ಇಂದು ಸಂಜೆ ಕಛೇರಿಯಿಂದ ಮನೆಗೆ ಬಂದು ಕೈ-ಕಾಲು-ಮುಖ ತೊಳೆಯಲು ಬಚ್ಚಲುಮನೆಗೆ ಹೋದಾಗ ಒಂದು ಜಿರಳೆಯು ಹಲ್ಲಿಯ ಬಾಯಿಗೆ ಸಿಕ್ಕಿಕೊಂಡಿತ್ತು.
ಹಲ್ಲಿಯು ದೊಡ್ಡ ಜಿರಳೆಯನ್ನು ನುಂಗಲಾರದೆ, ಸಿಕ್ಕ ಭೋಜನವನ್ನು ಬಿಡಲೂ ಆಗದಂಥ ಪರಿಸ್ಥಿತಿಯಲ್ಲಿತ್ತು.
ತಕ್ಷಣ ಕೋಣೆಗೆ ಬಂದು ಕ್ಯಾಮೆರಾ ತೆಗೆದುಕೊಂಡು ಬಚ್ಚಲುಮನೆಗೆ ಓಡಿದೆ. ಕ್ಯಾಮೆರಾದಲ್ಲಿ ಸೆರೆಹಿಡಿದ ದೃಶ್ಯ ಇಲ್ಲಿದೆ.
ಕೈ-ಕಾಲು-ಮುಖ ತೊಳೆದು ಅಮ್ಮ ಮಾಡಿದ್ದ ಅವಲಕ್ಕಿ ಒಗ್ಗರಣೆ ತಿಂದು, ಕಾಫಿ ಕುಡಿದು, ಕುತೂಹಲದಿಂದ ಜಿರಳೆಯ ಸ್ಥಿತಿ ಏನಾಗಿದೆಯೆಂದು ನೋಡಲು ಮತ್ತೆ
ಬಚ್ಚಲುಮನೆಗೆ ಹೋದಾಗ, ಜಿರಳೆಯು ತಪ್ಪಿಸಿಕೊಂಡಿತ್ತು.
ಹಲ್ಲಿಯು ಮೂಲೆಯಲ್ಲಿ "ಬಾಯಿಗೆ ಬಂದ ಜಿರಳೆ ಹೊಟ್ಟೆ ಸೇರಲಿಲ್ಲವೇ?" ಎಂದು ಯೋಚಿಸ್ತಿತ್ತು.
ಆನಿಲ್,
ReplyDeleteಸಕ್ಕತ್ ಫೋಟೊ..!
ಶಿವು,
ReplyDeleteತುಂಬಾ ಧನ್ಯವಾದ...
ನಿಮ್ಮ ಬ್ಲಾಗಿಗೆ ಬಿಡುವು ಮಾಡಿಕೊಂಡು ಬರುವೆ...
ಅನಿಲ್...
ReplyDeleteಭರ್ಜರಿ ಬೇಟೆ...
ಫೋಟೊ ಲೆಖನ ಬಹಳ ಚೆನ್ನಾಗಿದೆ...
ಅಭಿನಂದನೆಗಳು...
ಪ್ರಕಾಶ್,
ReplyDeleteಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.
ಅನಿಲ್,
ReplyDeleteಒಳ್ಳೆಯ ಟೈಮಿಂಗ್
--
ಪಾಲ
ಪಾಲ,
ReplyDeleteಥ್ಯಾಂಕ್ಸ್...
ಅನಿಲ್,
ReplyDeleteಚಿತ್ರ ಚೆನ್ನಾಗಿದೆ. ಹೊಸ ವರುಷದ ಹಾರ್ದಿಕ ಶುಭಾಶಯಗಳು,ಹೊಸ ವರ್ಷದಲ್ಲಿ ನಿಮ್ಮ ಎಲ್ಲಾ ಕನಸುಗಳು ನನಸಾಗಿಸಲಿ ಎಂದು ಹಾರೈಸುತ್ತೇನೆ.
ಬಾಲ.
ಬಾಲು,
ReplyDeleteತುಂಬಾ ಧನ್ಯವಾದ.
ಅಯ್ಯೋ,
ReplyDeleteನಾನು ಶೀರ್ಷಿಕೆ ನೋಡಿ ಕನ್ನಡದಲ್ಲಿ ಒಂದು "ಭರ್ಜರಿ ಭೇಟೆ" ಅಂತ ಚಲನಚಿತ್ರ ಇದೆ (ಶಂಕರ್ನಾಗ್, ಅಂಬರೀಶ್). ಅದು ಅಂತ ತಿಳ್ದಿದ್ದೆ. ಅದರಲ್ಲಿ ಒಂದು ಹಾಡು ಚೆನ್ನಾಗಿದೆ.
ನೀವು ತೆಗೆದಿರೋ ಭಾವಚಿತ್ರ ಚೆನ್ನಾಗಿದೆ.