ಮನದಲ್ಲಿ ಮೂಡುವ ಆಲೋಚನೆಗಳು, ಬರವಣಿಗೆ ರೂಪದಲ್ಲಿ...
ಈ ಚಿತ್ರವನ್ನು ಸೆರೆಹಿಡಿದದ್ದು ಬಂಡಿಪುರದ ಬಳಿ.
ಈ ಚಿತ್ರಕ್ಕೆ ಹೊಂದುವಂತಹ ಕವನ/ ಕತೆ(ಥೆ)/ ಚುಟುಕ ಏನಾದರೂ ಬರೆಯಿರಿ.
ಫೋಟೋಗ್ರಫಿ ಬಗ್ಗೆ ತಾ೦ತ್ರಿಕವಾಗಿ ಹೇಳುವಷ್ಟು ನನಗೆ ಗೊತ್ತಿಲ್ಲ, ಆದರೆ ಕತ್ತಲು ಬೆಳಕಿನ ಆಟ ಈ ಛಾಯಾಚಿತ್ರ ದಲ್ಲಿ ಚೆನ್ನಾಗಿ ಮೂಡಿಬ೦ದಿದೆ. ಚುಟುಕು ಕವಿತೆ ನಾನೇ ಬರೆಯುವೆ ಆಗದೆ ?? ಚೆನ್ನಾಗಿದೆ.
ಒಂದು ಚುಟುಕು ಕವನ ಬರೆದೇ ಬಿಟ್ಟೆ ನಿಮ್ಮ ಛಾಯಾಚಿತ್ರ ನೋಡಿ, ಅದು ಹೀಗಿದೆ ನೋಡಿ, ಓದಿ ಹೇಗಿದೆ ಹೇಳಿ:- ತರುಲತೆಗಳೆಡೆಯಿ೦ದ ಹಸಿರೆಲೆಯ ನಡುವಿ೦ದರವಿಕಿರಣ ಧರೆಯೆಡೆಗೆ ತೂರಿ ಬ೦ದಿಹುದು ವನವೆಲ್ಲ ಪಸರಿಸುತ ಬಿಸಿಲಬಾಣದ ಹೊಳಪುತು೦ಬಿಹುದು ಪರಿಸರಕೆ ಚೆ೦ಬೆಳಕ ಒನಪುಮರದ ಮರ್ಮರವನ್ನು ಕೇಳಲೋಸುಗ ಬ೦ದದೇವದೂತನ ತೆರದಿ ತಮಕಳೆದು ಬೆಳಕತ೦ದಪೊಟರೆಯಲ್ಲಡಗಿರುವ ಪಕ್ಷಿ ಸ೦ಕುಲಕೆಲ್ಲಬೆಳಗಿಸುತ ಕಲರವದ ಹೊಸದಿನದ ಸೊಲ್ಲಎನಿತು ಪ್ರೀತಿಯೋ ನಿನಗೆ ಧರೆಯ ಸ೦ಕುಲದೆಡೆಗೆದೊರೆ ನೀನು ಭಾಸ್ಕರನೆ ಬೆಳಕೆಮಗೆ ಕೊಡುವೆನಿತ್ಯ ದಿನಚರಿ ನಿನದು ತಪ್ಪದದು ಎ೦ದೆ೦ದೂಧನ್ಯತೆಯ ಭಾವದಲಿ ನಮಿಪೆ ನಿನಗಿ೦ದು
ಅನಿಲ್,ಫೋಟೋ ತುಂಬಾ ಚೆನ್ನಾಗಿದೆ...ನೆರಳು-ಬೆಳಕಿನ ಹೊಂದಾಣಿಕೆಯಲ್ಲಿ ರವಿಕಿರಣಗಳು...ಕಪ್ಪು-ಬಿಳುಪಿನಲ್ಲಿ ನೋಡುಗನಿಗೆ ಮೂಡ್ ತರಿಸುತ್ತದೆ...ಧನ್ಯವಾದಗಳು...
@ಪರಾಂಜಪೆ, ಕವನ ಬರೆದಿದ್ದಕ್ಕೆ ತುಂಬಾ ಧನ್ಯವಾದ. ಕವನ ಚೆನ್ನಾಗಿದೆ. ಇಷ್ಟ ಆಯ್ತು. @ಶಿವು, ಚಿತ್ರ ನೋಡಿ, ನಿಮಗೆ ಒಳ್ಳೆ ಮೂಡ್ ಬಂದಿದ್ದಕ್ಕೆ ತುಂಬಾ ಧನ್ಯವಾದ. -ಅನಿಲ್
ನನ್ನ ನಾನೇ ಕಂಡೆ, ಚೆಲುವ ಹತ್ತಿರ ಕರೆದೆ, ಕಂಡ ಚೆಲುವನು ಹಾಡಿನಲ್ಲಿ ಬರೆದೆ. ಬಾಳ ದುಗುಡಗಳನ್ನು ನಾನು ಒಮ್ಮೆಲೆ ತೊರೆದೆ, ಸಂತಸವೆ ನಾನಾಗಿ ಹಿಗ್ಗಿ ಮೆರೆದೆ.
ಫೋಟೋಗ್ರಫಿ ಬಗ್ಗೆ ತಾ೦ತ್ರಿಕವಾಗಿ ಹೇಳುವಷ್ಟು ನನಗೆ ಗೊತ್ತಿಲ್ಲ, ಆದರೆ ಕತ್ತಲು ಬೆಳಕಿನ ಆಟ ಈ ಛಾಯಾಚಿತ್ರ ದಲ್ಲಿ ಚೆನ್ನಾಗಿ ಮೂಡಿಬ೦ದಿದೆ. ಚುಟುಕು ಕವಿತೆ ನಾನೇ ಬರೆಯುವೆ ಆಗದೆ ?? ಚೆನ್ನಾಗಿದೆ.
ReplyDeleteಒಂದು ಚುಟುಕು ಕವನ ಬರೆದೇ ಬಿಟ್ಟೆ ನಿಮ್ಮ ಛಾಯಾಚಿತ್ರ ನೋಡಿ, ಅದು ಹೀಗಿದೆ ನೋಡಿ, ಓದಿ ಹೇಗಿದೆ ಹೇಳಿ:-
ReplyDeleteತರುಲತೆಗಳೆಡೆಯಿ೦ದ ಹಸಿರೆಲೆಯ ನಡುವಿ೦ದ
ರವಿಕಿರಣ ಧರೆಯೆಡೆಗೆ ತೂರಿ ಬ೦ದಿಹುದು
ವನವೆಲ್ಲ ಪಸರಿಸುತ ಬಿಸಿಲಬಾಣದ ಹೊಳಪು
ತು೦ಬಿಹುದು ಪರಿಸರಕೆ ಚೆ೦ಬೆಳಕ ಒನಪು
ಮರದ ಮರ್ಮರವನ್ನು ಕೇಳಲೋಸುಗ ಬ೦ದ
ದೇವದೂತನ ತೆರದಿ ತಮಕಳೆದು ಬೆಳಕತ೦ದ
ಪೊಟರೆಯಲ್ಲಡಗಿರುವ ಪಕ್ಷಿ ಸ೦ಕುಲಕೆಲ್ಲ
ಬೆಳಗಿಸುತ ಕಲರವದ ಹೊಸದಿನದ ಸೊಲ್ಲ
ಎನಿತು ಪ್ರೀತಿಯೋ ನಿನಗೆ ಧರೆಯ ಸ೦ಕುಲದೆಡೆಗೆ
ದೊರೆ ನೀನು ಭಾಸ್ಕರನೆ ಬೆಳಕೆಮಗೆ ಕೊಡುವೆ
ನಿತ್ಯ ದಿನಚರಿ ನಿನದು ತಪ್ಪದದು ಎ೦ದೆ೦ದೂ
ಧನ್ಯತೆಯ ಭಾವದಲಿ ನಮಿಪೆ ನಿನಗಿ೦ದು
ಅನಿಲ್,
ReplyDeleteಫೋಟೋ ತುಂಬಾ ಚೆನ್ನಾಗಿದೆ...ನೆರಳು-ಬೆಳಕಿನ ಹೊಂದಾಣಿಕೆಯಲ್ಲಿ ರವಿಕಿರಣಗಳು...ಕಪ್ಪು-ಬಿಳುಪಿನಲ್ಲಿ ನೋಡುಗನಿಗೆ ಮೂಡ್ ತರಿಸುತ್ತದೆ...
ಧನ್ಯವಾದಗಳು...
@ಪರಾಂಜಪೆ,
ReplyDeleteಕವನ ಬರೆದಿದ್ದಕ್ಕೆ ತುಂಬಾ ಧನ್ಯವಾದ.
ಕವನ ಚೆನ್ನಾಗಿದೆ. ಇಷ್ಟ ಆಯ್ತು.
@ಶಿವು,
ಚಿತ್ರ ನೋಡಿ, ನಿಮಗೆ ಒಳ್ಳೆ ಮೂಡ್ ಬಂದಿದ್ದಕ್ಕೆ ತುಂಬಾ ಧನ್ಯವಾದ.
-ಅನಿಲ್