My Blog List

Friday, January 30, 2009

ಶುಕ್ರಚಂದ್ರಯುತಿ



ಇಂದು ಸಂಜೆ ಆಗಸದಲ್ಲಿ ಈ ಅಮೋಘ ದೃಶ್ಯ ನೋಡುವ ಸೌಭಾಗ್ಯ ನನ್ನದಾಯಿತು. Smiling

ಶುಕ್ರ - ಚಂದ್ರಯುತಿಯ ಬಗ್ಗೆ ಸ್ನೇಹಿತರು ಹೇಳುತಲೇ ಇದ್ದರು.

ನಿನ್ನೆ ಕಛೇರಿಯಿಂದ ಬರುವಾಗ ನೋಡಿದ್ದೆ. ಆದರೆ ಕ್ಯಾಮೆರಾ ಮನೆಯಲ್ಲಿ ಇದ್ದಿದ್ದರಿಂದ ಫೋಟೊ ತೆಗೆಯುವ ಅವಕಾಶ ಸಿಗಲಿಲ್ಲ.

ಇಂದು ಮರೆಯದೇ ಕ್ಯಾಮೆರಾವನ್ನು ಕಛೇರಿಗೆ ತೆಗೆದುಕೊಂಡು ಹೋಗಿದ್ದೆ.

ಸಂಜೆ ಸುಮಾರು ೬.೩೦ಕ್ಕೆ ಶುಕ್ರ-ಚಂದ್ರಯುತಿಯ ಬಗ್ಗೆ ನೆನಪಾಯ್ತು.

ಕೂಡಲೇ ಕ್ಯಾಮೆರಾ ತೆಗೆದುಕೊಂಡು ಆಫೀಸಿನ Terraceಗೆ ಹೋಗಿ ಕೆಲವು ಚಿತ್ರಗಳನ್ನು ತೆಗೆದೆ.

ಕ್ಯಾಮೆರಾದ ಬ್ಯಾಟೆರಿ ಮುಗಿಯುವುದರಲ್ಲಿತ್ತು.

ಆದರೂ ಕೆಲವು ಚಿತ್ರಗಳನ್ನು ತೆಗೆದೆ.

ನಂತರ ಮನೆಗೆ ಬಂದು ಮತ್ತೊಮ್ಮೆ ಶುಕ್ರ-ಚಂದ್ರಯುತಿಯ ಚಿತ್ರ ತೆಗೆದೆ.

ಮನೆಗೆ ಬಂದು ತೆಗೆದ ಫೋಟೋವನ್ನು ಇಲ್ಲಿ ಅಪ್ಲೋಡ್ ಮಾಡಿರುವೆ.

ನೋಡಿ, ನಿಮ್ಮ ಅನಿಸಿಕೆ ತಿಳಿಸಿ.

4 comments:

  1. ಅನಿಲ್,

    ಪರ್ವಾಗಿಲ್ಲಾ ನೀವೂನು ಒಳ್ಳೆ ಕಮಿಟ್‌ಮೆಂಟ್ ಇಟ್ಟುಕೊಂಡಿದ್ದೀರ್....ಈಗಿದ್ದರೇನೇ ಫೋಟೊಗ್ರಫಿಯಲ್ಲಿ ಏನಾದರೂ ಸಾಧಿಸಲು ಸಾಧ್ಯ....ಫೋಟೊ ತುಂಬಾ ಚೆನ್ನಾಗಿದೆ.....ಮುಂದುವರಿಸಿ....

    ReplyDelete
  2. ಚೆನ್ನಾಗಿದೆ ಅನಿಲ್.

    ನಮಗೆ ಕಂಜಂಕ್ಷನ್ ಒಂದು ಹತ್ತು ಗಂಟೇಲಿ ತಪ್ಪಿ ಹೋಯ್ತು. ನೆನ್ನೆ ಸಂಜೆ ಚಂದ್ರ ಇನ್ನೂ ಕೆಳಗಿದ್ದ. ಇವತ್ತು ಮೇಲಕ್ಕೆ ಹೋಗ್ಬಿಟ್ಟಿರ್ತಾನೆ!

    ReplyDelete
  3. ಶಿವು,
    ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.

    >>ಫೋಟೊಗ್ರಫಿಯಲ್ಲಿ ಏನಾದರೂ ಸಾಧಿಸಲು ಸಾಧ್ಯ
    ಛಾಯಾಗ್ರಹಣದಲ್ಲಿ ತುಂಬಾ ಆಸಕ್ತಿಯುಂಟು.

    ನಿಮ್ಮ ಪ್ರೋತ್ಸಾಹ ಅಗತ್ಯ.

    -ಅನಿಲ್.

    ReplyDelete
  4. ರಾಮಪ್ರಸಾದ್,

    ಚಿತ್ರವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದ.

    ಇಂದು ಪ್ರಯತ್ನ ಪಡಿ, ಶುಕ್ರಚಂದ್ರಯುತಿಯ ಚಿತ್ರ ಸೆರೆಹಿಡಿಯಲು.

    -ಅನಿಲ್.

    ReplyDelete