My Blog List
Tuesday, June 30, 2009
ತುತ್ತೂರಿ ಹೂವು.
ಜೂನ್ ೨೬ರ ಬೆಳಿಗ್ಗೆ ಮನೆಯ ಬಳಿ ಈ ಹೂವು ಕಾಣಿಸ್ತು. ಈ ಹೂವು ರಾತ್ರಿ ಅರಳುತ್ತದೆ. ಬೆಳಿಗ್ಗೆ ಬಾಡುತ್ತದೆ. ಈ ಹೂವು ದತುರ ಅಥವಾ ತುತ್ತೂರಿ ಹೂವು.
ಇದಕ್ಕೆ ಉಮ್ಮತ್ತಿ ಹೂವು ಎಂದೂ ಕರೆಯಲಾಗುತ್ತದೆ. ಎಲೆ ಸ್ವಲ್ಪ ಬಿಳಿ ಮಿಶ್ರಿತ ಹಸಿರಿದ್ದರೆ ಬಿಳಿ ಉಮ್ಮತ್ತಿ,ಗಾಡ ಹಸಿರಿದ್ದರೆ ಕರಿ ಉಮ್ಮತ್ತಿ. ಇದರ ಎಲೆಗಳನ್ನು ಗಾಯವಾದಾಗ ಹೊಸಗಿ ಗಾಯದ ಮೇಲೆ ಹಿಂಡುತ್ತಾರೆ. ತಿಪ್ಪೆಗಳ ಮೇಲೆ ಜಾಸ್ತಿ ಬೆಳೆಯುತ್ತದೆ. ದನಕರುಗಳು ಮೇಯುವುದಿಲ್ಲ. ಇದರ ಕಾಯಿ ಮುಳ್ಳುಹೊದಿಕೆಯಿಂದ ಕೂಡಿದ್ದು,ಬಲಿತ ಕಾಯಿಯ ಒಳಗೆ ಕಪ್ಪನೆಯ ಬೀಜಗಳಿರುತ್ತವೆ. ಮುಳ್ಳುಚೆಂಡಿನಂತೆ ಹಸಿರು ಬಣ್ಣದಲ್ಲಿರುತ್ತದೆ. ಇದನ್ನು ಬ್ಯಾಟರಿ ಹೂವು ಎಂದೂ ಕರೀತಾರೆ.
ಹಿಂದಿನ ಕಾಲದಲ್ಲಿ ಇದರ ಬೀಜವನ್ನು ಅರೆದು ರೊಟ್ಟಿ ಹಿಟ್ಟಿನಲ್ಲಿ ಕಲಸಿ ರೊಟ್ಟಿ ಮಾಡಿ ಉಂಡೊ, ಉಣಿಸಿಯೊ ಸಾವನ್ನು ಆಹ್ವಾನಿಸುತ್ತಿದ್ದರಂತೆ.
ಪುರಾತನ ಜಗತ್ತಿನ ಏಳು ಅದ್ಭುತಗಳು.
ಪುರಾತನ ಜಗತ್ತಿನ ಏಳು ಅದ್ಭುತಗಳು.
ಪ್ರಾಚೀನ ಜಗತಿನ ಅದ್ಭುತಗಳನ್ನು ಗುರುತಿಸಿದವರು ಗ್ರೀಕರು. ಅವು ಇದ್ದ ಸ್ಥಳಗಳು ಈಗ ಯೂರೋಪು ಮತ್ತು ಮಧ್ಯ ಪೂರ್ವ ರಾಷ್ಟ್ರಗಳಲ್ಲಿವೆ. ಈ ಅದ್ಭುತಗಳ ಪೈಕಿ ಪಿರಮಿಡ್ ಗಳು ಐದು ಸಾವಿರ ವರ್ಷಗಳ ನಂತರವೂ ತಲೆಯೆತ್ತಿ ನಿಂತಿವೆ. ಪ್ರತಿಯೊಂದು ಅದ್ಭುತ ನಿರ್ಮಾಣದ ಹಿಂದೆ ಮನುಷ್ಯನ ಬುದ್ಧಿಶಕ್ತಿ ಮತ್ತು ಅಪಾರ ಶ್ರಮ ಇದ್ದಿತೆಂಬುದನ್ನು ಮರೆಯಲಾಗದು. ಅವುಗಳ ಬಗ್ಗೆ ಲಭ್ಯವಿದ್ದ ಸಾಹಿತ್ಯ, ದಾಖಲೆಗಳ ಆಧಾರದ ಮೇಲೆ ಅವುಗಳ ಸಂಪೂರ್ಣ ಚಿತ್ರವನ್ನು ಕಲ್ಪಿಸಿಕೊಳ್ಳಲು, ಚಿತ್ರಗಳನ್ನು ರಚಿಸಲು ಪ್ರಯತ್ನಿಸಲಾಗಿದೆ. ಉದಾಹರಣೆಗೆ, ಬ್ಯಾಬಿಲೀನಿಯಾದದಲ್ಲಿ ನಡೆದ ಉತ್ಖನನದ ಸಂದರ್ಭದಲ್ಲಿ ದೊರೆತ ಅವಶೇಷಗಳ ಆಧಾರದ ಮೇಲೆ ಅಲ್ಲಿದ್ದ ಅದ್ಭುತ ಗೋಡೆಯ ಒಂದು ಭಾಗವನ್ನು ಯಥಾವತ್ ನಿರ್ಮಿಸಿ ಬರ್ಲಿನ್ನಿನ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಹಾಗೆಯೇ ಮುಸಲ್ಲೋನನ ಸಮಾಧಿಯ ಭಿತ್ತಿಯಲ್ಲಿದ್ದ ಉಬ್ಬು ಚಿತ್ರಗಳನ್ನು ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಅರ್ತೆಮಿಸ್ ಫಲದೇವತೆಯ ಪ್ರತಿಮೆ ಸಹ ವಸ್ತು ಸಂಗ್ರಹಾಲದಲ್ಲಿದೆ. ಅಲೆಕ್ಸಾಂಡ್ರಿಯಾದ ನಾವೆಗಳಿಗೆ ದಾರಿ ತೋರಿಸುವ ದೀಪಸ್ತಂಭ ಜಗತ್ತಿನಲ್ಲಿ ನಿರ್ಮಿಸಿದ ಮೊತ್ತ ಮೊದಲಿನ ದೀಪ ಸ್ತಂಭವೆಂದು ಹೇಳಲಾಗಿದೆ.
ಪ್ರಾಚೀನ ಕಾಲದಿಂದ ಇಂದಿನವರೆಗೆ ಮನುಷ್ಯ ಅದ್ಭುತವೆನಿಸುವಂಥ ಅನೇಕ ರಚನೆಗಳನ್ನು ನಿರ್ಮಿಸಿದ್ದಾನೆ. ಎಲ್ಲ ಕಾಲಗಳಲ್ಲಿಯೂ ಪ್ರತಿಭಾವಂತರಾದ, ಮಹತ್ವಾಕಾಂಕ್ಷೆಯ ಜನರು ಬದುಕಿದ್ದರು. ಐದು ಸಾವಿರ ವರ್ಷಗಳ್ ಹಿಂದೆ ತಂತ್ರಜ್ಞಾನ ಇಂದಿನಷ್ಟು ಮುಂದುವರೆದಿರಲಿಲ್ಲ. ಆದರೂ ಅಂದಿನ ಕೆಲವು ರಚನೆಗಳು ನಮ್ಮನು ಬೆರಗುಗೊಳಿಸುತ್ತವೆ. ಒಂದು ಶಿಲ್ಪವಾಗಿರಲಿ, ಭವನವಾಗಿರಲಿ, ದೇವಾಲಯವಾಗಿರಲಿ, ಹಲವು ಶತಮಾನಗಳ ನಂತರವೂ ನೋಡಿ ಅಚ್ಚರಿಗೊಳ್ಳುವಂಥದ್ದನ್ನು ಅವರು ರಚಿಸಿದ್ದರು.
ಪುರಾತನ ಜಗತ್ತಿನ ಏಳು ಅದ್ಭುತಗಳು.
೧. ಪಿರಮಿಡ್ ಗಳು - ಗಿಜಾ - ಕ್ರಿ. ಪೂ. ೨೭೦೦-೨೩೦೦.
೨. ಬ್ಯಾಬಿಲೋನಿಯಾದ ಗೋಡೆಗಳು ಮತ್ತು ತೂಗು ಉದ್ಯಾನಗಳು - ಬ್ಯಾಬಿಲೋನಿಯಾ - ಕ್ರಿ. ಪೂ. ಸುಮಾರು ೬೦೦.
೩. ಮುಸಲ್ಲೋನನ ಸಮಾಧಿ - ಹಲಿಕರ್ನಾಸೋಸ್ - ಕ್ರಿ.ಪೂ. ೩೫೧.
೪. ಜ್ಯೂಸ್ ದೇವತೆಯ ಪ್ರತಿಮೆ - ಒಲಿಂಪಿಯ - ಕ್ರಿ. ಪೂ. ಸುಮಾರು ೪೫೬.
೫. ಫಲದೇವತೆ ಅರ್ತೆಮಿಸ್ - ಎಫೆಸೋಸ್ - ಕ್ರಿ. ಪೂ. ಸುಮಾರು ೫೬೦.
೬. ಕಲೋಸಸ್ ಪ್ರತಿಮೆ - ರ್ ಹೋಡ್ಸ್ ದ್ವೀಪ - ಕ್ರಿ. ಪೂ. ಸುಮಾರು ೨೯೨ - ೨೮೦.
೭. ಅಲೆಕ್ಸಾಂಡ್ರಿಯಾದ ದೀಪಸ್ತಂಭ ಅಲೆಕ್ಸಾಂಡ್ರಿಯ - ಕ್ರಿ. ಪೂ. ಸುಮಾರು ೩೩೧.
ಚಿತ್ರ ಕೃಪೆ: ಇಲ್ಲಿಂದ.
(ಸಶೇಷ)
Saturday, June 27, 2009
ಮಾನವ ನಿರ್ಮಿತ ಅದ್ಭುತಗಳು - ೧
ಸುಮಾರು ನೂರು ಮೈಲು ದೂರದ ಭೂಮಿ ಅಗೆದು ಸೂಯೆಜ್ ಕಾಲುವೆ ನಿರ್ಮಿಸುವ ಪ್ರಸ್ತಾಪ ಬಂದಾಗ, ಅದನ್ನು ಕೇಳಿದವರು "ಏನು? ಹಾರೆ ಗುದ್ದಲಿಗಳಿಂದ ನೂರು ಮೈಲು ಕಾಲುವೆ ಅಗೆಯಲು ಸಾಧ್ಯವೇ?" ಎಂದು ಪ್ರತಿಕ್ರಿಯೆ ಸೂಚಿಸಿದರಂತೆ. ಆದರೆ ಇಂದು ಸೂಯೆಜ್ ಕಾಲುವೆಯಲ್ಲಿ ಹಡಗುಗಳು ಸಂಚರಿಸುತ್ತಿವೆ ಎಂದರೆ ಮಾನವ ತನ್ನ ಶ್ರಮದಿಂದ ಕಷ್ಟಸಾಧ್ಯವೆನಿಸುವುದನ್ನೂ ಸಾಧಿಸಬಹುದು ಎಂದು ಸಾಬೀತು ಪಡಿಸಿದ್ದಾನೆ ಎಂದಾಗುತ್ತದೆ ಅಲ್ಲವೇ?
ಹಿಂದಿನದಕ್ಕಿಂತ ದೊಡ್ಡದಾದ ಮತ್ತೊಂದನ್ನು ತಮ್ಮ ಕಾಲದಲ್ಲಿ ನಿರ್ಮಿಸಬೇಕು ಎಂಬ ಮಹತ್ವಾಕಾಂಕ್ಷೆ ಪ್ರಾಯಶಃ ಎಲ್ಲ ಕಾಲದ ಜನರಲ್ಲೂ ಇತ್ತೆಂದು ಹೇಳಬಹುದು. ಹಲವು ಸಾವಿರ ವರ್ಷಗಳ ನಂತರವೂ ನಮ್ಮ ಮಧ್ಯೆ ಉಳಿದಿರುವ, ನಮ್ಮ ಕುತೂಹಲಕ್ಕೂ,, ಅಚ್ಚರಿಗೂ ಕಾರಣವಾಗಿರುವ ಹಲವು ಅದ್ಭುತ ರಚನೆಗಳು ಇದಕ್ಕೆ ಹೇಳಿ ಮಾಡಿಸಿದಂತಿವೆ.
ಇಂದಿನಷ್ಟು ಸೌಲಭ್ಯ, ಸಮಾಚಾರ ವಿನಿಮಯ ಹಾಗೂ ಅಧುನಿಕ ಉಪಕರಣಗಳಿಲ್ಲದಿದ್ದ ಕಾಲದಲ್ಲಿ, ಆಗ ಬಳಕೆಯಲ್ಲಿದ್ದ ಸಾಧಾರಣ ಉಪಕರಣಗಳ ಸಹಾಯದಿಂದಲೇ ಭವ್ಯ ರಚನೆಗಳನ್ನು ನಿರ್ಮಿಸಿದ ಅಂದಿನ ಜನರ ಬಗ್ಗೆ ನಮಗೆ ಮೆಚ್ಚುಗೆಯಾಗುತ್ತದೆ.
ಪಿರಮಿಡ್ ಅಂತಹ ರಚನೆಗಳಲ್ಲಾಗಲಿ, ಇತ್ತೀಚಿನ ಸೂಯೆಜ್ ಮತ್ತು ಪನಾಮ್ ಕಾಲುವೆಗಳಲ್ಲಾಗಿರಲಿ, ಇಂಗ್ಲೀಷ್ ಕಡಲ್ಗಾಲುವೆಯೊಳಗೆ ನಿರ್ಮಿಸಿದ ಚಾನೆಲ್ ಟನಲ್ಲುಗಳಲ್ಲಾಗಿರಲಿ, ಭವ್ಯ ಭವನಗಳಲ್ಲಾಗಿರಲಿ ಮನುಷ್ಯ ತನ್ನ ಶ್ರಮದ ಜೊತೆಗೆ ವೈಜ್ಞಾನಿಕ ಶಿಸ್ತನ್ನೂ ಅಳವಡಿಸಿಕೊಂಡಿದ್ದಾನೆ. ಇಂತಹ ಅದ್ಭುತಗಳನ್ನು ನಿರ್ಮಿಸಲು ಅದು ತಳಹದಿಯಾಗಿದೆ.
ಪುರಾತನ ಜನರಿಗೆ ಇಂದಿನವರಿಗಿರುವ ವೈಜ್ಞಾನಿಕ ಪರಿಕಲ್ಪನೆ ಇಲ್ಲದಿರಬಹುದು. ಆದರೂ ಅವರು ತಮ್ಮ ಅನುಭವಗಳಿಂದ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದರು. ಹಿಂದಿನ ಅದ್ಭುತಗಳಿಂದ ಇಂದಿನ ಗಗನ ಚುಂಬಿಗಳವರೆಗೆ ಮಾನವ ನಿರ್ಮಿತ ಅದ್ಭುತ ರಚನೆಗಳ ನಿರ್ಮಾಣ ಮುಂದುವರೆಯುತ್ತಲೇ ಇದೆ.
(ಸಶೇಷ)
Thursday, June 18, 2009
Thursday, June 11, 2009
ಅಂತರ್ಜಾಲವಿಲ್ಲದೆ...
ಮೇತಿಂಗಳ ಕೊನೆಯ ಶನಿವಾರ ನನ್ನ ಕಂಪ್ಯೂಟರಿನ ಅಂತರ್ಜಾಲ ಸಂಪರ್ಕ ಕಡಿದು ಹೋಯ್ತು. ನೆಟ್-ವರ್ಕ್ ಕಾರ್ಡ್ ಹಾಳಾಗಿತ್ತು.
ಜೂನ್ ಒಂದರಿಂದ ಆಫೀಸ್ ಅಲ್ಲಿ ಕೂಡ ಅಂತರ್ಜಾಲ ಸಂಪರ್ಕ ಕಡಿದು ಹೋಯ್ತು. ಅಂತರ್ಜಾಲ ಒಂದು Addiction.
ಅಂತರ್ಜಾಲ ಇಲ್ಲದಿದ್ದರೆ ಯಾವುದೋ ಬೇರೆ ಊರಿಗೆ ಬಂದ ಹಾಗೆ ಅನ್ಸತ್ತೆ.
ಇದೆಲ್ಲದರ ಮಧ್ಯೆ, ಕೆಲಸದ ಒತ್ತಡ. ಆದರೂ ಇಂದು ಬಿಡುವು ಮಾಡಿಕೊಂಡು ಕಾರನ್ನು ಸರ್ವೀಸ್ ಮಾಡಲು ಸರ್ವೀಸ್ ಸ್ಟೇಷನ್ ಗೆ ಕೊಟ್ಟೆ. ನಂತರ ಆಫೀಸಿನ ಬಳಿ ಇರುವ ಕಂಪ್ಯೂಟರ್ ಹಾರ್ಡ್-ವೇರ್ ಅಂಗಡಿಗೆ ಹೋಗಿ ನೆಟ್-ವರ್ಕ್ ಕಾರ್ಡ್, ಸಿಡಿ ಪೌಚ್, ೫ ಖಾಲಿ ಸಿಡಿ ಮತ್ತು ೫ ಖಾಲಿ ಡಿವಿಡಿಗಳನ್ನು ಕೊಂಡು ಕೊಂಡೆ.
ಮನೆಗೆ ಬಂದು ನೆಟ್-ವರ್ಕ್ ಕಾರ್ಡನ್ನು ಕಂಪ್ಯೂಟರಿಗೆ install ಮಾಡಿದೆ.
ಮನೆಯಲ್ಲಿ ಅಂತರ್ಜಾಲ ಈಗ ಸರಿ ಹೋಗಿದೆ.
-------------------------------------------------------------------------
ಉಬುಂಟು ೯.೦೪ install ಮಾಡಿ ಬರೆದ ಮೊದಲ ಬ್ಲಾಗ್ ಬರಹ.