My Blog List

Wednesday, January 28, 2009

ಪ್ರೀತಿ, ಪ್ರೇಮ... ಹೀಗೊಂದು Philosophy

ಪ್ರೀತಿ, ಪ್ರೇಮ, Philosophy

ನಾವು ಪ್ರೀತಿಸಿ ಮದುವೆಯಾಗಿದ್ದೀವಿ - ಹಾಗಂತ ಹೇಳ್ತಾರೆ ಕೆಲವರು.

ನಾವು ಮದುವೆಯಾಗಿ ಪ್ರೀತಿಸ್ತಾ ಇದ್ದೀವಿ - ಹೀಗಂತಾರೆ ಹಲವರು.

ಎರಡೂ ಬಗೆಯ ಜನರಿಗೂ ಬದುಕಿನಲ್ಲಿ ಅಹಹಹಾ ಎಂಬಂಥ ಖುಷಿ ದೇವರಾಣೆಗೂ ಸಿಕ್ಕುವುದಿಲ್ಲ ಎಂಬುದು ಪರಮ ಸತ್ಯ.

ಅಂದಮೇಲೆ-ಪ್ರೀತಿಸಿ ಮದುವೆಯಾಗಬೇಕಾ? ಅಥವಾ ಮದುವೆಯಾದ ಮೇಲೆಯೇ ಪ್ರೀತಿಸಬೇಕಾ?

ಉತ್ತರಿಸುವುದು ಕಷ್ಟ.

ಮದುವೆಯ ದಿನಗಳವರೆಗೂ ಪ್ರೀತಿಸುವುದೇ ಬೇಡ ಎನ್ನುವುದಾದರೆ ಕಳ್ಳ ಪ್ರೇಮದ ಪುಳಕವನ್ನು ಕಳೆದುಕೊಳ್ಳಬೇಕಾಗುತ್ತದೆ.

ಇದರರ್ಥ ಇಷ್ಟೇ - ನಾವು, ನೀವೆಲ್ಲ ಪ್ರೇಮಿಸದೇ ಸುಖವಾಗಿರಲಾರೆವು ಮತ್ತು ಪೇಮಿಸಿದರೂ ಸುಖದಿಂದ ಬದುಕಲಾರೆವು!

ನೆನಪಿರಲಿ:

ಪ್ರೀತಿ-ಪ್ರೇಮ ಅನ್ನೋದು ಶುದ್ಧ ಜೂಜು. ಅದನ್ನು ಗೆಲ್ಲುವ ಹಠದಿಂದಲೇ ಆಡಬೇಕು. ಸೋತಷ್ಟೂ ಹಠ ಹೆಚ್ಚಾಗಬೇಕು.

ನಮ್ಮ ಬದುಕೆಂಬುದು ಪ್ರೀತಿಯ ಪರಿಧಿಯೊಳಗೆ ಇರಬೇಕು. ನಾವೆಲ್ಲ ಇದರಲ್ಲೇ ಮುಳುಗಬೇಕು.

ಈಜಿದರೆ ದಡ. ಈಜದಿದ್ದರೆ ದಡವೇ ಗತಿ. ಹೀಗಾಗಿ ಈಜಾಡುತ್ತಲೇ ಇರಬೇಕು.

ಅದೇ ಜೀವನ. ಅದೇ ಪ್ರೇಮ.

-----------------------------------------------------------------

ಮರೆತಿದ್ದೆ: philosophy ನನ್ನದಲ್ಲ. ;)

ಮಿಂಚಂಚೆಯಲ್ಲಿ ಬಂದದ್ದು. :)

*

6 comments:

  1. ಅನಿಲ್,

    ಸಕ್ಕತ್ತಾಗಿದೆ ನಿಮ್ಮ philosophy....


    "ಮದುವೆಯ ದಿನಗಳವರೆಗೂ ಪ್ರೀತಿಸುವುದೇ ಬೇಡ ಎನ್ನುವುದಾದರೆ ಆ ಕಳ್ಳ ಪ್ರೇಮದ ಪುಳಕವನ್ನು ಕಳೆದುಕೊಳ್ಳಬೇಕಾಗುತ್ತದೆ"

    ನಿಮಗೆ ಮದುವೆ ಆಗಿದೆಯೋ ಇಲ್ಲವೋ ಗೊತ್ತಿಲ್ಲಾ....ಆಗಿದ್ದರೆ ಇದು ಅನುಭವದ ಮಾತು ಅಂತೀನಿ...
    ಆಗಿಲ್ಲದಿದ್ದರೂ ಈ ಸಾಲುಗಳು ನನಗಿಷ್ಟವಾಯಿತು....

    ReplyDelete
  2. Anil,
    Wonderful Post! Tumba chennagide!
    I remembered a quote which seems similar to this philosophy. It goes like this:

    I have felt it and lived it and now it leaves me here-"Love is the ultimate pain and joy, without it you die, with it you perish!!"

    ReplyDelete
  3. ಶಿವು,
    ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್.

    >>ನಿಮಗೆ ಮದುವೆ ಆಗಿದೆಯೋ ಇಲ್ಲವೋ ಗೊತ್ತಿಲ್ಲಾ
    ಮದುವೆ ಆಗಿಲ್ಲ.

    -ಅನಿಲ್.

    ReplyDelete
  4. ಅಶ್ವಿನಿ,

    ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.

    -ಅನಿಲ್.

    ReplyDelete
  5. ಅನಿಲ್,
    ನನಗೆ ಮದುವೆಯಾಗಿದೆ....

    ReplyDelete
  6. ಶಿವು,

    ನನಗೆ ಮದುವೆ ಆಗಿಲ್ಲ ಅಂತ ಹೇಳಿದ್ದು.

    ನೀವು ನನಗೆ ಕೇಳಿದ್ರಲ್ಲಾ, ಅದಕ್ಕೆ ಉತ್ತರಿಸಿದೆ.

    -ಅನಿಲ್.

    ReplyDelete