ಸ್ವಾಮಿಯೇ ಶರಣಂ ಅಯ್ಯಪ್ಪ.
ಹೋದ ವರ್ಷ Cousin ರಾಘು ಅವರ ಅಪ್ಪ ೧೯ನೇಬಾರಿ ಶಬರಿಮಲೆಗೆ ಹೋರಟಾಗ ಕರೆದಿದ್ದರು. ರಜೆ ಸಿಗದ ಕಾರಣ ಹೋಗೋದಕ್ಕೆ ಆಗಿರ್ಲಿಲ್ಲ. :(
ಈ ವರ್ಷ ಕೂಡ ಕರೆದರು. ತಕ್ಷಣ ಜೊತೆಗೆ ಹೋಗಲು ಒಪ್ಪಿದೆ. ಕಾರಣ ಹೋದ ವಾರ ತುಂಬಾ ಕೆಲಸವಿತು. ಹಗಲು ರಾತ್ರಿ ದುಡಿದಿದ್ದೆ. (ಹೊಸ ಪ್ರಾಜೆಕ್ಟ್ ಗಿಟ್ಟಿಸಿಕೊಳ್ಳುವುದಕ್ಕೋಸ್ಕರ ಟೆಂಡರ್ Quote ಮಾಡಿದ್ದೆ. ಪ್ರಾಜೆಕ್ಟ್ ಸಿಕ್ಕರೆ ಸಂತೋಷ ಆಗುತ್ತೆ.) :)
ಇರ್ಲಿ. ಆ ವಿಷಯ ಈಗ ಬೇಡ.
ಈಗ ವಿಷಯಕ್ಕೆ ಬರುವೆ.
ಶಬರಿಮಲೆಗೆ ಹೋಗಬೇಕೆನ್ನುವ ಆಸೆ ಮುಂಚಿನಿಂದಲೂ ಇತ್ತು. ಕಾರಣಾಂತರಗಳಿಂದ ಹೋಗೋದಕ್ಕೆ ಆಗಿರ್ಲಿಲ್ಲ. ಈ ಬಾರಿ ಮಾಲೆ ಹಾಕಿಕೊಂಡು ವ್ರತ ಮಾಡಿ ಅಯ್ಯಪ್ಪನ ಕೃಪೆಗೆ ಪಾತ್ರನಾಗುವ ಅವಕಾಶ ಸಿಕ್ಕಿತು. ಹಾಗಾಗಿ ತಕ್ಷಣ ಒಪ್ಪಿಕೊಂಡೆ.
ಇಂದು ಬೆಳಿಗ್ಗೆ ಬೇಗ ಎದ್ದು ತಣ್ಣೀರಿನ ಸ್ನಾನ ಮಾಡಿ, ಮನೆದೇವರಾದ ತಿರುಪತಿ ತಿಮ್ಮಪ್ಪನಿಗೆ ಕಾಣಿಕೆ ಸಲ್ಲಿಸಿ, ಆತನ ಅಪ್ಪಣೆ ಪಡೆದು, ನಂತರ ಅಯ್ಯಪ್ಪನಿಗೂ ಕಾಣಿಕೆ ಸಲ್ಲಿಸಿದೆ.
ಅಮ್ಮ ಕೊಟ್ಟ ಹಾರ್ಲಿಕ್ಸ್ ಕುಡಿದು ಮಲ್ಲೇಶ್ವರದ ಬಳಿಯಿರುವ ಶ್ರೀರಾಂಪುರದಲ್ಲಿರುವ ಅಯ್ಯಪ ದೇವಸ್ಥಾನಕ್ಕೆ ಹೊರಟೆ. On the Way ರಾಘು ತಂದೆಯವವರನ್ನು ಜೊತೆಗೆ ಕರೆದುಕೊಂಡು ದೇವಸ್ಥಾನಕ್ಕೆ ಹೋದೆ.
ಅವರು ಹೇಳಿದಂತೆ ಮುಂಚೆಯೇ ಕೇಸರಿ/ಕಪ್ಪು ಪಂಚೆ, ಉತ್ತರೀಯಗಳನ್ನು ಅಮ್ಮ ಮಲ್ಲೇಶ್ವರಕ್ಕೆ ಹೋಗಿದ್ದಾಗ ಖರೀದಿಸಿದ್ದರು. ಒಂದು ಪಂಚೆ ಹಾಗೂ ಒಂದು ಉತ್ತರೀಯವನ್ನು ತೆಗೆದುಕೊಂಡು ಹೋಗಿದ್ದೆ. ದೇವಸ್ಥಾನಕ್ಕೆ ಅಂಟಿಕೊಂಡಿರುವ ಅಂಗಡಿಯಲ್ಲಿ ಇರುಮುಡಿ ಬ್ಯಾಗ್,ಸೈಡ್ ಬ್ಯಾಗ್, ಗಣೇಶ-ಅಯ್ಯಪ್ಪ-ಸುಬ್ರಹ್ಮಣ್ಯ ದೇವರುಗಳು ಒಟ್ಟಿಗೇ ಇರುವ ಚಿತ್ರಪುಟ ಹಾಗೂ ಮಾಲೆ ಖರೀದಿಸಿ, ನಂತರ ದೇವಸ್ಥಾನದ ಅರ್ಚಕರ ಸಮ್ಮುಖದಲ್ಲಿ ೫೪ ರುದ್ರಾಕ್ಷಿಗಳುಳ್ಳ ಮಾಲೆಯನ್ನು ಹಾಕಿಕೊಂಡೆ.
ಅರ್ಚಕರು ಅಕ್ಕಿಯನ್ನು, ಎರಡು ಅಚ್ಚು ಬೆಲ್ಲವನ್ನು ನನ್ನಿಂದ ಸ್ವೀಕರಿಸಿದರು.
ನಂತರ ಮನೆಗೆ ಬಂದು ಅಯ್ಯಪ್ಪನ ಭಕ್ತಿಗೀತೆಗಳ ಕ್ಯಾಸೆಟ್ ಹುಡುಕಿದೆ. ಸಿಕ್ಕ ನಂತರ ಮ್ಯೂಸಿಕ್ ಪ್ಲೇಯರಿನಲ್ಲಿ ಹಾಕಿ ಪರೀಕ್ಷಿಸಿದೆ. ಕ್ಯಾಸೆಟ್ ಚೆನ್ನಾಗಿತ್ತು.
ಸಂಜೆ ೫.೩೦ಕ್ಕೆ ಮತ್ತೆ ತಣ್ಣೇರು ಸ್ನಾನ ಮಾಡಿ ಸಾಯಂಕಾಲದ ಸಂಧ್ಯಾವಂದನೆಯನ್ನು ಮಾಡಿದೆ. ನಂತರ ಸಂಕಲ್ಪ ಮಾಡಿಕೊಂಡು ಅಯ್ಯಪ್ಪನಿಗೆ ಧೂಪಾರತಿ ಮಾಡಿ, ಬಾಳೇಹಣ್ಣುಗಳನ್ನು ನೈವೇದ್ಯಕ್ಕೆ ಸಲ್ಲಿಸಿ, ಮಹಾಮಂಗಳಾರತಿ ಮಾಡಿದೆ.
ನಂತರ ಗಣೇಶ, ಅಯ್ಯಪ್ಪ, ಸುಬ್ರಹ್ಮಣ್ಯರ ಅಷ್ಟೋತ್ತರಗಳನ್ನು ಪಠಿಸಿದೆ. ಕೊನೆಯಲ್ಲಿ ೧೦೮ ಶರಣು ಘೋಷಗಳನ್ನು ಜಪಿಸಿದೆ.
ಪೂಜೆ ಮುಗಿಯುವ ಹೊತ್ತಿಗೆ ಅಮ್ಮ ಭಜನೆಯಿಂದ ಬಂದರು. ಅಣ್ಣ(ಅಪ್ಪ) ಕೂಡ ವಾಕಿಂಗ್ ಮುಗಿಸಿ ಮನೆಗೆ ಬಂದರು. ಕಾಫಿ ಕುಡಿಯುತ್ತಾ ಅಯ್ಯಪ್ಪನ ಭಕ್ತಿಗೀತೆಗಳನ್ನು ಕೇಳಿದೆ.
ರಾತ್ರಿ ೯.೩೦ಕ್ಕೆ ಅಕ್ಕಿ ರೊಟ್ಟಿ ಸೇವಿಸಿದೆ. ರಾತ್ರಿ ಊಟ ಮಾಡುವ ಹಾಗಿಲ್ಲ.
ಇನ್ನು ಹದಿನೈದು ದಿನಗಳ ಕಾಲ ಎರಡು ಹೊತ್ತು ಸಂಧ್ಯಾವಂದನೆ ಮಾಡಬೇಕು. ಎರಡು ಹೊತ್ತು ದೇವರಿಗೆ ನೈವೇದ್ಯ ಸಲ್ಲಿಸಬೇಕು. ಬೆಳಿಗ್ಗೆ ಮತ್ತು ರಾತ್ರಿ ತಿಂಡಿ ತಿನ್ನಬೇಕು, ಮಧ್ಯಾಹ್ನ ಮಾತ್ರ ಊಟ ಮಾಡಬೇಕು.
ಹೊರಗಡೆ ಏನೂ ಸೇವಿಸಬಾರದು.
ತುಂಬಾ ನಿಷ್ಠೆಯಿಂದ ವ್ರತವನ್ನು ಆಚರಿಸಬೇಕು ಅಂತ ರಾಘು ಅವರ ತಂದೆ ಕಟ್ಟಪ್ಪಣೆ ಮಾಡಿರುವರು.
ನಾನು ಸಂಧ್ಯಾವಂದನೆಯನ್ನು ದಿನವೂ ಮಾಡೋದ್ರಿಂದ ಭಜನೆಯನ್ನು ಮನೆಯಲ್ಲೇ ಮಾಡಬಹುದಂತೆ.
ನಾನು ಫೆಬ್ರುವರಿ ೧೪ರಂದು ಶಬರಿಮಲೆಗೆ ಹೊರಟು, ಫೆಬ್ರುವರಿ ೧೮ರಂದು ಬೆಂಗಳೂರಿಗೆ ಹಿಂದಿರುಗುವೆ.
ನನ್ನ ಜೊತೆಗೆ ಇನ್ನೂ ಐದು ಜನ ಸೇರ್ಕೋತಾರೆ. ಅವರಲ್ಲಿ ಒಬ್ಬರು ಗುರುಸ್ವಾಮಿಗಳು. ಮತ್ತೊಬ್ಬರು ರಾಘು ಅವರ ತಂದೆ.
ಸ್ವಾಮಿಯೇ ಶರಣಂ ಅಯ್ಯಪ್ಪ.
-ಅನಿಲ್.
ಅನಿಲ್,
ReplyDeleteಅಯ್ಯಪ್ಪ ನಿಮ್ಮ ಭಕ್ತಿಗೆ ಖಂಡಿತ ನಿಮಗೇನು ಬೇಕೊ ಅದನ್ನು ಕೊಡುತ್ತಾನೆ....ಅಂದಹಾಗೆ ನಮ್ಮ ಇರುವುದು ಶ್ರೀರಾಮಪುರದ ಅಯ್ಯಪ್ಪ ದೇವಸ್ಥಾನದ ಹತ್ತಿರ ಮಲ್ಲೇಶ್ವರಂ ರೈಲ್ವೇ ನಿಲ್ಡಾಣದ ಬಳೀ.....
ಅನಿಲ್ ಕನ್ನಿ ಸ್ವಾಮಿಯವರಿಗೆ ನಮಸ್ಕಾರ.ಮೊದಲ ಸಲ ಶಬರಿಮಲೆಗೆ ಹೋಗುವವರನ್ನ ಕನ್ನಿ ಸ್ವಾಮಿ ಅಂತ ಕರೀತಾರಲ್ವಾ?
ReplyDeleteಶಿವು,
ReplyDeleteಪ್ರತಿಕ್ರಿಯೆಗೆ ತುಂಬಾ ಧನ್ಯವಾದ.
>>ನಮ್ಮ ಇರುವುದು ಶ್ರೀರಾಮಪುರದ ಅಯ್ಯಪ್ಪ ದೇವಸ್ಥಾನದ ಹತ್ತಿರ ಮಲ್ಲೇಶ್ವರಂ ರೈಲ್ವೇ ನಿಲ್ಡಾಣದ ಬಳೀ.....
ಓಹ್!!! ಹೌದಾ?
ನಮ್ಮ ಮನೆ ಇರೋದು ನಾಗರಭಾವಿಯಲ್ಲಿ.
ಶಬರಿಮಲೆಯಿಂದ ಬಂದ ಮೇಲೆ ಭೇಟಿಯಾಗೋಣ.
-ಸ್ವಾಮಿ ಶರಣಂ.
ಉಷಾ,
ReplyDeleteಪ್ರತಿಕ್ರಿಯೆಗೆ ತುಂಬಾ ಧನ್ಯವಾದ.
>>ಮೊದಲ ಸಲ ಶಬರಿಮಲೆಗೆ ಹೋಗುವವರನ್ನ ಕನ್ನಿ ಸ್ವಾಮಿ ಅಂತ ಕರೀತಾರಲ್ವಾ?
ಸಧ್ಯ, ಕನ್ನಿಂಗ್ ಸ್ವಾಮಿ ಅಂತ ಹೇಳ್ಲಿಲ್ವಲ್ಲ. :)
-ಸ್ವಾಮಿ ಶರಣಂ.
ಅನಿಲ್,
ReplyDeleteನಿಮ್ಮ ಶಬರಿಮಲೆ ಪ್ರಯಾಣ ಶುಭವಾಗಿ ನೆರವೇರಲಿ.
ಬಾಲ,
ReplyDeleteತುಂಬಾ ಧನ್ಯವಾದಗಳು.
-ಸ್ವಾಮಿ ಶರಣಂ.