My Blog List

Thursday, January 29, 2009

ಸರ್ವಗುಣ ಸಂಪನ್ನ ಕನ್ಯೆ.

ಒಬ್ಬ ಮದುವೆ ವಯಸ್ಸಿನ ಯುವಕ ಕೇಳಿದ "ಮಾನ್ಯರೇ, ನಿಮ್ಮ ಮಗಳು ಒಳ್ಳೇ ಗುಣಗಳನ್ನು ಹೊಂದಿರುವುದರ ಜೊತೆಗೆ ನೋಡಲು ತುಂಬಾ ಸುಂದರವಾಗಿದ್ದಾಳಂತೆ. ನಿಜವಾ?"

ಹುಡುಗಿಯ ತಂದೆ ಉತ್ತರಿಸಿದರು "ಹೌದು! ನನ್ನ ಮಗಳು ಸುಂದರವತಿ, ಜೊತೆಗೆ ಗುಣವತಿ"

"ಆದರೆ, ನಿಮ್ಮ ಮಗಳು ಅಡುಗೆ ಮಾಡಿ, ಮನೆಯನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಾಳೆಯೇ?"

"ಖಂಡಿತ. ಅವಳು ಧರ್ಮವತಿ"

"ನಿಮ್ಮ ಮಗಳಿಗೆ ಕಲೆಯಲ್ಲಿ ಆಸಕ್ತಿಯಿದೆಯೇ?"

"ಅವಳು ಕಲಾವತಿ"

"ಅವಳು ವಿದ್ಯಾಭ್ಯಾಸ ಮಾಡಿದ್ದಾಳೆಯೇ?"

"ಹು. ಅವಳು ವಿದ್ಯಾವತಿ".

"ವೇದಗಳ ಅಧ್ಯಯನ ಮಾಡಿದ್ದಾಳೆಯೇ?"

"ಓಹ್. ಅವಳು ವೇದವತಿ".

ಆ ಯುವಕ ಸಂತೋಷಗೊಂಡು ಸರ್ವಗುಣ ಸಂಪನ್ನಳಾದ ಇವಳೇ ತನಗೆ ತಕ್ಕ ವಧು ಎಂದು ತಿಳಿದು ಆ ಹುಡುಗಿಯನ್ನು ಮದುವೆಯಾಗುತ್ತಾನೆ.

ಒಂದು ವಾರದ ನಂತರ ಆ ಯುವಕ ಮತ್ತೆ ಮಾವನ ಮನೆಗೆ ಬರುತ್ತಾನೆ. ಅವನ ಮುಖ ಬಾಡಿರುತ್ತದೆ.

ಮಾವ "ಯಾಕಪ್ಪ? ಏನಾಯ್ತು? ಏಕೆ ನಿನ್ನ ಮುಖ ಬಾಡಿದೆ? ನಿನ್ನ ಮನದಲ್ಲಿ ಏನೋ ಚಿಂತೆ ಇರೋ ಹಾಗಿದೆ?" ಎಂದು ಕೇಳುತ್ತಾನೆ.

ಅದಕ್ಕೆ ಆ ಯುವಕ "ಮಾವ, ನೀವು ನಿಮ್ಮ ಮಗಳು ಸುಂದರವತಿ, ಗುಣವತಿ, ಧರ್ಮವತಿ, ಕಲಾವತಿ, ವಿದ್ಯಾವತಿ, ವೇದವತಿ ಎಂದೆಲ್ಲಾ ಹೇಳಿದಿರಿ. ಅಲ್ವೇ?"

"ಹೌದು. ಹೇಳಿದೆ."

"ಆದರೆ, ಈಗಾಗಲೇ ಅವಳು ಗರ್ಭವತಿ ಎಂದು ಹೇಳಲು ಮರೆತಿರಲ್ಲಾ?" Sad

2 comments:

  1. ಅನಿಲ್,

    ನಿಮ್ಮನ್ನು ಏನೋ ಅಂದುಕೊಂಡಿದ್ದೆ.....ಬಲೇ ಮಜಾ ಮಾಡ್ತೀರಿ....ಅಂತ ಗೊತ್ತಾಯ್ತು.....

    ಕೊನೆಯ ಪಂಚ್ ಸಿಕ್ಕಾ ಪಟ್ಟೆ ಸಕ್ಕಾತ್ತಾಗಿದೆ...ನನಗೆ ನಗು ಬಂತು.....
    ಆಹಾಂ! ನೀವು ಇದೇ ರೀತಿ ಮಹಃಪೂರ್ವಕವಾಗಿ ನಗಬೇಕೆ....ನಡೆದಾಡುವ ಭೂಪಟಗಳ ನೋಡಬನ್ನಿ....
    ನನ್ನ ಬ್ಲಾಗಿನಲ್ಲಿ.....

    ReplyDelete
  2. ಶಿವು,
    ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.

    ನಿಮಗೆ ನಗು ಬಂತೆಂದು ತಿಳಿದು ಸಂತೋಷವಾಯ್ತು.

    -ಅನಿಲ್.

    ReplyDelete