My Blog List

Sunday, December 07, 2008

ಅಬ್ಬಾ!!! ಎಂಥಾ ಆಚರಣೆ!!!


ಹೆಂಡತಿ: ಆ ಚಿತ್ರದಲ್ಲಿರುವ ಕುಡುಕನನ್ನು ನೋಡ್ತಾ ಇದ್ದೀರಾ?

ಗಂಡ: ಹಾ ಹೌದು!!! ಅದರಲ್ಲೇನಿದೆ ವಿಶೇಷ?

ಹೆಂಡತಿ: ಹತ್ತು ವರ್ಷಗಳ ಹಿಂದೆ ಈತನನ್ನು ಮದುವೆಯಾಗಲು ನಾನು ಒಪ್ಪಿರಲಿಲ್ಲ.

ಗಂಡ: ಅದಕ್ಕೇನೀಗ?

ಹೆಂಡತಿ: ಅಂದಿನಿಂದ ಇಂದಿನವರೆಗೂ ಈತ ಕುಡುಯುತ್ತಿದ್ದಾನೆ.

ಗಂಡ: ಓಹೋ!!!!! ಸಂತೋಷವನ್ನು ಈ ರೀತಿ ಸತತ ಹತ್ತು ವರ್ಷಗಳಿಂದ ಆಚರಿಸುತ್ತಾ ಬಂದಿದ್ದಾನೆ!!!!!!!!! Smiling

10 comments:

 1. ಅನಿಲ್ ರಮೇಶ್,

  ನೀವು ಬಲೇ ಇದ್ದೀರಿ.. ಸೂಜಿ ಚಿಕ್ಕದಾದರೂ ಅದರೊಳಗಿನ ಔಷದಿ ಸ್ಟ್ರಾಂಗ್ ಹಾಕಿ ಸರಿಯಾಗಿ ಮತ್ತು ಬರಿಸುತ್ತೀರಿ....

  ReplyDelete
 2. ಶಿವು,
  ಹಂಗಂತೀರಾ???

  ತುಂಬಾ ಧನ್ಯವಾದಗಳು...

  ಹೀಗೇ ಬರುತ್ತಿರಿ...

  ReplyDelete
 3. ಅನಿಲ್ ರಮೇಶ್,
  ನಿಮ್ಮ ಹೊಸ ಪೋಸ್ಟಿಂಗ್ ಯಾಕೆ ನಿಮ್ಮ ಬ್ಲಾಗಿನಲ್ಲಿ ಇಲ್ಲ ನೋಡಿ ?[ನಮ್ಮ ಲಿಂಕಿನಲ್ಲಿ ನೀವು ಮಾಡಿರುವ ಹೊಸ ಪೋಸ್ಟಿಂಗ್ ತೋರಿಸುತ್ತಿದೆ !]

  ReplyDelete
 4. ಇಲ್ಲ. ಈ ಬರಹ ನಿಮಗೆ ಇಷ್ಟ ಆಗ್ಲಿಲ್ಲ ಅಂತ ಅಂದ್ಕೊಂಡೆ. ಅದಕ್ಕೆ ಚೆನ್ನಾಗಿಲ್ವಾ ಅಂತ Reply ಮಾಡಿದ್ದೆ.

  ReplyDelete
 5. ಆಮೇಲೆ ಆ ಕಮೆಂಟ್ ಅನ್ನು ಅಳಿಸಿಹಾಕಿದೆ.

  ReplyDelete
 6. ಅನಿಲ್ ರಮೇಶ್....
  ಜೋಕ್...ಚೆನ್ನಾಗಿದೆ...
  ಹೊಂದಿಕೊಂಡು ಬಾಳಿದರೆ..ದಾಂಪತ್ಯವೂ ಸೊಗಸು....
  ನೀವು "ಮುದ್ದಣ..ಮನೋರಮೆ" ಸಲ್ಲಾಪ ಓದಿದ್ದೀರ..?
  ಓದಿಲ್ಲವಾದರೆ..ದಯವಿಟ್ಟು ಓದಿ..ತುಂಬಾ ಚೆನ್ನಾಗಿದೆ...
  ದಾಂಪತ್ಯದ ತೆಳು ಹಾಸ್ಯ ಎಳೆ ಎಳೆಯಾಗಿ ಚಂದವಾಗಿ ಬರೆದಿದ್ದಾರೆ....

  ಇನ್ನಷ್ಟು jokes... ಬರಲಿ....

  ReplyDelete
 7. ಪ್ರಕಾಶ್,
  ತುಂಬಾ ಧನ್ಯವಾದಗಳು.

  >>ಹೊಂದಿಕೊಂಡು ಬಾಳಿದರೆ..ದಾಂಪತ್ಯವೂ ಸೊಗಸು....
  ಇರಬಹುದೇನೋ. ನನಗೆ ಇನ್ನೂ ಅನುಭವ ಆಗಿಲ್ಲ. ಯಾಕೆ ಅಂದ್ರೆ, ನನಗಿನ್ನೂ ಮದುವೆ ಆಗಿಲ್ಲ.

  >>ನೀವು "ಮುದ್ದಣ..ಮನೋರಮೆ" ಸಲ್ಲಾಪ ಓದಿದ್ದೀರ..?
  ಹೂ. ಓದಿದ್ದೇನೆ. ನನಗೂ ಅದು ತುಂಬ ಇಷ್ಟ ಆಯ್ತು.

  ReplyDelete
 8. ಅನಿಲ್ ರಮೇಶ್...

  ಅನುಭವ ಇಲ್ಲವೆಂದಿರಲ್ಲ ಅದಕ್ಕೇ "ಮುದ್ದಣ ಮನೋರಮೆ " ಸಲ್ಲಾಪ ಓದಿ ಅಂದಿದ್ದು..

  ಅದರಲ್ಲೂ ಸೊಗಸಿದೆ...
  ಅದು ಬೇಗ ನಿಮ್ಮದಾಗಲಿ..
  ಹಾರೈಸುವೆ......

  ReplyDelete
 9. ಚೆನ್ನಾಗಿದೆ ಸಂಭಾಷಣೆ

  ReplyDelete