My Blog List

Wednesday, April 29, 2009

ಮರಗಳ ಮಧ್ಯದಿಂದ ಇಣುಕುತ್ತಿರುವ ರವಿ.

ರವಿ.

ಈ ಚಿತ್ರವನ್ನು ಸೆರೆಹಿಡಿದದ್ದು ಬಂಡಿಪುರದ ಬಳಿ.

ಈ ಚಿತ್ರಕ್ಕೆ ಹೊಂದುವಂತಹ ಕವನ/ ಕತೆ(ಥೆ)/ ಚುಟುಕ ಏನಾದರೂ ಬರೆಯಿರಿ.


4 comments:

  1. ಫೋಟೋಗ್ರಫಿ ಬಗ್ಗೆ ತಾ೦ತ್ರಿಕವಾಗಿ ಹೇಳುವಷ್ಟು ನನಗೆ ಗೊತ್ತಿಲ್ಲ, ಆದರೆ ಕತ್ತಲು ಬೆಳಕಿನ ಆಟ ಈ ಛಾಯಾಚಿತ್ರ ದಲ್ಲಿ ಚೆನ್ನಾಗಿ ಮೂಡಿಬ೦ದಿದೆ. ಚುಟುಕು ಕವಿತೆ ನಾನೇ ಬರೆಯುವೆ ಆಗದೆ ?? ಚೆನ್ನಾಗಿದೆ.

    ReplyDelete
  2. ಒಂದು ಚುಟುಕು ಕವನ ಬರೆದೇ ಬಿಟ್ಟೆ ನಿಮ್ಮ ಛಾಯಾಚಿತ್ರ ನೋಡಿ, ಅದು ಹೀಗಿದೆ ನೋಡಿ, ಓದಿ ಹೇಗಿದೆ ಹೇಳಿ:-

    ತರುಲತೆಗಳೆಡೆಯಿ೦ದ ಹಸಿರೆಲೆಯ ನಡುವಿ೦ದ
    ರವಿಕಿರಣ ಧರೆಯೆಡೆಗೆ ತೂರಿ ಬ೦ದಿಹುದು
    ವನವೆಲ್ಲ ಪಸರಿಸುತ ಬಿಸಿಲಬಾಣದ ಹೊಳಪು
    ತು೦ಬಿಹುದು ಪರಿಸರಕೆ ಚೆ೦ಬೆಳಕ ಒನಪು


    ಮರದ ಮರ್ಮರವನ್ನು ಕೇಳಲೋಸುಗ ಬ೦ದ
    ದೇವದೂತನ ತೆರದಿ ತಮಕಳೆದು ಬೆಳಕತ೦ದ
    ಪೊಟರೆಯಲ್ಲಡಗಿರುವ ಪಕ್ಷಿ ಸ೦ಕುಲಕೆಲ್ಲ
    ಬೆಳಗಿಸುತ ಕಲರವದ ಹೊಸದಿನದ ಸೊಲ್ಲ


    ಎನಿತು ಪ್ರೀತಿಯೋ ನಿನಗೆ ಧರೆಯ ಸ೦ಕುಲದೆಡೆಗೆ
    ದೊರೆ ನೀನು ಭಾಸ್ಕರನೆ ಬೆಳಕೆಮಗೆ ಕೊಡುವೆ
    ನಿತ್ಯ ದಿನಚರಿ ನಿನದು ತಪ್ಪದದು ಎ೦ದೆ೦ದೂ
    ಧನ್ಯತೆಯ ಭಾವದಲಿ ನಮಿಪೆ ನಿನಗಿ೦ದು

    ReplyDelete
  3. ಅನಿಲ್,

    ಫೋಟೋ ತುಂಬಾ ಚೆನ್ನಾಗಿದೆ...ನೆರಳು-ಬೆಳಕಿನ ಹೊಂದಾಣಿಕೆಯಲ್ಲಿ ರವಿಕಿರಣಗಳು...ಕಪ್ಪು-ಬಿಳುಪಿನಲ್ಲಿ ನೋಡುಗನಿಗೆ ಮೂಡ್ ತರಿಸುತ್ತದೆ...

    ಧನ್ಯವಾದಗಳು...

    ReplyDelete
  4. @ಪರಾಂಜಪೆ,
    ಕವನ ಬರೆದಿದ್ದಕ್ಕೆ ತುಂಬಾ ಧನ್ಯವಾದ.
    ಕವನ ಚೆನ್ನಾಗಿದೆ. ಇಷ್ಟ ಆಯ್ತು.

    @ಶಿವು,
    ಚಿತ್ರ ನೋಡಿ, ನಿಮಗೆ ಒಳ್ಳೆ ಮೂಡ್ ಬಂದಿದ್ದಕ್ಕೆ ತುಂಬಾ ಧನ್ಯವಾದ.

    -ಅನಿಲ್

    ReplyDelete