾದಗಳು.

    ReplyDelete
  4. ಚಿತ್ರ, ಡಾ.ಸತ್ಯ, ಶಿವು,
    ಧನ್ಯವಾದಗಳು..

    -ಅನಿಲ್

    ReplyDelete