My Blog List

Thursday, April 16, 2009

ಹನ್ನೆರಡು ಜ್ಯೋತಿರ್ಲಿಂಗಗಳು - ೧೧ [ವೆರುಳಿನ ಘುಶ್ಮೇಶ್ವರ].

ವೆರುಳಿನ ಘುಶ್ಮೇಶ್ವರ.

ವೆರುಳಿನ ಘುಶ್ಮೇಶ್ವರ.

ಎಲ್ಲಿದೆ?
ಔರಂಗಾಬಾದ್ ಇಂದ ಎಲ್ಲೋರ ಗುಹೆಗಳ ಕಡೆ ಹೋಗುವ ರಸ್ತೆಯಲ್ಲಿ ವೆರುಳ್ ಸಿಗುತ್ತದೆ. ಜ್ಯೋತಿರ್ಲಿಂಗ ಗ್ರೀಷ್ಮೇಶ್ವರ ಅಥವಾ ಘುಶ್ಮೇಶ್ವರ ಇಲ್ಲಿದೆ. ಇದು ಮೂಲತಃ ನಾಗ್ ಬುಡಕಟ್ಟು ಜನಾಂಗದವರ ದೇವಸ್ಥಾನ.

ದೇವಸ್ಥಾನದ ಸ್ವರೂಪ.
ದಶಾವತಾರದ ಕೆತ್ತನೆಗಳಿಂದ ಶೋಭಿತವಾದ ಇದು ೨೪೦ * ೧೮೫ ಅಡಿ ವಿಸ್ತಾರವಾಗಿದೆ. ಅಂಗಳದಲ್ಲಿ ೨೪ ಕಂಬಗಳ ಮೇಲೂ ನಂದಿಕೇಶ್ವರನ ಮೂರ್ತಿ ಇದೆ. ದೇವರು ಪೂರ್ವಾಭಿಮುಖವಾಗಿದ್ದು ದೇವಾಲಯದಿಂದ ಪವಿತ್ರ ಜಲ ಪ್ರವಹಿಸುವುದು.

ಸ್ಥಳ ಪುರಾಣ.
ಈ ಸ್ಥಳದ ಕುರಿತು ಅನೇಕ ಕತೆ(ಥೆ)ಗಳಿವೆ. ಪಾರ್ವತಿ ಕುಂಕುಮ ಇಟ್ಟುಕೊಳ್ಳುವಾಗ ಅದು ಶಿವಲಿಂಗವಾಗಿ ಕೆಳಗೆ ಬಿದ್ದಿತಂತೆ. ಇದಕ್ಕೆ ಕುಂಕುಮೇಶ್ವರ ಎಂಬ ಹೆಸರು ಕೂಡ ಇದೆ. ಇನ್ನೊಂದು ಕತೆ(ಥೆ)ಯಂತೆ, ದೇವಗಿರಿ ಪರ್ವತದಲ್ಲಿ ಸುಧರ್ಮ-ಸುದೇಹಿ ದಂಪತಿಗಳು ಧರ್ಮಪರರಾಗಿದ್ದರು. ಇವರಿಗೆ ಮಕ್ಕಳಾಗದಿರಲು ತಂಗಿ ಘುಶ್ಮಾದೇವಿಗೆ ಮಗುವಾಯಿತು. ಅಕ್ಕ ಸುದೇಹಿ ಆ ಮಗುವನ್ನು ಮೋಸದಿಂದ ಕೊಂದಳು. ಆಗ ತಂಗಿಯು ಶಿವನನ್ನು ಪ್ರಾರ್ಥಿಸಿದಳು. ಶಿವನು ಮಗುವನ್ನು ಬದುಕಿಸಿದ ಮತ್ತು ಅವಳ ಕೋರಿಕೆಯ ಮೇರೆಗೆ ಘುಷ್ಮೇಶ್ವರನಾಗಿ ಇಲ್ಲಿ ನಿಂತನು ಎಂದು ನಂಬಿಕೆ. ಇದನ್ನು ವೆರುಳಿನ ಅರಸನಾದ ಭೋಂಸ್ಲೆ ಸ್ಥಾಪಿಸಿದನೆಂದೂ, ಅಹಲ್ಯಾಬಾಯಿ ಹೋಳ್ಕರ‍್ ಅಭಿವೃದ್ಧಿ ಪಡಿಸಿದಳೆಂದೂ ಚಾರಿತ್ರಿಕ ದಾಖಲೆಗಳು ಹೇಳುತ್ತವೆ.

ಭೇಟಿ ನೀಡುವ ಸಮಯ.
ಮಹಾಶಿವರಾತ್ರಿಯಂದು ವಿಶೇಷ ರಥೋತ್ಸವ ನೆರವೇರುತ್ತದೆ. ವರ್ಷದ ಎಲ್ಲಾ ದಿನಗಳಲ್ಲೂ ಪೂಜೆ ನೆರವೇರುತ್ತದೆ.

ಸೇರುವ ಬಗೆ.
ಔರಂಗಾಬಾದ್ ಅತಿ ಹತ್ತಿರವಿರುವ ರೈಲು ನಿಲ್ದಾಣ (೩೧ ಕಿ.ಮೀ). ದೌಲತಾಬಾದ್ ಇಂದ ಸಾಕಷ್ಟು ಬಸ್ಸುಗಳಿವೆ.

ವಸತಿ.
ದೇವಸ್ಹಾನದ ಅತಿಥಿಗೃಹ ಮಾತ್ರ ಉಳಿದುಕೊಳ್ಳಲು ಇರುವ ತಾಣ. ಔರಂಗಾಬಾದ್ ಅಲ್ಲಿ ಸಾಕಷ್ಟು ಸುಸಜ್ಜಿತ ಹೋಟೆಲ್ಗಳಿವೆ.

----------------------------------------------
ಚಿತ್ರ ಕೃಪೆ: ಇಲ್ಲಿಂದ ಪಡೆದದ್ದು

8 comments:

  1. ಅನಿಲ್
    ಮಾಹಿತಿಗೆ ಧನ್ಯವಾದ. ಚೆನ್ನಾಗಿದೆ. ಆದ್ರೆ ಯಾಕೋ ಸಣ್ಣ ವಯಸ್ಸಿಗೇ ತೀರ್ಥಕ್ಷೇತ್ರ ದರ್ಶನ ಮಾಡ್ಕೊ೦ಡು ಬರ್ತಿದೀರಲ್ಲ ??

    ReplyDelete
  2. ಅನಿಲ್,

    ಮಾಹಿತಿ ಕಲೆಹಾಕಲು ನೀವು ಪಡುತ್ತಿರುವ ಶ್ರದ್ಧೆ ಕಾಳಜಿ ಎದ್ದುಕಾಣುತ್ತದೆ....ನಿಮಗೆ ಒಳ್ಳೆಯದಾಗಲಿ...

    ಧನ್ಯವಾದಗಳು...

    ReplyDelete
  3. ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

    ReplyDelete
  4. ಅನಿಲ್,
    ಔರಂಗಾ ಬಾದ್ ಗೆ ಹೋಗಿರುವೆ. ಅಲ್ಲಿ ತಾಜ್ ಮಹಲ್ ರೀತಿಯಲ್ಲೇ ಔರಂಗಜೇಬ್ ಮಿನಿತಾಜ್ ಕಟ್ಟಿಸಿದ್ದಾನೆ. ಆದರೆ ತಿಳಿಯದೆ ಘುಶ್ಮೇಶ್ವರ ನೋಡಿಲ್ಲ. ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ.

    ReplyDelete
  5. This comment has been removed by the author.

    ReplyDelete
  6. ಅನಿಲ್....

    ಮಾಹಿತಿ.., ಲೇಖನ
    ತುಂಬಾ ಚೆನ್ನಾಗಿದೆ.. ಉಪಯುಕ್ತವಾಗಿದೆ....
    ಅಲ್ಲಿಗೆ ಹೋಗುವಾಗ ನಿಮ್ಮ ಬ್ಲಾಗ್ ನೋಡಿ ಹೋಗಬಹುದು...

    ಧನ್ಯವಾದಗಳು...

    ReplyDelete
  7. ಅನಿಲ್,
    ಬ್ಲಾಗ್ ತುಂಬಾ ಚೆನ್ನಾಗಿದೆ, ಸ್ಥಳಗಳ ಬಗ್ಗೆ ಮಾಹಿತಿ ಚೆನ್ನಾಗಿ ಕೊಟ್ಟಿದ್ದೀರಿ.ಮುಂದಿನ ಸಲ ಭಾರತಕ್ಕೆ ಬಂದಾಗ ಯಾವ ಸ್ಥಳಗಳನ್ನು ಭೇಟಿ ಮಾಡಲು ಆಗತ್ತೆ ನೋಡ್ಬೇಕು. ಎಲ್ಲ ಸ್ಥಳಗಳ ಮಾಹಿತಿಗೆ ಧನ್ಯವಾದಗಳು.

    ReplyDelete
  8. ಪರಾಂಜಪೆ, ಶಿವು, ಡಾ. ಗುರು, ಮಲ್ಲಿಕಾರ್ಜುನ್, ಪ್ರಕಾಶ್, ಭಾರ್ಗವಿ,
    ಪ್ರತಿಕ್ರಿಯಿಸಿ ಹುರಿದುಂಬಿಸಿದ್ದಕ್ಕೆ ತುಂಬಾ ಧನ್ಯವಾದಗಳು.

    -ಅನಿಲ್

    ReplyDelete