My Blog List

Sunday, January 11, 2009

ಹನ್ನೆರಡು ಜ್ಯೋತಿರ್ಲಿಂಗಗಳು - ೧

ಭಾರತದ ವಿವಿಧ ಭಾಗಗಳಲ್ಲಿ ಜ್ಯೋತಿರ್ಲಿಂಗಗಳು ಹರಡಿಕೊಂಡಿವೆ.
ಈ ಹನ್ನೆರಡು ಜ್ಯೋತಿರ್ಲಿಂಗಗಳ ಯಾತ್ರೆ ಹೇಗೆ ಎಂದು ತಿಳಿಯೋಣ.

ಸೌರಾಷ್ಟ್ರೇ ಸೋಮನಾಥ೦ ಚ |
ಶ್ರೀಶೈಲೇ ಮಲ್ಲಿಕಾರ್ಜುನ೦ |
ಉಜ್ಜಯನ್ಯ೦ ಮಹಾಬಲ೦ |
ಓ೦ಕಾರೇ ಮಮಲೇಶ್ವರ |
ಪರಾಲ್ಯಾ೦ ವೈದ್ಯನಾಥ೦ ಚ |
ಡಾಕಿಣ್ಯಾ೦ ಭೀಮಶಂಕರಂ |
ಸೇತುಬ೦ಧೇ ತು ರಾಮೇಶ೦ |
ನಾಗೇಶ೦ ಧಾರುಕಾವನೆ |
ವಾರಣಸ್ಯಾ೦ತು ವಿಶ್ವೇಶಂ |
ತ್ರ್ಯ೦ಬಕ೦ ಗೌತಮೀತಟೆ |
ಹಿಮಾಲಯೇ ತು ಕೇದಾರ೦ |
ಘುಷ್ಮೇಶ್ವರಂ ಚ ಶಿವಾಲಯೇ ||
ಏತಾನಿ ಜ್ಯೋತಿರ್ಲಿ೦ಗಾನಿ ಸಾಯ೦ ಪ್ರಾತಃ ಪಠೇನ್ನರಃ
ಸಪ್ತ ಜನ್ಮ ಕೃತ೦ ಪಾಪ೦ ಸ್ಮರಣೇನ ವಿನಶ್ಯತಿ ||

ಮೇಲೆ ಹೇಳಿದ ಶ್ಲೋಕವು ಸುಪ್ರಸಿದ್ಧ "ರುದ್ರಸಂಹಿತೆ"ಯಲ್ಲಿದೆ.

. ಸೌರಾಷ್ಟ್ರದ ಸೋಮನಾಥ.




ಎಲ್ಲಿದೆ?
ಗುಜರಾತಿನ ಕಾಥೇವಾಡ ಜಿಲ್ಲೆಯ ದಕ್ಷಿಣ ತುದಿಯಲ್ಲಿದೆ.
ಸಮುದ್ರ ತೀರದಲ್ಲಿರುವ ಇದನ್ನು ಪ್ರಾಚೀನ ತ್ರಿವೇಣಿ ಕ್ಷೇತ್ರ ಎಂದೂ ಕರೆಯಲಾಗುತ್ತದೆ.
ಸರಸ್ವತಿ, ಹಿರಣ್ಯ ಮತ್ತು ಕಪಿಲ ನದಿಗಳು ಇಲ್ಲಿ ಸಂಗಮವಾಗುವುವು.
ಚಂದ್ರನು ಇಲ್ಲಿ ತಪಸ್ಸು ಮಾಡಿದ್ದನಂತೆ. ಈ ಪೌರಾಣಿಕ ನಂಬಿಕೆ ಅನುಸರಿಸಿ ’ಸೋಮನಾಥ’ ಎಂಬ ಹೆಸರು ಬಂದಿದೆ.
ಅರ್ಜುನ ತನ್ನ ತೀರ್ಥಯಾತ್ರೆಯನ್ನು ಇಲ್ಲಿಂದಲೇ ಆರಂಭಿಸಿದ್ದಂತೆ.
ಈ ಕ್ಷೇತ್ರದ ಕುರಿತು ಅನೇಕ ಪೌರಾಣಿಕ ನಂಬಿಕೆಗಳಿವೆ.

ಭೇಟಿ ನೀಡುವ ಸಮಯ.
ಸೋಮನಾಥದಲ್ಲಿನ ಕಾಲಭೈರವೇಶ್ವರ ರಥೋತ್ಸವ ಶಿವರಾತ್ರಿಯಂದು ನಡೆಯುತ್ತದೆ.
ಇದಲ್ಲದೆ ಜುಲೈ ಮತ್ತು ಡಿಸೆಂಬರ್ ತಿಂಗಳಲ್ಲಿ ವಿಶೇಷ ರಥೋತ್ಸವಗಳನ್ನು ಹಮ್ಮಿಕೊಳ್ಳಲಾಗುತ್ತವೆ.
ಭೇಟಿ ನೀಡುವ ನಿರ್ದಿಷ್ಟ ದಿನ ನಿಗದಿಯಾಗಿರದಿದ್ದರೂ, ಫೆಬ್ರವರಿ-ಮಾರ್ಚ್ ತಿಂಗಳು ಉತ್ತಮ.

ಹೇಗೆ ಹೋಗುವುದು?
ಬೆಂಗಳೂರು - ಅಹಮದಾಬಾದ್: ರೈಲು ಅಥವಾ ವಿಮಾನ ಮೂಲಕ ಪ್ರಯಾಣ. ಅಲ್ಲಿಂದ ೪೦೬ಕಿ.ಮೀ. ದೂರದಲ್ಲಿರುವ ವೇರಾವಲ್ ರೈಲು ನಿಲ್ದಾಣಕ್ಕೆ ಪ್ರಯಾಣ.
ವೇರಾವಲ್ ಇಂದ ಸೋಮನಾಥ ೨೦ ಕಿ.ಮೀ. ದೂರದಲ್ಲಿದೆ. ಸಾಕಷ್ಟು ಸರ್ಕಾರಿ ಹಾಗೂ ಖಾಸಗಿ ವಾಹನಗಳ ವ್ಯವಸ್ಥೆ ಇದೆ.

ವಸತಿ.
ಸೋಮನಾಥ ದೇವಸ್ಥಾನಕ್ಕೆ ಸೇರಿದ ಅತಿಥಿ ಗೃಹಗಳಿವೆ. ದ್ವಾರಕಾ ಪೀಠದ ಶಾರದಾ ವಿಶ್ರಾಂತಿ ಗೃಹವಿದೆ. ಇದಲ್ಲದೆ, ಕೆಲವು ಖಾಸಗಿ ಹೊಟೆಲ್ಗಳು ಕೂಡ ಲಭ್ಯ.



-----------------------------------------------------------------------------
ಚಿತ್ರ ಕೃಪೆ: ಶೂನ್ಯ.ನೆಟ್

2 comments:

  1. olle maahiti. short, sufficient and crisp. baritiri.dhanyavaadagalu.

    ReplyDelete
  2. ಲಕ್ಷ್ಮಿ,
    ಮೊಟ್ಟಮೊದಲಿಗೆ, ನನ್ನ್ ಬ್ಲಾಗಿಗೆ ಸ್ವಾಗತ.

    ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.

    ಹನ್ನೆರಡು ಭಾಗಗಳಲ್ಲಿ ಬರೆಯುತ್ತಿದ್ದೇನೆ.

    ಅಂದಹಾಗೆ, ನಿಮ್ಮನ್ನು ನನ್ನ ಗೆಳೆಯರ ಬಳಗದಲ್ಲಿ ಸೇರಿಸಿಕೊಂಡಿದ್ದೇನೆ.

    -ಅನಿಲ್.

    ReplyDelete