ಇಂಗ್ಲೆಂಡಿನ ಸ್ಟೋನ್ ಹೆಂಜ್
ಗುಹೆಗಳಲ್ಲಿ ವಾಸ ಮಾಡುತ್ತ ಬೇಟೆಯಾಡಿ ಜೀವಿಸುತ್ತಿದ್ದ ಪುರಾತನ ಮಾನವ ಕ್ರಮೇಣ ಪಶುಪಾಲನೆ, ಕೃಷಿಯಂಥ ಹೊಸ ವಿಷಯಗಳನ್ನು ಕಲಿಯುವುದರ ಜೊತೆಗೆ ತನ್ನದೇ ರೀತಿಯಲ್ಲಿ ಖಗೋಳ ಜ್ಞಾನವನ್ನು ಆರ್ಜಿಸಿದ. ನಿಸರ್ಗಕ್ಕೆ ಹೊಂದಿಕೊಂಡೇ ಬದುಕುತ್ತಿದ್ದ ಆತನಿಗೆ ಪರಿವಾರ ದೊಡ್ಡದಾದಂತೆ ಹೆಚ್ಚು ಹೆಚ್ಚು ಧಾನ್ಯ ಬೆಳೆಯಬೇಕಾದ ಹಾಗೂ ಅದನ್ನು ಸಂಗ್ರಹಿಸಿಡಬೇಕಾದ ಅಗತ್ಯ ಉಂಟಾಯಿತು. ಯಾವ ದಿಕ್ಕಿನಲ್ಲಿ ಮೋಡ ಹೆಪ್ಪುಗಟ್ಟಿದಾಗ ಮಳೆ ಬೀಳುತ್ತದೆ, ಯಾವ ಮರದಲ್ಲಿ ಯಾವ ಹಣ್ಣು ಬಿಡುತ್ತದೆ, ಇತ್ಯಾದಿಗಳನ್ನು ಅನುಭವದಿಂದ ಕಂಡುಕೊಂಡ. ಹಾಗೆಯೇ ಹಗಲು, ರಾತ್ರಿ, ಸೂರ್ಯ ಚಂದ್ರ, ನಕ್ಷತ್ರಗಳ ವೀಕ್ಷಣೆಯಿಂದ ಕಾಲವನ್ನು ಅಳೆಯಲು ಕಲಿತ.
ಈಗ ಖಗೋಳ ವಿಜ್ಞಾನ ಸಾಕಷ್ಟು ಮುಂದುವರೆದಿದೆ. ಗ್ರಹಗಳು, ನಕ್ಷತ್ರಗಳು ನಿಹಾರಿಕೆಗಳು, ಆಕಾಶಕಾಯಗಳು - ಹೀಗೆ ಆಸಕ್ತಿದಾಯಕವಾದ ಹಲವು ವಿಷಯಗಳ ಅಭ್ಯಾಸ ನಿರಂತರವಾಗಿ ನಡೆಯುತ್ತಲೂ ಇದೆ. ಜಗತ್ತಿನ ಅನೇಕ ಕಡೆ ದೂರದ ನಕ್ಷತ್ರಗಳನ್ನು ಅಭ್ಯಸಿಸುತ್ತ, ಸೌರಮಂಡಲದ ಅದ್ಭುತಗಳಿಗೆ ಸದಾ ಕಣ್ಣು ತೆರೆದುಕೊಂದಿರುವ ಹಲವಾರು ಅತ್ಯಾಧುನಿಕ ವೀಕ್ಷಣಾಲಯಗಳಿವೆ.
ಪುರಾತನ ಮನುಷ್ಯರು ಸಹ ತಮ್ಮದೇ ರೀತಿಯಲ್ಲಿ ವೀಕ್ಷಣಾಲಯಗಳನ್ನು ನಿರ್ಮಿಸಿಕೊಂದು ಖಗೋಳವನ್ನು ಅಭ್ಯಾಸ ಮಾಡುತ್ತಿದ್ದರು ಎಂಬುದಕ್ಕೆ ಅನೇಕ ಪುರಾವೆಗಳಿವೆ. ಇಂಗ್ಲೆಂಡಿನ ಸ್ಯಾಲಿಸ್ಬರಿ ಮೈದಾನದಲ್ಲಿ ಇರುವ ಸ್ಟೋನ್ ಹೆಂಜ್ ಎಂಬ ಕಲ್ಲು ಕಂಬಗಳ ಗುಡಿ ಅಂಥವುಗಳಲ್ಲೊಂದು.
ಇಲ್ಲಿ ೪.೫-೬ಮೀ. ಎತ್ತರದ ಕಲ್ಲು ಚಪ್ಪಡಿಗಳನ್ನು ಅವುಗಳ ಅಕ್ಷ ದಕ್ಷಿಣಾಯನ ದಿನದಂದು ಉದಯಿಸುವ ಸೂರ್ಯನ ಮಧ್ಯಭಾಗವನ್ನು ಸರಿಯಾಗಿ ಭೇದಿಸುವಂತೆ ನಿಲ್ಲಿಸಲಾಗಿದೆ. ಇದು ಕ್ರಿ. ಪೂ. ೨೫೦೦ರಷ್ಟು ಹಿಂದಿನದು ಎಂದು ಹೇಳಲಾಗುತ್ತಿದೆ. ಆಗಿನ್ನೂ ಮಾನವನಿಗೆ ಲೋಹಗಳ ಪರಿಚಯವೂ ಆಗಿರಲಿಲ್ಲ. ಆದರೂ ಪೂರ್ವನಿವಾಸಿಗಳ ಖಗೋಳ ಪ್ರಜ್ಞೆ ನಮ್ಮನ್ನು ಅಚ್ಚರಿಗೊಳಿಸದೆ ಇರುವುದಿಲ್ಲ. ಆ ಜನರು ಅದನ್ನು ಕಾಲವನ್ನು ಅಳೆಯುವ ಯಂತ್ರವಾಗಿ, ಸೂರ್ಯಾರಾಧನೆಯ ಮಂದಿರವಾಗಿ, ವೀಕ್ಷಣಾಲಯವಾಗಿ ಅಥವಾ ಧಾರ್ಮಿಕ ಕ್ರಿಯೆಗಳ ಕೇಂದ್ರವಾಗಿ ಬಳಸಿರಬಹುದೆಂದು ಊಹಿಸಲಾಗಿದೆ. ಈ ನಿಟ್ಟಿನಲ್ಲಿ ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ.
ಚಿತ್ರ ಕೃಪೆ: ವಿಕಿಪೀಡಿಯಾ
ಅನಿಲ್,
ReplyDeleteಸ್ಟೋನ್ ಏಜ್ ಬಗ್ಗೆ ವಿವರಣೆ ಚೆನ್ನಾಗಿದೆ. ಜೊತೆಗೆ ಈಗ ಅಲ್ಲಿ ear phone ಕೊಟ್ಟು ಅಲ್ಲಿನ ಇತಿಹಾಸವನ್ನು ಸಂಗೀತದ ಮುಖಾಂತರ ವಿವರಿಸುವ ವ್ಯವಸ್ಥೆಯನ್ನು ಮಾಡಿದ್ದಾರಂತೆ. ಹೌದಾ..ಮಾಹಿತಿಯನ್ನು ಕಲೆಹಾಕಿ.
ಅನಿಲ್ ತುಂಬಾ ಒಳ್ಲೆಯ ಮಾಹಿತಿ, ಇದೇ ಖಗೋಳ ಸಿದ್ಧಾಂತದ ಮೇಲೆ ನಮ್ಮ ಜಂತರ-ಮಂತರ್ ಇದೆ ಅಂತಾರೆ..ಇಲ್ಲಿ ಸೂರ್ಯನ ನೆರಳನ್ನು ಆಧರಿಸಿ ಸಮಯದ ನಿರ್ಧಾರವಾಗುತ್ತದಂತೆ.
ReplyDeleteಒಳ್ಲೆಯ ಸಂಗ್ರಹ ಮತ್ತು ಉತ್ತಮ ಮಾಹಿತಿ
ಇಬ್ಬರಿಗೂ ತುಂಬಾ ಧನ್ಯವಾದಗಳು..
ReplyDelete-ಅನಿಲ್