My Blog List

Monday, April 13, 2009

ನನ್ನ ಮುದ್ದಿನ ಸೊಸೆ.

ಈ ಮುದ್ದು ಪುಟಾಣಿಯ ಚಿತ್ರಗಳನ್ನು ಸೆರೆಹಿಡಿದದ್ದು ಕಳೆದ ತಿಂಗಳು ಅಜ್ಜಿಯ ಮನೆಗೆ ಹೋದಾಗ. ಅಜ್ಜಿಯ ಮನೆಗೆ ಬೆಳಿಗ್ಗೆ ಹೋದಾಗ ಮಲಗಿದ್ದಳು.

ಸ್ವಲ್ಪ ಸಮಯದ ನಂತರ ಹಸಿವಾದ ಕಾರಣ ಅಳುತ್ತಾ ಎದ್ದಳು.

ಅಮ್ಮಾ!

ನಂತರ ಹಾಲು ಕುಡಿದು ಸ್ವಲ್ಪ ಹೊತ್ತು ಅಲ್ಲಿ ಇಲ್ಲಿ ನೋಡುತ್ತಿದ್ದಳು. ಆಗ ಸೆರೆಹಿಡಿದ ಚಿತ್ರ ಇದು.

ಹಾಸಿಗೆಯ ಮೇಲೆ ಮಲಗಿ ಬೇಜಾರಾಯ್ತೇನೋ?
ಅಮ್ಮನ ಮಡಿಲಲ್ಲಿ ಕುಳಿತಳು.

ಯಾರಿದು? ನನ್ನನ್ನೇಕೆ ದುರುಗುಟ್ಟಿಕೊಂಡು ನೋಡುತ್ತಿದ್ದಾರೆ?

ನೀ ಹಿಂಗ ನೋಡಬ್ಯಾಡ ನನ್ನ. ನಾಚಿಕೆಯಾಗುವುದು.

ನನಗೆ ನಿದ್ದೆ ಬರ್ತಿದೆ. Disturb ಮಾಡ್ಬೇಡಿ. ಆಯ್ತಾ?

ಅಂದಹಾಗೆ, ಇವಳಿಗೆ ಈಗ ನಾಲ್ಕು ತಿಂಗಳು. ಇದೇ ತಿಂಗಳ ೨೩ರಂದು ಇವಳಿಗೆ "ನಾಮಕರಣ".

ಏನು ಹೆಸರಿಟ್ಟೆವು ಎಂದು ಆಮೇಲೆ ಹೇಳುವೆ.

12 comments:

  1. ತುಂಬಾ ಮುದ್ದಾಗಿದೆ, ಖುಷಿಯಾಯಿತು

    ReplyDelete
  2. ಪರಾಂಜಪೆ,
    ತುಂಬಾ ಧನ್ಯವಾದ.

    -ಅನಿಲ್.

    ReplyDelete
  3. ಅನಿಲ್,

    ನಿಮ್ಮ ಸೊಸೆ ಮುದ್ದು ಮುದ್ದಾಗಿ..ಮುಗ್ದವಾಗಿದ್ದಾಳೆ...ಬೇಗ ಹೆಸರನ್ನು ಇಡಿ....

    ReplyDelete
  4. ಅನಿಲ್...

    ಮೊದಲು ದ್ರಷ್ಟಿ ತೆಗೆಯಿರಿ..
    ಕಣ್ಣುಗಳು ಆಕರ್ಷಕವಾಗಿವೆ...

    "ನಯನಾ" ಹೆಸರು ಸೂಕ್ತವೇನೋ...!

    ಪುಟ್ಟ ಮಗುವಿಗೆ ಶುಭಾಶೀರ್ವಾದಗಳು...

    ಚಂದದ ಫೋಟೊ...
    ಅಭಿನಂದನೆಗಳು...

    ReplyDelete
  5. ತುಂಬಾ ಮುದ್ದಾಗಿದೆ, ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು

    ReplyDelete
  6. ಶಿವು,
    ಸೊಸೆಯನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದ.
    ಏನ್ ಹೆಸರಿಟ್ವಿ ಅಂತ ಆಮೇಲೆ ಹೇಳ್ತೀನಿ.

    -ಅನಿಲ್

    ReplyDelete
  7. ಪ್ರಕಾಶ್,
    ತುಂಬಾ ಧನ್ಯವಾದ.

    ’ನಯನಾ’ ಹೆಸರನ್ನು ಸಜೆಸ್ಟ್ ಮಾಡ್ತೀನಿ.
    ಫೈನಲ್ ಡಿಸಿಷನ್ ಮಗುವಿನ ತಂದೆ-ತಾಯಿಗೆ ಬಿಟ್ಟಿದ್ದು.

    -ಅನಿಲ್

    ReplyDelete
  8. ಡಾ. ಗುರು,
    ಮೆಚ್ಚುಗೆಗೆ ಧನ್ಯವಾದ.

    -ಅನಿಲ್

    ReplyDelete
  9. ಸರ್,
    ಮಗುಗೆ ದೃಷ್ಟಿ ತೆಗೆಯಲು ಹೇಳಿ. ತುಂಬಾ ಮುದ್ದಾಗಿದೆ. ಫೋಟೋಗಳೂ ಚಂದವಿದೆ.

    ReplyDelete
  10. ಮಲ್ಲಿಕಾರ್ಜುನ್,
    ಫೋಟೋಗಳನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದ.

    ದೃಷ್ಟಿ ತೆಗ್ದಾಯ್ತು.

    -ಅನಿಲ್.

    ReplyDelete
  11. ಮುದ್ದಾದ ಮಗುವಿನ ಚಂದದ ಫೋಟೋಗಳು. ಮಗು ನೋಡ್ತಾನೆ ಇರ್ಬೇಕು ಹಾಗಿದೆ. ಇನ್ನೊಮ್ಮೆ ದೃಷ್ಟಿ ತೆಗೆಯಲು ಹೇಳಿ:).

    ReplyDelete
  12. ಭಾರ್ಗವಿ,
    ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.

    -ಅನಿಲ್

    ReplyDelete