My Blog List

Tuesday, April 07, 2009

ಮರೆಯದ ಹಾಡು

ನಿನ್ನೆ ಬೆಳಿಗ್ಗೆ ಆಫೀಸಿಗೆ ಕಾರಿನಲ್ಲಿ ಹೋಗುತ್ತಿರುವಾಗ ಎಫ್ ಎಮ್ ಕಾಮನಬಿಲ್ಲು ೧೦೧.೩ರಲ್ಲಿ ಬರುವ ಚಿತ್ರಗೀತೆಗಳನ್ನು ಕೇಳ್ತಿದ್ದೆ.

ಅದರಲ್ಲಿ ಒಂದು ಹಾಡು ಬರ್ತಿತ್ತು. ಈ ಹಾಡು ಕೇಳಿ ಬಹಳ ದಿನಗಳಾಗಿದ್ದವು. ಈ ಹಾಡು ಬಂದೊಡನೆಯೇ Volume ಜೋರು ಮಾಡಿದೆ.
ಈ ಹಾಡನ್ನು ಕೇಳ್ತಿದ್ರೆ ಕೇಳ್ತಾನೇ ಇರ್ಬೇಕು ಅಂತ ಅನ್ಸುತ್ತೆ. ಅಷ್ಟು ಚೆನ್ನಾಗಿದೆ ಈ ಹಾಡು. ಯಾವುದೋ ಲೋಕಕ್ಕೆ ಕರೆದೊಯ್ಯುವ ಶಕ್ತಿ ಈ ಹಾಡಿಗಿದೆ.

ಜಿ. ಕೆ. ವೆಂಕಟೇಶ್ ಅವರ ಸಂಗೀತ ತುಂಬಾ ಇಂಪಾಗಿದೆ.
ಆರ್. ಎನ್. ಜಯಗೋಪಾಲ್ ಅವರ ಸಾಹಿತ್ಯ ಕೂಡ ತುಂಬಾ ಚೆನ್ನಾಗಿದೆ.
ಎಸ್. ಜಾನಕಿ ಅವರ ಗಾಯನ ಸುಮಧುರವಾಗಿದೆ.

ನಿನ್ನೆಯಿಂದ ಈ ಹಾಡನ್ನು ಗುನುಗುತ್ತಿರುವೆ.
ಯಾವ ಹಾಡು ಅಂತ ಯೋಚನೆ ಮಾಡ್ತಿದ್ದೀರಾ?

ಚಿತ್ರ: ಮರೆಯದ ಹಾಡು
ಸಂಗೀತ: ಜಿ. ಕೆ. ವೆಂಕಟೇಶ್
ಸಾಹಿತ್ಯ: ಆರ್. ಎನ್. ಜಯಗೋಪಾಲ್

ಹಾಡಿನ ಸಾಹಿತ್ಯ ಕೆಳಗೆ ಬರೆದಿರುವೆ.

||ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ|
||ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ..||

||ಸ್ವರವೇಳು ಕಲೆತ ರಾಗ ಸ೦ಪೂರ್ಣ ಜೀವರಾಗ|
||ಉಸಿರೆರಡು ಬೆರೆತ ವೇಗ ಅನುರಾಗ ಭಾವಯೋಗ||
||ಜನುಮ ಜನುಮದಾ ಬ೦ಧಾ ಅನುಬ೦ಧಾ ನಮ್ಮದೂ|
||ತಪಸಿನಾ ಫಲವಿದೂ ದೈವದಾ ವರವಿದೂ ಆ..ಆ..||೧||

||ಶೃತಿಲಯದ ಮಿಲನದಲ್ಲೇ ದೈವೀಕನಾದ ಲೀಲೆ|
||ಸತಿಪತಿಯ ಒಲವಿನಲ್ಲೇ ಸ೦ಸಾರ ನೌಕೆ ತೇಲೆ||
||ನೆನಪಿನ ತೋಟದ ಮಲ್ಲೇ ಹೂ ಮಾಲೆ|
||ಎ೦ದಿಗೂ ಬಾಡದಾ ಹೂವಿದು ಮುಗಿಯದಾ ಹಾಡಿದು ಆ..ಆ..||೨||

||ಸವಿ ಮುರಳಿ ಕರೆದ ವೇಳೆ ಆ ರಾಧೆ ಓಡಿದ೦ತೆ|
||ಮಾಧವನ ನೆನಪಿನಲ್ಲೇ ಆ ಮೀರಾ ಹಾಡಿದ೦ತೆ||
||ನಿನ್ನೊಲವಿನಲ್ಲೆ ಮಿ೦ದೂ ನಾನಿ೦ದೂ|
||ಹಾಡುವೇ ನನ್ನನೇ ಮರೆಯುವೇ ನಿಮ್ಮಲೇ ಬೆರೆಯುವೆ ಆ..ಆ..||೩||

ಈ ಹಾಡು ನಿಮಗೂ ಇಷ್ಟವಾಗಬಹುದು ಎಂದು ತಿಳಿದು ಹಾಡಿನ ಸಾಹಿತ್ಯವನ್ನು ಇಲ್ಲಿ ಪೋಸ್ಟ್ ಮಾಡಿದ್ದೀನಿ.

7 comments:

  1. ತುಂಬಾ ಇಂಪಾದ ಮತ್ತು ನನ್ನ ಮೆಚ್ಚಿನ ಹಾಡು, ಹಾಡಿನ ಸಾಹಿತ್ಯ ತಿಳಿಸಿದ್ದಕ್ಕೆ ಧನ್ಯವಾದಗಳು.

    ಬಾಲ

    ReplyDelete
  2. ರಮೇಶ್...

    ತುಂಬಾ ಸುಂದರವಾದ ಹಾಡು...
    ಪೂರ್ತಿಯಾಗಿ ಗೊತ್ತಿಲ್ಲವಾಗಿತ್ತು...

    ಹಳೆಯ ಕನ್ನಡ ಹಾಡುಗಳು ಯಾವ ವೆಬ್ ಸೈಟಿನಲ್ಲಿ ಸಿಗುತ್ತದೆ...?
    ಗೊತ್ತಿದ್ದರೆ ತಿಳಿಸುವಿರಾ...?

    ಮತ್ತೊಮ್ಮೆ ಹಾಡನ್ನು ಗುನುಗಿಸಿದ್ದಕ್ಕೆ..
    ಧನ್ಯವಾದಗಳು

    ReplyDelete
  3. ಬಾಲ,
    ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.
    ಈ ಹಾಡು ನಿಮಗೂ ಇಷ್ಟವಾದದ್ದು ಎಂದು ತಿಳಿದು ಖುಷಿ ಆಯ್ತು. :)

    ಪ್ರಕಾಶ್,
    ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.
    ಹಾಡುಗಳ ಸಾಹಿತ್ಯ ಬೇಕಾದಲ್ಲಿ kannadalyrics.comಗೆ ಭೇಟಿ ಕೊಡಿ.

    -ಅನಿಲ್.

    ReplyDelete
  4. ಅನಿಲ್,

    ನಿಜಕ್ಕೂ ತುಂಬಾ ಮಧುರವಾದ ಹಾಡು. ಕೇಳುತ್ತಿದ್ದರೆ ಮೈಮರೆಯುವಂತಾಗುತ್ತದೆ...ಹಾಡಿನ ಸಾಹಿತ್ಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು...

    ReplyDelete
  5. ಶಿವು,
    ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್.

    ಹಾಡಿನ ಚರಣಗಳಲ್ಲಿ ಬರುವ ಆಲಾಪ ನನಗೆ ತುಂಬಾ ಇಷ್ಟ.

    ಜಿ. ಕೆ. ವೆಂಕಟೇಶ್ ಅವರ ಸಂಗೀತ ಅಂದ್ರೆ ಸುಮ್ಮನೆನಾ?
    ಹಾಡಿನ ಸ್ವರ ಸಂಯೋಜನೆ ಅಂತೂ ಸೂಪರ್‍.

    ReplyDelete
  6. ನನ್ನ ಇಷ್ಟವಾದ ಹಾಡಲ್ಲಿ ಇದೊಂದು. ಅಂತರ್ಜಾಲದಲ್ಲಿ ಎಲ್ಲೂ ಸಿಗಲಿಲ್ಲ. ನನ್ನ ಸಹುದ್ಯೋಗಿಯೊಬ್ಬರು ಮರೆಯದಹಾಡು ಚಲನಚಿತ್ರದ ಕ್ಯಾಸೆಟನ್ನು ಕೊಟ್ಟರು. ಅದರಿಂದ ಎಮ್ಪಿ೩ ಗೆ ಮಾಡಲಾಯಿತು.

    ReplyDelete
  7. ಇದೇ ಚಿತ್ರದಲ್ಲಿ ಭುವನೇಶ್ವರಿಯ ನೆನೆಮಾನಸವೇ ಅನ್ನೋ ಹಾಡನ್ನು ಕೂಡ ಎಸ್. ಜಾನಕಿಯವರು ಅದ್ಭುತವಾಗಿ ಹಾಡಿದ್ದಾರೆ.

    ReplyDelete